HOME » NEWS » Entertainment » ADITI PRABHUDEVA TO ROMANCE WITH GANESH IN TRIBBLE RIDING MOVIE RMD

Aditi Prabhudeva: ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ತ್ರಿಬಲ್​ ರೈಡಿಂಗ್​ ಹೊರಟ ಅದಿತಿ ಪ್ರಭುದೇವ

ಸಿನಿಮಾ ಶೂಟಿಂಗ್​ ಒಪ್ಪಿಗೆ ಸಿಗುತ್ತಿದ್ದಂತೆ ನಟಿ ಅದಿತಿ ಪ್ರಭುದೇವ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋಕೆ ಆರಂಭಿಸಿದ್ದರು. ಅಷ್ಟೇ ಅಲ್ಲ ಸಾಲು ಸಾಲು ಚಿತ್ರಗಳನ್ನು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದರು.

news18-kannada
Updated:November 10, 2020, 12:38 PM IST
Aditi Prabhudeva: ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ತ್ರಿಬಲ್​ ರೈಡಿಂಗ್​ ಹೊರಟ ಅದಿತಿ ಪ್ರಭುದೇವ
ಗಣೇಶ್​-ಅದಿತಿ ಪ್ರಭುದೇವ
  • Share this:
ಲಾಕ್​ಡೌನ್​ ನಂತರದಲ್ಲಿ ಸಾಕಷ್ಟು ಆಕ್ಟಿವ್​ ಆಗಿರುವ ನಟಿ ಅದಿತಿ ಪ್ರಭುದೇವ್​ ಗೋಲ್ಡನ್​ ಸ್ಟಾರ್​ ಗಣೇಶ್​ ಜೊತೆ ತ್ರಿಬಲ್​ ರೈಡಿಂಗ್​ ಹೊರಟಿದ್ದಾರೆ! ಅರೆ, ಗಣೇಶ್​ ಜೊತೆ ಅದಿತಿ ತ್ರಿಬಲ್​ ರೈಡಿಂಗ್​ ಹೊರಟಿದ್ದೇಕೆ ಎನ್ನುವ ಪ್ರಶ್ನೆ ನಿಮ್ಮದೇ? ಅದಕ್ಕೆ ಇಲ್ಲಿದೆ ಉತ್ತರ. ಗಣೇಶ್​ ನಟನೆ ಮಾಡುತ್ತಿರುವ ತ್ರಿಬಲ್​ ರೈಡಿಂಗ್ ಸಿನಿಮಾಗೆ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ಇದೇ ಮೊದಲ ಬಾರಿಗೆ ಈ ಜೋಡಿ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದೆ.

ಸಿನಿಮಾ ಶೂಟಿಂಗ್​ ಒಪ್ಪಿಗೆ ಸಿಗುತ್ತಿದ್ದಂತೆ ನಟಿ ಅದಿತಿ ಪ್ರಭುದೇವ ಚಿತ್ರೀಕರಣದಲ್ಲಿ ಪಾಲ್ಗೊಳ್ಳೋಕೆ ಆರಂಭಿಸಿದ್ದರು. ಅಷ್ಟೇ ಅಲ್ಲ ಸಾಲು ಸಾಲು ಚಿತ್ರಗಳನ್ನು ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದರು. ಈಗ ಅವರು ಗಣೇಶ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಮತ್ತಷ್ಟು ಖುಷಿ ನೀಡಿದೆ.

ಇದೊಂದು ಕಾಮಿಡಿ ಎಂಟರ್​ಟೇನರ್​ ಚಿತ್ರವಾಗಿದ್ದು, ನಿರ್ದೇಶಕ ಮಹೇಶ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಗಣೇಶ್​ ಸಿನಿಮಾಗಳು ಬಹುತೇಕವಾಗಿ ಫ್ಯಾಮಿಲಿ ಎಂಟರ್​ಟೇನ್​​ಮೆಂಟ್​ ಆಗಿರುತ್ತವೆ. ಈ ಚಿತ್ರ ಕೂಡ ಅದೇ ಮಾದರಿಯಲ್ಲಿ ಇರಲಿದೆ. ಈ ಸಿನಿಮಾದಲ್ಲಿ ಎರಡು ನಾಯಕಿಯರು ಇರಲಿದ್ದಾರೆ. ಜೊತೆ ಜೊತೆಯಲಿ ಚಿತ್ರದ ನಾಯಕಿ ಮೇಘಾ ಶೆಟ್ಟಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಚಿತ್ರ.

ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಮೂರು ನಾಯಕಿಯರು ಇರಲಿದ್ದಾರಂತೆ. ಹೀರೋಯಿನ್​ಗಳ ಜೊತೆ ನಡೆಯುವ ಘಟನೆಗಳು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ. ಸಿನಿಮಾದ ಬಹುತೇಕ ಶೂಟಿಂಗ್​ ಬೆಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರವೇ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ.
Published by: Rajesh Duggumane
First published: November 10, 2020, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading