• Home
  • »
  • News
  • »
  • entertainment
  • »
  • Shah Rukh Khan: ಮೈಮೇಲೆ ಬಂದು ಬೀಳ್ತಿದ್ರು ಸುಂದರಿಯರು! ಶಾರುಖ್ ಆ ಪಾರ್ಟಿಯಲ್ಲಿ ಏನ್ ಮಾಡಿದ್ರು?

Shah Rukh Khan: ಮೈಮೇಲೆ ಬಂದು ಬೀಳ್ತಿದ್ರು ಸುಂದರಿಯರು! ಶಾರುಖ್ ಆ ಪಾರ್ಟಿಯಲ್ಲಿ ಏನ್ ಮಾಡಿದ್ರು?

ಶಾರುಖ್ ಖಾನ್​

ಶಾರುಖ್ ಖಾನ್​

ಬೆಂಗಳೂರಿನ ಹೋಟೆಲೊಂದರಲ್ಲಿ ಒಂದು ರ್‍ಯಾಪ್-ಅಪ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆ ಕ್ಲಬ್ ನಲ್ಲಿ ಅನೇಕ ಸುಂದರ ಯುವತಿಯರಿದ್ದರು. ಆ ಯುವತಿಯರು ಶಾರುಖ್ ಅವರೊಂದಿಗೆ ಡ್ಯಾನ್ಸ್ ಮಾಡಲು ಬಯಸಿ ಮೈ ಮೇಲೆ ಬೀಳುತ್ತಿದ್ದರು.

  • Trending Desk
  • Last Updated :
  • Bangalore, India
  • Share this:

ಬಾಲಿವುಡ್ ನ (Bollywood) ಬಾದ್ ಶಾ ಅಂತಾನೆ ಖ್ಯಾತಿ ಪಡೆದಿರುವ ಶಾರುಖ್ ಖಾನ್ (Shah Rukh Khan) ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರೂ ಸಹ ಇವತ್ತಿಗೂ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ (Shooting Set) ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರೋರು. ಹೌದು. ಶಾರುಖ್ ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರೂ ಸಹ ಜನರೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳುವ ನಟ. 1997 ರಲ್ಲಿ ಶಾರುಖ್ ಅಭಿನಯದ ಚಿತ್ರವೊಂದು ದೊಡ್ಡ ಹಿಟ್ ಆಗಿತ್ತು. ‘ಪರದೇಸ್’ ಚಿತ್ರ ಬಿಗ್ ಹಿಟ್. ಈ ಚಿತ್ರದಲ್ಲಿ ಶಾರುಖ್ ಜೊತೆಗೆ ನಟಿಸಿದ್ದ ಗಾಯಕ ಮತ್ತು ನಿರೂಪಕರಾದ ಆದಿತ್ಯ ನಾರಾಯಣ್ (Aditya Narayan) ಅವರು ಬೆಂಗಳೂರಿನ (Bengaluru) ಹೋಟೆಲ್ ನಲ್ಲಿ ಚಿತ್ರದ ರ್‍ಯಾಪ್-ಅಪ್ ಪಾರ್ಟಿಯ ಸಮಯದಲ್ಲಿ ನಡೆದ ಒಂದು ಘಟನೆಯ ಬಗ್ಗೆ ಮಾತನಾಡಿದ್ದಾರೆ.


ಆದಿತ್ಯ ನಾರಾಯಣ್ ಅವರು ಘಟನೆಯ ಬಗ್ಗೆ ಏನ್ ಹೇಳಿದ್ರು?


ಹೊಸ ಸಂದರ್ಶನವೊಂದರಲ್ಲಿ, ಆದಿತ್ಯ ಅವರು ಶಾರುಖ್ ಖಾನ್ ಅವರೊಂದಿಗೆ ಡ್ಯಾನ್ಸ್ ಮಾಡುತ್ತಿದ್ದಾಗ ನಡೆದ ಒಂದು ಘಟನೆಯ ಬಗ್ಗೆ ಆದಿತ್ಯ ನೆನಪಿಸಿಕೊಂಡರು.
ಶಾರೂಖ್ ಮೈಮೇಲೆ ಬಂದು ಬೀಳುತ್ತಿದ್ದರು ಯುವತಿಯರು


ಅದು ಚಿತ್ರೀಕರಣದ ಪ್ಯಾಕ್-ಅಪ್ ನ ರಾತ್ರಿ ಎಂದು ನನಗೆ ಸ್ಪಷ್ಟವಾಗಿ ನೆನಪಿದೆ. ನಾವು ಮೈಸೂರಿನಲ್ಲಿದ್ದೆವು. ಬೆಂಗಳೂರಿನ ಹೋಟೆಲೊಂದರಲ್ಲಿ ಒಂದು ರ್‍ಯಾಪ್-ಅಪ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಆ ಕ್ಲಬ್ ನಲ್ಲಿ ಅನೇಕ ಸುಂದರ ಯುವತಿಯರಿದ್ದರು. ನಾನು ಮತ್ತು ಶಾರುಖ್ ಡ್ಯಾನ್ಸ್ ಮಾಡುತ್ತಿದ್ದೆವು. ಆ ಯುವತಿಯರು ಶಾರುಖ್ ಅವರೊಂದಿಗೆ ಡ್ಯಾನ್ಸ್ ಮಾಡಲು ಬಯಸಿ ಮೈ ಮೇಲೆ ಬೀಳುತ್ತಿದ್ದರು. ಆದರೆ ಶಾರುಖ್ ಮಾತ್ರ ಅವರನ್ನು ಹಾಗೆಯೇ ಸರಳವಾಗಿ ನಿರ್ಲಕ್ಷಿಸಿದರು. ನನ್ನೊಂದಿಗೆ ಡ್ಯಾನ್ಸ್ ಹಾಗೆಯೇ ಮುಂದುವರಿಸಿದರು ಎಂದಿದ್ದಾರೆ.


Superstar Shah Rukh Khan Once Said He will Tear His Clothes If Gauri Leaves Him stg asp
ಶಾರುಖ್ ಖಾನ್ ಮತ್ತು ಗೌರಿ ಖಾನ್


ನಾವಿಬ್ಬರೂ ಕೆಲವು ಗಂಟೆಗಳ ಕಾಲ ಡ್ಯಾನ್ಸ್ ಮಾಡಿರಬೇಕು, ‘ಪರದೇಸ್’ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ನಡೆದ ಅನೇಕ ಘಟನೆಗಳು ನನ್ನ ಮನಸ್ಸಿನಲ್ಲಿ ಪ್ರೀತಿಯ ನೆನಪುಗಳಾಗಿ ಉಳಿದಿವೆ" ಎಂದು ಹೇಳಿದರು.


ಶಾರುಖ್ ವ್ಯಕ್ತಿತ್ವ ಎಂತಹದ್ದು ಗೊತ್ತೇ?


ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಆದಿತ್ಯ ಅವರು “ನಾವು ‘ಪರದೇಸ್’ ಚಿತ್ರದಲ್ಲಿ ಕೆಲಸ ಮಾಡುವಾಗ ಶಾ ಭಾಯ್ ಆಗಲೇ ಸೂಪರ್ ಸ್ಟಾರ್ ಆಗಿದ್ದರು. ಅವರು ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿಯೂ ಸಹ ನಿರತರಾಗಿದ್ದರು, ಅವರು ಸೆಟ್ ಗೆ ಬರುತ್ತಿದ್ದರು, ವ್ಯಾನಿಟಿ ವ್ಯಾನ್ ಸಿದ್ಧವಾಗಿರುತ್ತಿರಲಿಲ್ಲ ಎಂದು ನನಗೆ ನೆನಪಿದೆ.


ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ಗೆ ಬಾದ್ ಷಾ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್​ ಕಹಾನಿ


ಅವರು ಅಲ್ಲಿಯೇ ಇದ್ದ ಒಂದು ಕೋಣೆಯ ಒಂದು ಮೂಲೆಯನ್ನು ಆರಿಸಿಕೊಂಡು ತಮ್ಮ ಬ್ಯಾಗ್ ಅನ್ನು ದಿಂಬಿನಂತೆ ಇಟ್ಟುಕೊಂಡು, ನೆಲದ ಮೇಲೆ ಮಲಗುತ್ತಿದ್ದರು. ಅವರು ತಮ್ಮ ಕೆಲಸದ ಬಗ್ಗೆ ತುಂಬಾನೇ ಬದ್ಧತೆ ಇರುವ ವ್ಯಕ್ತಿ. ಯಾರ ಬಗ್ಗೆಯೂ ದೂರುಗಳನ್ನು ಹೇಳದೇ, ಅಹಂಕಾರವಿಲ್ಲದೇ ಇರುವ ವ್ಯಕ್ತಿತ್ವ ಅವರದು" ಎಂದು ಹೇಳಿದರು.


‘ಪರದೇಸ್’ ಚಿತ್ರದಲ್ಲಿ ಆದಿತ್ಯ ‘ಪೋಟ್ಲಾ’ ಎಂಬ ಪುಟ್ಟ ಹುಡುಗನ ಪಾತ್ರ ಮಾಡಿದ್ದರಂತೆ!


ಸುಭಾಷ್ ಘಾಯ್ ನಿರ್ದೇಶಿಸಿದ ‘ಪರದೇಸ್’ ಚಿತ್ರದಲ್ಲಿ ಶಾರುಖ್ ಮತ್ತು ಆದಿತ್ಯ ಅವರ ಜೊತೆಗೆ ನಟಿ ಮಹಿಮಾ ಚೌಧರಿ, ಅಪೂರ್ವ ಅಗ್ನಿಹೋತ್ರಿ, ಹಿರಿಯ ನಟರಾದ ಅಲೋಕ್ ನಾಥ್, ಅಮರೀಶ್ ಪುರಿ ಮತ್ತು ಹಿಮಾನಿ ಶಿವಪುರಿ ಸಹ ಈ ನಟಿಸಿದ್ದರು. ಶಾರುಖ್ ಅವರು ಅರ್ಜುನ್ ಸಾಗರ್ ಪಾತ್ರವನ್ನು ನಿರ್ವಹಿಸಿದರೆ, ಆದಿತ್ಯ ಚಿತ್ರದಲ್ಲಿ ನಟಿಸಿದ್ದ ಮಕ್ಕಳಲ್ಲೊಬ್ಬರಾದ ಪೋಟ್ಲಾ ಎಂಬ ಪುಟ್ಟ ಹುಡುಗನ ಪಾತ್ರವನ್ನು ನಿರ್ವಹಿಸಿದ್ದರು.


ಇದನ್ನೂ ಓದಿ: Shah Rukh Khan Birthday: ಬಾಲಿವುಡ್‌ ಕಿಂಗ್ ಖಾನ್‌ಗೆ 54ರ ಹರೆಯ, ಸಿಕ್ಸ್ ಪ್ಯಾಕ್‌ನಲ್ಲಿ ಈಗಲೂ ಮೋಡಿ ಮಾಡ್ತಾರೆ ಶಾರುಖ್!


ಶಾರುಖ್ ಕೊನೆಯದಾಗಿ ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಅವರೊಂದಿಗೆ ಝೀರೋ (2018) ಚಿತ್ರದಲ್ಲಿ ಕಾಣಿಸಿಕೊಂಡರು. ಶಾರುಖ್ ಅಭಿನಯದ ಸ್ಪೈ ಥ್ರಿಲ್ಲರ್ ‘ಪಠಾನ್’, ಅಟ್ಲೀ ಅವರ ‘ಜವಾನ್’ ಮತ್ತು ರಾಜ್ ಕುಮಾರ್ ಹಿರಾನಿ ಅವರ ‘ಡಂಕಿ’ ಚಿತ್ರಗಳು ಮುಂದಿನ ವರ್ಷ ಬಿಡುಗಡೆಯಾಗಲಿವೆ.

Published by:Divya D
First published: