ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಸಿನಿಮಾದ (Cinema) ಕೆಲಸವನ್ನೂ ಮಾಡುವುದರ ಜೊತೆಗೆ ಪತಿಯ (Husband) ಜೊತೆ ದಾಂಪತ್ಯ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಅತ್ತ ದಾಂಪತ್ಯದಲ್ಲಿಯೂ ಬ್ಯುಸಿಯಾಗದೆ, ಇತ್ತ ಸಿನಿಮಾದಲ್ಲಿಯೂ ಬ್ಯುಸಿಯಾಗದೆ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ನಟಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಹೊಸ ಹೊಸ ಅಪ್ಡೇಟ್ (Update) ಶೇರ್ ಮಾಡುತ್ತಾರೆ. ಟ್ರಿಪ್ ಹೋದಾಗ, ಪತಿ ಜೊತೆ ಕ್ಯಾಂಡಲ್ ಲೈಟ್ ಡಿನ್ನರ್ ಹೋದಾಗೆಲ್ಲ ವಿಡಿಯೋ (Video) ಮಾಡಿ ಫ್ಯಾನ್ಸ್ ಜೊತೆ ಶೇರ್ ಮಾಡುತ್ತಾರೆ. ಇದೀಗ ನಟಿ ತಮ್ಮ ಲೇಟೆಸ್ಟ್ ಮನಾಲಿ (Manali) ಟ್ರಿಪ್ನಿಂದ ವಿಡಿಯೋ ಶೇರ್ ಮಾಡಿದ್ದಾರೆ.
ನಟಿ ದಂಪತಿಗಳ ನೆಚ್ಚಿನ ಪ್ರವಾಸಿ ತಾಣ ಮನಾಲಿಗೆ ಹೋಗಿದ್ದಾರೆ. ಪತಿಯ ಜೊತೆ ಮನಾಲಿಯ ಹಿಮದಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಅಲ್ಲಿಂದ ಸೆಲ್ಫಿ ವಿಡಿಯೋ ಮಾಡಿ ಅದನ್ನೂ ಹಂಚಿಕೊಂಡಿದ್ದಾರೆ.
ಮನಾಲಿಯ ಸ್ನೋನಲ್ಲಿ ನನ್ನ Husband ಜೊತೆ ಚೆನ್ನಾಗಿ ಎಂಜಾಯ್ ಮಾಡ್ದೆ
ನಟಿ ಫೇಸ್ಬುಕ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ ನಟಿ ಮನಾಲಿಯಲ್ಲಿ ಪತಿಯೊಂದಿಗೆ ಕಳೆದ ಕ್ಷಣಗಳನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ಇದರಲ್ಲಿ ನಟಿ ಸೆಲ್ಫೀ ಸ್ಟಿಕ್ ಹಿಡಿದುಕೊಂಡು ಅದರಲ್ಲಿಯೇ ವಿಡಿಯೋ ಮಾಡುವುದನ್ನು ಕಾಣಬಹುದು.
ಮನಾಲಿಗೆ ಬಂದು ಅಲ್ಲಿನ ಡ್ರೆಸ್ ಧರಿಸಿ ಫೋಟೋ ತೆಗೆಸಿಕೊಳ್ಳದಿದ್ದರೆ ಹೇಗೆ ಹೇಳಿ ಎಂದಿದ್ದಾರೆ ನಟಿ. ಮುದ್ದಾದ ಮಗು ಸುಂದರವಾಗಿ ಡ್ರೆಸ್ ಮಾಡಿರುವಂತಹ ದೃಶ್ಯ ಕೂಡಾ ತೋರಿಸಿದ್ದಾರೆ. ಮನಾಲಿಯಲ್ಲಿ ಸುತ್ತಾಡುತ್ತಿದ್ದ ಜನರ ಫೋಟೋ ಹಘಾಊ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
ನಮ್ಮ ಮನೆಯವ್ರು ಎಲ್ಲೋದ್ರು, ಕಳೆದೋಗ್ಬಿಟ್ರು ಎಂದಿದ್ದಾರೆ ನಟಿ. ನಂತರ ಸುಂದರವಾದ ಕುರಿ ಮರಿಯನ್ನು ಎತ್ತಿಕೊಂಡು ಭರ್ಜರಿಯಾಗಿ ಪೋಸ್ ಕೊಟ್ಟಿದ್ದಾರೆ. ಇಬ್ಬರೂ ಮನಾಲಿಯ ಶೈಲಿಯಲ್ಲಿ ಡ್ರೆಸ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಕ್ಯೂಟ್ ಆಗಿ ಕಾಣಿಸಿದ್ದಾರೆ.
ಆ್ಯಪಲ್ ಮರಗಳೆಲ್ಲ ಒಣಗಿತ್ತು
ನನ್ ಹಿಂದೆ ನೋಡುತ್ತಿರುವುದೆಲ್ಲ ಆ್ಯಪಲ್ ಮರಗಳು. ಮಾರ್ಚ್, ಎಪ್ರಿಲ್ನಲ್ಲಿ ಹೂಬಿಟ್ಟು ಜುಲೈನಲ್ಲಿ ಆ್ಯಪಲ್ ಸಿಗುತ್ತದೆ ಎಂದಿದ್ದಾರೆ ನಟಿ. ಸ್ನೋಲಾಂಗ್ ವಾಲಿಯಲ್ಲಿ ಜಾರಿ ನಟಿ ಸಖತ್ ಎಂಜಾಯ್ ಮಾಡಿದ್ದಾರೆ. ಹಿಮದ ರಾಶಿಯ ಮಧ್ಯೆ ನಿಂತು ವಿಡಿಯೋ ಮಾಡಿದ್ದಾರೆ. ಸುತ್ತಲೂ ಬೆಟ್ಟ, ಎಲ್ಲಾ ಕಡೆ ಹಿಮ ಇದ್ದು ನಿಜಕ್ಕೂ ಸ್ವರ್ಗದಂತೆಯೇ ಕಾಣುತ್ತಿದೆ ಎಂದಿದ್ದಾರೆ ನಟಿ.
ಸ್ನೋಬಿಂಗ್ ಬಾಲ್ನಲ್ಲಿ ಮಸ್ತಿ
ನಟಿ ಸ್ನೋಬಿಂಗ್ ಬಾಲ್ನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಪತಿಯ ಜೊತೆ ಒಟ್ಟಿಗೆ ಸ್ನೋಬಿಂಗ್ ಬಾಲ್ ಎಕ್ಸ್ಪ್ಲೋರ್ ಮಾಡಿದ್ದಾರೆ ಅದಿತಿ. ಅಂತೂ ಅವರ ಈ ಟ್ರಿಪ್ ವಿಡಿಯೋವನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ.
ವೈರಲ್ ಆಗಿದೆ ನಟಿಯ ವಿಡಿಯೋ
ಅದಿತಿ ಶೇರ್ ಮಾಡಿದ ಈ ವಿಡಿಯೋಗೆ 111 ಸಾವಿರ ಲೈಕ್ಸ್ ಬಂದಿದೆ. 1.6 ಮಿಲಿಯನ್ ವ್ಯೂಸ್ ಕೂಡಾ ಬಂದಿದೆ. ಇದಕ್ಕೆ 500ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Rachita Ram: ಶಾರ್ಟ್ಸ್-ಟೀ ಶರ್ಟ್ನಲ್ಲಿ ಡಿಂಪಲ್ ಕ್ವೀನ್! ಏನಮ್ಮಾ ಅವತಾರ ಅಂತಿದ್ದಾರೆ ಫ್ಯಾನ್ಸ್
ಚೈನೀಸ್ ಫುಡ್ ತಿಂದು ವಾಂತಿ
ಸ್ವಲ್ಪ ಸಮಯದ ಹಿಂದೆ ರೆಸ್ಟೋರೆಂಟ್ ವಿಡಿಯೋ ಶೇರ್ ಮಾಡಿದ್ದರು. ನಾನು ಹಾಗೂ ಯಶು ತುಂಬಾ ದಿನಗಳ ನಂತರ ಇಂದು ಹೊರಗಡೆ ಹೋಗ್ತಾ ಇದ್ದೇವೆ. ಇದು ತುಂಬಾ ಸ್ಪೆಷಲ್ ಜಾಗ. ಎಲ್ಲಿಗೆ ಎನ್ನುವುದನ್ನು ನಾನು ವಿಡಿಯೋದಲ್ಲಿ ನಿಮಗೆ ತೋರಿಸುತ್ತೇನೆ ಎಂದು ನಟಿ ವಿಡಿಯೋ ಶುರು ಮಾಡಿದ್ದರು.
ನಟಿ ಪತಿ ಯಶಸ್ ಜೊತೆಗೆ ಪ್ಯಾನ್ ಏಷ್ಯಾ ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ವರ್ಲ್ಡ್ ಟ್ರೇಡ್ ಸೆಂಟರ್‌ನ 31ನೇ ಮಹಡಿಯಲ್ಲಿರುವ ಹೋಟೆಲ್ನಲ್ಲಿ. ಬಹಳ ಎತ್ತರದಲ್ಲಿರುವುದರಿಂದ ಸುಂದರ ವ್ಯೂ ಸಿಗುತ್ತದೆ. ಬೆಂಗಳೂರಿನಷ್ಟು ಪಾಸಿಟಿವ್ ಸಿಟಿ ಪ್ರಪಂಚದಲ್ಲಿ ಇಲ್ಲ. ಐ ಲವ್ ಯು ಬೆಂಗಳೂರು ಎಂದು ಸಿಲಿಕಾನ್ ಸಿಟಿ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ ನಟಿ ಅದನ್ನೆಲ್ಲ ವಿಡಿಯೋದಲ್ಲಿ ಶೂಟ್ ಮಾಡಿದ್ದಾರೆ.
'ನೂಡಲ್ಸ್ ಬಿಟ್ಟರೆ ನಾರ್ಥ್ ಇಂಡಿಯನ್ ಫುಡ್ ಅಂತ ಯಾವುದನ್ನೂ ಟ್ರೈ ಮಾಡಿಲ್ಲ. ಮೊದಲ ನಾನು ಫ್ರೂಟ್ ಜೂಸ್ ಕುಡಿದೆ. ಈಗ ಚುಂಗ್‌ಫಾ ಬಂದಿದೆ. ಚೈನಾ ಆಹಾರಗಳ ರುಚಿ ನೋಡುತ್ತಿದ್ದೇನೆ. ರುಚಿ ಒಂದು ಚೂರು ಚೆನ್ನಾಗಿರಲಿಲ್ಲ.' ಎಂದು ಹೇಳುತ್ತಿದ್ದಂತೆ ಅದಿತಿ ತಟ್ಟೆ ಮೇಲೆ ವಾಂತಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ