Video viral: ‘ಮನ್ಸಿಂದ ಯಾರು ಕೆಟ್ಟೋರಲ್ಲ‘ ಎಂದ ಬ್ರಹ್ಮಚಾರಿ ನಟಿ!

ಬಿಗ್​ ಬಾಸ್​​ ಮನೆಯೊಳಕ್ಕೆ ವಾಸುಕಿ ಅವರು ಈ ಹಾಡನ್ನು ರಚಿಸಿ ಹಾಡಿದ್ದರು. ವಾಸುಕಿ ಬರೆದು ಹಾಡಿರುವ ಈ ಅರ್ಥ ಪೂರ್ಣ ಗೀತೆ ನಟ ಕಿಚ್ಚ ಸುದೀಪ್​ ಅವರಿಗೂ ತುಂಬಾ ಇಷ್ಟವಾಗಿತ್ತು. ಇದೀಗ ನಟಿ ಅದಿತಿ ಪ್ರಭುದೇವ ಈ ಹಾಡನ್ನು ಹಾಡಿ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್ಲೋಡ್​ ಮಾಡಿದ್ದಾರೆ.

news18-kannada
Updated:December 13, 2019, 6:54 PM IST
Video viral: ‘ಮನ್ಸಿಂದ ಯಾರು ಕೆಟ್ಟೋರಲ್ಲ‘ ಎಂದ ಬ್ರಹ್ಮಚಾರಿ ನಟಿ!
ಅದಿತಿ ಪ್ರಭುದೇವ
  • Share this:
ಬಿಗ್​ ಬಾಸ್ ಸೀಸನ್-​7​ ಸ್ಪರ್ಧಿ ವಾಸುಕಿ ವೈಭವ್​ ಹಾಡಿದ ‘ಮನ್ಸಿಂದ ಯಾರು ಕೆಟ್ಟೋರಲ್ಲ‘ ಹಾಡು ಭಾರೀ ವೈರಲ್​ ಆಗಿತ್ತು. ಇತ್ತೀಚೆಗೆ ವಾಸುಕಿ ಅವರ ಹುಟ್ಟು ಹಬ್ಬದ ದಿನ ನಟ ಕಿಚ್ಚ ಸುದೀಪ್​ ತಮ್ಮ ಕಂಠಸಿರಿಯಲ್ಲಿ ಹಾಡುವ ಮೂಲಕ ವಾಸುಕಿಗೆ ಸರ್​ಪ್ರೈಸ್​ ನೀಡಿದ್ದರು. ಇದೀಗ ಈ ಹಾಡನ್ನು ನಟಿ ಅದಿತಿ ಪ್ರಭುದೇವ ಹಾಡಿದ್ದು, ಸಾಮಾಜಿಕ ತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಬಿಗ್​ ಬಾಸ್​​ ಮನೆಯೊಳಕ್ಕೆ ವಾಸುಕಿ ಅವರು ಈ ಹಾಡನ್ನು ರಚಿಸಿ ಹಾಡಿದ್ದರು. ವಾಸುಕಿ ಬರೆದು ಹಾಡಿರುವ ಈ ಅರ್ಥ ಪೂರ್ಣ ಗೀತೆ ನಟ ಕಿಚ್ಚ ಸುದೀಪ್​ ಅವರಿಗೂ ತುಂಬಾ ಇಷ್ಟವಾಗಿತ್ತು. ಇದೀಗ ನಟಿ ಅದಿತಿ ಪ್ರಭುದೇವ ಈ ಹಾಡನ್ನು ಹಾಡಿ ತನ್ನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್ಲೋಡ್​ ಮಾಡಿದ್ದಾರೆ.
 View this post on Instagram
 

ಒಂದೆರಡು ದಿನಗಳಿಂದ ನನ್ನನ್ನು ಕಾಡಿ ದಂತಹ ಹಾಡು. ಎಷ್ಟೊಂದು ಸತ್ಯ ಎನಿಸಿದ ಪ್ರತಿ ಸಾಲುಗಳು. ಮೊದಲ ಬಾರಿ ಹಾಡಿದ್ದೇನೆ .ಇಷ್ಟವಾಗದಿದ್ದರೆ ದಯವಿಟ್ಟು ಕ್ಷಮಿಸಿ . A Song which is disturbing me every second , lines made me feel like "oh wow yes this s soo true ". Singing for the first time ,so bear with me if you don't like. and yes no one is bad at their heart . Let's love ,live and laugh more and more ❤ Thanks for such an amazing creation Vasuki vaibhav @vasukivaibhav 🙏🏻 inspired by kichha Sudeep sir @kichchasudeepa 🙏🏻 lots of love to Dharma vish @dharmavish sir for helping me with this process,u r my fav alwz🙏🏻 #sandalwood #kannada #music #new #bepositive


A post shared by ADITI PRABHUDEVA (@aditiprabhudeva) on


‘ಒಂದೆರಡು ದಿನಗಳಿಂದ ನನನ್ನು ಕಾಡಿದಂತ ಹಾಡು ಇದು. ಎಷ್ಟೊಂದು ಸತ್ಯ ಎನಿಸಿದ ಪ್ರತಿ ಸಾಲುಗಳು. ಮೊದಲ ಬಾರಿ ಹಾಡಿದ್ದೇನೆ. ಇಷ್ಟವಾದರೆ ದಯವಿಟ್ಟು ಕ್ಷಮಿಸಿ‘ ಎಂದು ಬರೆದುಕೊಂಡಿದ್ದಾರೆ.

ಇಂತಹ ಅದ್ಭುತ ಹಾಡನ್ನು ರಚಿಸಿದ ವಾಸುಕಿ ವೈಭವ್​ಗೆ ಥ್ಯಾಂಕ್ಸ್​. ಈ ಸಾಂಗ್​ ಹಾಡೋದಕ್ಕೆ ಕಿಚ್ಚ ಸುದೀಪ್​ ಅವರೇ ಸ್ಪೂರ್ತಿ. ಅಲ್ಲದೆ, ಹಾಡೋದಕ್ಕೆ ಸಹಾಯ ಮಾಡಿದ ಧರ್ಮವಿಶ್​ಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇನ್ನು ‘ಮಸ್ಸಿಂದ ಯಾರು ಕೆಟ್ಟೋರಲ್ಲ' ಹಾಡು ಸಾಮಾಜಿಕ ತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.  ಸಾಕಷ್ಟು ಜನರ ಮೊಬೈಲ್​ ಸ್ಟೇಟಸ್​ನಲ್ಲಿ ಈ ಹಾಡು ರಾರಾಜಿಸುತ್ತಿದೆ.ಇದನ್ನೂ ಓದಿ: ಸ್ಮಾರ್ಟ್​ಫೋನ್​ ಚಾರ್ಜ್​ ವೇಳೆ ಡಾಟಾ ಸೋರಿಕೆ ತಡೆಯಲು ಬಂದಿದೆ ‘ಯುಎಸ್​​ಬಿ ಕಾಂಡೋಮ್‘!

ಇದನ್ನೂ ಓದಿ: ಮಡದಿಗೆ ಈರುಳ್ಳಿ ಜುಮ್ಕಿ ಉಡುಗೊರೆಯಾಗಿ ನೀಡಿದ ಬಾಲಿವುಡ್ ನಟ!

ಇದನ್ನೂ ಓದಿ: ವರ್ಷಾಂತ್ಯದಲ್ಲಿ ಕಾರು ಪ್ರಿಯರಿಗೆ ಸಿಹಿ ಸುದ್ದಿ; ಈ ಕಾರಿನ ಮೇಲೆ 2.5 ಲಕ್ಷ ರೂ. ಡಿಸ್ಕೌಂಟ್?
Published by: Harshith AS
First published: December 13, 2019, 6:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading