Malang: ಮಲಂಗ್ ಸಿನಿಮಾದ ಟೈಟಲ್ ಹಾಡಿನಲ್ಲಿ ತುಂಡುಡುಗೆಯಲ್ಲಿ ಮಿಂಚಿದ ದಿಶಾ ..!

Malang Movie: ಈಗಾಗಲೇ ಟ್ರೈಲರ್ ಮೂಲಕವೇ ಮಲಂಗ್ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಡುಗಳಂತೂ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿಬಂದಿದ್ದು, ವೈರಲ್ ಆಗಿವೆ. ಅದರಲ್ಲೂ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಲ್ಲಿ ಮಲಂಗ್​ ಮಲಂಗ್​... ಲಿರಿಕಲ್​ ವಿಡಿಯೋ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Anitha E | news18-kannada
Updated:February 4, 2020, 3:56 PM IST
Malang: ಮಲಂಗ್ ಸಿನಿಮಾದ ಟೈಟಲ್ ಹಾಡಿನಲ್ಲಿ ತುಂಡುಡುಗೆಯಲ್ಲಿ ಮಿಂಚಿದ ದಿಶಾ ..!
ಮಲಂಗ್​ ಚಿತ್ರದ ಪೋಸ್ಟರ್​
  • Share this:
ಮೋಹಿತ್ ಸೂರಿ ನಿರ್ದೇಶನದ ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ 'ಮಲಂಗ್'. ಆದಿತ್ಯ ರಾಯ್ ಕಪೂರ್, ದಿಶಾ ಪಟಾನಿ, ಅನಿಲ್ ಕಪೂರ್, ಕುನಾಲ್ ಖೇಮು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ.

ಈಗಾಗಲೇ ಟ್ರೈಲರ್ ಮೂಲಕವೇ 'ಮಲಂಗ್' ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಹಾಡುಗಳಂತೂ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿಬಂದಿದ್ದು, ವೈರಲ್ ಆಗಿವೆ. ಅದರಲ್ಲೂ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಲ್ಲಿ 'ಮಲಂಗ್​ ಮಲಂಗ್​...' ಲಿರಿಕಲ್​ ವಿಡಿಯೋ ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ.'ಫಿರ್​ ನಾ ಮಿಲೇ ಕಭಿ... 'ಹಾಡು ಸಹ ನೋಡುಗರಿಗೆ ಹಾಗೂ ಕೇಳುಗರಿಗೆ ಇಷ್ಟವಾಗಿದೆ. ಸ್ಲೋ ಬೀಟ್​ ಹಾಡು ಇದಾಗಿದೆ.ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿದ್ದು, ದಿಶಾ ಪಟಾನಿ ಮಾದಕವಾಗಿ ಮಿಂಚಿದ್ದಾರೆ. ಈ ಹಾಡು ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ 11ನೇ ಸ್ಥಾನದಲ್ಲಿದೆ. ಅಸೀಸ್ ಕೌರ್ ಧ್ವನಿಯಾಗಿರುವ ಈ ಹಾಡುಕೂಡ ಸದ್ಯ ಸಖತ್ ಸದ್ದು ಮಾಡುತ್ತಿದೆ.

ಸಿನಿಮಾ ಟ್ರೈಲರ್ ಹಾಗೂ ಹಾಡುಗಳನ್ನು ನೋಡಿದರೆ ಇದೊಂದು ಭಗ್ನಪ್ರೇಮಿಯ ಪಾತ್ರದಲ್ಲಿ ಮತ್ತೆ ಆದಿತ್ಯ ರಾಯ್​ ಕಪೂರ್​ ಮಿಂಚಿದ್ದಾರೆ. ಇನ್ನು ದಿಶಾ ಮತ್ತೆ ಈ ಸಿನಿಮಾದಲ್ಲೂ ಬಿಕಿನಿ ತೊಟ್ಟು ಸಖತ್​ ಹಾಟಾಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ  'ಮಲಂಗ್' ಇದೇ ಶುಕ್ರವಾರ ತೆರೆಗೆ ಬರಲಿದೆ. 'ಆಶಿಕಿ 2' ನಂತರ ಆದಿತ್ಯ ಅಭಿನಯದ 'ಮಲಂಗ್​' ಮ್ಯೂಸಿಕಲ್​ ಹಿಟ್​ ಆಗಲಿದೆ ಎನ್ನಬಹುದು.

Sudha Murthy-Narayana Murthy Biopic: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಸೆಟ್ಟೇರಲಿದೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ಜೀವನಾಧಾರಿತ ಸಿನಿಮಾ ..!

First published: February 4, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading