ಸ್ಯಾಂಡಲ್ವುಡ್ನ ಕ್ಯೂಟ್ ನಟಿ ಅದಿತಿ ಪ್ರಭುದೇವ (Aditi Prabhudeva) ಮದುವೆ (Marriage) ಸಂಭ್ರಮದಲ್ಲಿದ್ದಾರೆ. ಕನ್ನಡ ಸಿನಿ ಪ್ರೇಕ್ಷರ ಮನಸು ಗೆದ್ದ ಕನ್ನಡತಿ (Kannadathi) ಈಗ ಹಸೆಮಣೆ ತುಳಿಯುತ್ತಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಅದಿತಿ ಪ್ರಭುದೇವ ಅರಶಿನ ಶಾಸ್ತ್ರವನ್ನು (Haldi Ceremony) ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಅರಶಿನ ಶಾಸ್ತ್ರದ ಚಂದದ ಫೋಟೋಗಳನ್ನು (Photos) ಹಂಚಿಕೊಂಡ ನಟಿ ಈಗ ಒಂದು ಸುಂದರವಾದ ವಿಡಿಯೋವನ್ನು (Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅದಿತಿ ಅವರು ಸುಂದರವಾಗಿ ವೈಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋ ಈಗ ವೈರಲ್ (Viral) ಆಗಿದ್ದು ಎಲ್ಲರೂ ನಟಿಗೆ ಶುಭ ಹಾರೈಸುತ್ತಿದ್ದಾರೆ.
ನಟಿ ಈಗ ಹೊಸ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಬಿಳಿ ಬಣ್ಣದ ಸುಂದರವಾದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡುವಾಗ ನಟಿ ಸೇವಂತಿಗೆ ಹೂವಿನ ಸಿಂಬಲ್ ಕ್ಯಾಪ್ಶನ್ ಹಾಕಿದ್ದಾರೆ.
ವೈರಲ್ ಆಯ್ತು ಅದಿತಿ ವಿಡಿಯೋ
ನಟಿಯ ವಿಡಿಯೋಗೆ 111 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 300ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ. ಅವರ ವಿಡಿಯೋವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅವರ ಅರಶಿನ ಶಾಸ್ತ್ರದ ಫೋಟೋ ನೋಡಿ, ಪ್ರೀತಿಯ ಪಾರಿವಾಳ ಹಾರಿಹೋಯ್ತೊ ಗೆಳೆಯ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಈಗ ವಿಡಿಯೋ ನೋಡಿ ವಿಶ್ ಮಾಡಿದ್ದಾರೆ.
ನೆಟ್ಟಿಗರೇನಂತಿದ್ದಾರೆ?
ನಟಿಗೆ ವಿಶ್ ಮಾಡಿರುವ ಅವರ ಅಭಿಮಾನಿಗಳು ಬೆಣ್ಣೆ ನಗರಿಯ ಹುಡುಗಿಗೆ ಶುಭಶಯಗಳು ಎಂದು ಹಾರೈಸಿದ್ದಾರೆ. ಅಪ್ಸರೆಯಂತೆ ಕಾಣುತ್ತಿದ್ದೀರಿ ಎಂದಿದ್ದಾರೆ ಇನ್ನೊಬ್ಬರು.
View this post on Instagram
ಬ್ರಹ್ಮಾಸ್ತ್ರ ಸಿನಿಮಾದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರ ರೊಮ್ಯಾಂಟಿಕ್ ಸಾಂಗ್ ಕೇಸರಿಯ ರಂಗು ಹಾಡಿಗೆ ಅದಿತಿ ಅವರು ವಿಡಿಯೋ ಮಾಡಿದ್ದು ಅವರ ಕ್ಯೂಟ್ ಬ್ರೈಡಲ್ ಲುಕ್ಗೆ ಈ ಹಾಡು ಹೊಂದಿಕೆಯಾಗಿದೆ.
ಇದನ್ನೂ ಓದಿ: Aditi Prabhudeva: ಅದಿತಿ ಅರಶಿನ ಶಾಸ್ತ್ರ! ಮದು ಮಗಳು ಮಿಂಚಿಂಗ್
ನಟಿಯ ಸುಂದರವಾಗಿ ರೆಡಿಯಾಗಿದ್ದು ಅರಶಿನ ನೀರಿನಲ್ಲಿ ಮಿಂಚು ವಧುವಿನ ಕಳೆ ಏರಿಸಿಕೊಂಡಿದ್ದಾರೆ. ಅಂತೂ ಬ್ರೈಡ್ ರೆಡಿಯಾಗಿದ್ದಾರೆ. ಸುಂದರವಾಗಿರುವ ಬಿಳಿ ಬಣ್ಣದ ಸೀರೆ ಹಾಗೂ ಅರಶಿನ ಶಾಸ್ತ್ರದ ಸ್ಪೆಷಲ್ ಜ್ಯುವೆಲ್ಸ್ ಧರಿಸಿದ ನಟಿ ಚಂದದ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಅದಿತಿ ಪ್ರಭುದೇವ ಮತ್ತು ಯಶಸ್ವಿ ಮದುವೆಯ ಸಮಾರಂಭ ಬೆಂಗಳೂರಿನಲ್ಲಿ ಪ್ಲಾನ್ ಆಗಿದೆ.
ಅರಮನೆಯ ಮೈದಾನದಲ್ಲಿ ಯಶಸ್ವಿ ಹಾಗೂ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯಶಸ್ವಿ ಒಬ್ಬ ಉದ್ಯಮಿ ಆಗಿದ್ದಾರೆ. ಕಾಫಿ ಪ್ಲಾಂಟರ್ ಕೂಡ ಹೌದು. ನಟಿ ಅರಶಿನ ಶಾಸ್ತ್ರಕ್ಕೆ ವೈಟ್ ಔಟ್ಫಿಟ್ ಆರಿಸಿಕೊಂಡಿದ್ದು ಚಂದದ ನಗುವಿನೊಂದಿಗೆ ಅತ್ಯಂತ ಕ್ಯೂಟ್ ಆಗಿ ಕಾಣಿಸಿದ್ದಾರೆ.
ಅದಿತಿ ಅವರು ಅರಶಿನ ಶಾಸ್ತ್ರದ ಫೋಟೋ ಶೇರ್ ಮಾಡಿದ್ದು ನೆಟ್ಟಿಗರು ಫೋಟೋ ಲೈಕ್ ಮಾಡಿದ್ದಾರೆ. ಬಹಳಷ್ಟು ಜನರು ಅಯ್ಯೋ ನಮ್ಮ ಲವ್ ಕಟ್ ಆಯ್ತು ಅಂತ ಹಾಸ್ಯವಾಗಿ ನಟಿಯ ಕಾಲೆಳೆದು ಶುಭಕೋರಿದ್ದಾರೆ. ಆದರೂ ಅವರ ಅಭಿಮಾನಿಗಳು ಖುಷಿಯಾಗಿದ್ದಅರೆ. ಅಂತೂ ಕನ್ನಡದ ಮತ್ತೊಂದು ಟಾಪ್ ಸ್ಟಾರ್ ನಟಿ ಮದುವೆಯಾಗುತ್ತಿದ್ದು ವಿವಾಹದ ನಂತರ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿರುತ್ತಾರಾ ಎನ್ನುವುದನ್ನು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ