• Home
  • »
  • News
  • »
  • entertainment
  • »
  • Adipurush Teaser ಕಾರ್ಟೂನ್ ಥರ​ ಇದ್ಯಂತೆ, ಗ್ರಾಫಿಕ್ಸ್ ಕಂಡು ಗೇಲಿ ಮಾಡಿದ ನೆಟ್ಟಿಗರು!

Adipurush Teaser ಕಾರ್ಟೂನ್ ಥರ​ ಇದ್ಯಂತೆ, ಗ್ರಾಫಿಕ್ಸ್ ಕಂಡು ಗೇಲಿ ಮಾಡಿದ ನೆಟ್ಟಿಗರು!

ಪ್ರಭಾಸ್​

ಪ್ರಭಾಸ್​

30 ವರ್ಷಗಳಷ್ಟು ಪುರಾತನ ಅನಿಮೇಟೆಡ್ ರಾಮಾಯಣವು ಇದೀಗ ನಿರ್ಮಿಸಿರುವ ಅನಿಮೇಟೆಡ್ ಆದಿಪುರುಷ್‌ಗಿಂತ ಅತ್ಯುತ್ತಮವಾಗಿದೆ. ಆದಿಪುರುಷ್ ಸಿನಿಮಾ ನೋಡುವುದಕ್ಕಿಂತಲೂ ಈ ಚಿತ್ರವನ್ನು ವೀಕ್ಷಿಸಿ ಎಂದು ವಿನಂತಿಸುತ್ತೇವೆ ಎಂದು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ.

  • Share this:

ಓಂ ರಾವುತ್ (Om Rawat) ನಿರ್ದೇಶನದ ಆದಿಪುರುಷ್ ಟೀಸರ್ (Adipurush Teaser) ಬಿಡುಗಡೆಯಾದ ನಂತರ ಟ್ವಿಟರ್ (Twitter) ಬಳಕೆದಾರರು ಟೀಸರ್ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿದ್ದು ಪ್ರಾಮಾಣಿಕವಾಗಿಯೇ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ. ಅವರ ಪ್ರಕಾರ ಟೀಸರ್ ನಿರೀಕ್ಷಿಸಿರುವಂತೆ ಉತ್ತಮವಾಗಿಲ್ಲ ಎಂದಿದ್ದಾರೆ. ಪ್ರಭಾಸ್ (Prabhas) ಅಭಿನಯದ ಆದಿಪುರುಷ್ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು ಜಾಲತಾಣದಲ್ಲಿ ಟೀಸರ್ ಕುರಿತು ಸಾಕಷ್ಟು ಅನಿಸಿಕೆ ಅಭಿಪ್ರಾಯಗಳು ಮೂಡಿಬಂದಿದೆ. ಚಿತ್ರದ ಮೊದಲ ನೋಟಕ್ಕೆ ಉತ್ತಮ ಪ್ರತಿಕ್ರಿಯೆಗಳು ಮೂಡಿಬಂದಿದ್ದರೂ ಚಿತ್ರದ ಸಿಜಿಐ (CGI) ಹಾಗೂ ವಿಎಫ್‌ಎಕ್ಸ್ (VFX) ಅಷ್ಟೊಂದು ತೃಪ್ತಿದಾಯಕವಾಗಿಲ್ಲ ಎಂಬ ಕಾಮೆಂಟ್‌ಗಳೂ ಕೇಳಿಬಂದಿದೆ.


ಆದಿಪುರುಷ್ ಟೀಸರ್​ ಸಿಕ್ಕಾಪಟ್ಟೆ ಟ್ರೋಲ್​!


ಟ್ವಿಟರ್‌ನಲ್ಲಿ ಅನೇಕರು ಟೀಸರ್ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳಾದ ಮಾರ್ವೆಲ್ಸ್ ಅವೆಂಜರ್ ಸೀರೀಸ್, ಗೇಮ್ ಆಫ್ ಥ್ರೋನ್ಸ್ ಹಾಗೂ ಇನ್ನಿತರ ಚಿತ್ರಗಳೊಂದಿಗೆ ಬಣ್ಣಿಸಿದ್ದಾರೆ. ಭಾರತದ ಸಂಸ್ಕೃತಿಯನ್ನು ಬಣ್ಣಿಸಬೇಕಾದ ಚಿತ್ರವು ಹಾಲಿವುಡ್ ಸಿನಿಮಾಗಳ ರೀತಿಯಲ್ಲಿಯೇ ಮೂಡಿಬಂದಿದೆ ಎಂಬುದು ಬಳಕೆದಾರರ ಅಭಿಮತವಾಗಿದೆ.


ಕಾರ್ಟೂನ್​ ಥರ ಇದೆ ಎಂದ ಫ್ಯಾನ್ಸ್​!


ಹಾಗಿದ್ದರೆ ಟ್ವಿಟರ್‌ನಲ್ಲಿ ಬಳಕೆದಾರರು ಮಾಡಿರುವ ಕಾಮೆಂಟ್‌ಗಳೇನು ಎಂಬುದನ್ನು ನೋಡೋಣ


01. 30 ವರ್ಷಗಳಷ್ಟು ಪುರಾತನ ಅನಿಮೇಟೆಡ್ ರಾಮಾಯಣವು ಇದೀಗ ನಿರ್ಮಿಸಿರುವ ಅನಿಮೇಟೆಡ್ ಆದಿಪುರುಷ್‌ಗಿಂತ ಅತ್ಯುತ್ತಮವಾಗಿದೆ. ಆದಿಪುರುಷ್ ಸಿನಿಮಾ ನೋಡುವುದಕ್ಕಿಂತಲೂ ಈ ಚಿತ್ರವನ್ನು ವೀಕ್ಷಿಸಿ ಎಂದು ವಿನಂತಿಸುತ್ತೇವೆ.


02. ಜಪಾನೀ ಜನರು ಓಂರಾವತ್‌ ಅವರ ಆದಿಪುರುಷ್‌ಗಿಂತ ಉತ್ತಮವಾದ ಸಿನಿಮಾ ಮಾಡುತ್ತಾರೆ. ಇದು ಅತಿದೊಡ್ಡ ಸ್ಕ್ಯಾಮ್ ಆಗಿದೆ ಎಂಬುದು ಬಳಕೆದಾರರೊಬ್ಬರ ಅಭಿಪ್ರಾಯವಾಗಿದೆ. ಆದಿಪುರುಷ್ ಅನಿಮೇಶನ್ ಕಾರ್ಟೂನ್‌ನಂತೆ ಕಂಡುಬಂದಿದೆ ಎಂಬುದು ಬಳಕೆದಾರರ ಅಭಿಪ್ರಾಯವಾಗಿದೆ.


ಆದಿಪುರುಷ್‌ಗಿಂತ ಜಪಾನೀ ಅನಿಮೇಟೆಡ್ ಬೆಟರ್!


ಜಪಾನೀಸ್ ಅನಿಮೇಟೆಡ್ ಚಿತ್ರ #ರಾಮಾಯಣ್ (1994) ಆದಿಪುರುಷ್ ಚಿತ್ರಕ್ಕಿಂತ 100 ಪಟ್ಟು ಅತ್ಯುತ್ತಮವಾಗಿದೆ. ಆದಿಪುರುಷ್ ಪ್ರಭಾಸ್ ರಾಮನಾಗಿ, ಸೈಫ್ ಅಲಿ ಖಾನ್ ರಾವಣ, ಕೃತಿ ಸೇನಾನ್ ಸೀತೆ, ಸನ್ನಿ ಸಿಂಗ್ ಲಕ್ಷ್ಮಣ ಆಗಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಅನ್ನು ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ ಅನಾವರಣಗೊಳಿಸಲಾಯಿತು. ಆದಿಪುರುಷ್ ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ಚಿತ್ರದ ಹಿಂದಿನ ಸೂತ್ರಧಾರಿಗಳಾಗಿದ್ದಾರೆ.


ಇದನ್ನೂ ಓದಿ: ಅಭಿಷೇಕ್ ಅಂಬರೀಶ್​ಗೆ ಹುಟ್ಟುಹಬ್ಬದ ಸಂಭ್ರಮ, ಜೂನಿಯರ್ ಅಂಬಿ ಸ್ಟೈಲಿಶ್ ಲುಕ್ ನೋಡಿ


ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್


ಆದಿಪುರುಷ ಚಿತ್ರವು ಜನವರಿ 12, 2023 ರಂದು ಐಮ್ಯಾಕ್ಸ್ (IMAX) ಮತ್ತು 3D ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆಗೆ ಮುಂಚಿತವಾಗಿ, ಪ್ರಭಾಸ್ ಹೇಳಿಕೆಯನ್ನು ನೀಡಿದ್ದು, "ಪ್ರತಿಯೊಂದು ಪಾತ್ರ ಮತ್ತು ಪ್ರತಿಯೊಂದು ಪಾತ್ರಧಾರ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಾನೆ, ಇಂತಹ ಪಾತ್ರಗಳಲ್ಲಿ ಹೇಗೆ ಅಭಿನಯಿಸುತ್ತಾರೆ ಎಂಬುದು ನಟ ಎದುರಿಸುವ ಸವಾಲಾಗಿದೆ. ಆದರೆ ಈ ರೀತಿಯ ಪಾತ್ರವನ್ನು ಚಿತ್ರಿಸುವುದು ಮತ್ತು ಅದರಲ್ಲಿ ಅಭಿನಯಿಸುವುದು ಮಹತ್ತರವಾದ ಜವಾಬ್ದಾರಿ ಮತ್ತು ಹೆಮ್ಮೆಯ ಕೆಲಸವಾಗಿದೆ" ಎಂದು ತಿಳಿಸಿದ್ದಾರೆ.


ರಾಮನಾಗಿ ಬಣ್ಣಹಚ್ಚಿರುವ ಪ್ರಭಾಸ್


ಭಾರತೀಯ ಮಹಾಕಾವ್ಯದಿಂದ ಮೂಡಿಬಂದಿರುವ ಈ ಪಾತ್ರದಲ್ಲಿ ಅಭಿನಯಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ, ವಿಶೇಷವಾಗಿ ನಿರ್ದೇಶಕರಾಗಿರುವ ಓಂ ಪಾತ್ರವನ್ನು ವಿನ್ಯಾಸಗೊಳಿಸಿದ ರೀತಿಯಲ್ಲಿ ಅಭಿನಯಿಸಲು ಕಾತರಾನಾಗಿರುವೆ ಎಂದಿದ್ದಾರೆ.ಚಿತ್ರವನ್ನು ದೇಶದ ಯುವಜನರು ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಿರುವ ಪ್ರಭಾಸ್, ಚಿತ್ರದ ಮೇಲೆ ಕೂಡ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಚೋಳ ಸಾಮ್ರಾಜ್ಯದ ಕಥೆ ನೋಡಿ ವಾವ್ ಎಂದ ವಿದೇಶಿಗರು! PS1ಗೆ ಭರ್ಜರಿ ರೆಸ್ಪಾನ್ಸ್


ಪ್ರಭಾಸ್ ಕೈಯಲ್ಲಿರುವ ಮುಂಬರುವ ಚಿತ್ರಗಳು


ಕೊನೆಯದಾಗಿ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದುಮಾಡಿರಲಿಲ್ಲ. ಆದಿಪುರುಷ್ ಅಲ್ಲದೆ ಪ್ರಭಾಸ್ ಸಲಾರ್‌ನಲ್ಲಿ ಕೂಡ ಅಭಿನಯಿಸಿದ್ದು ಹಾಗೂ ದೀಪಿಕಾ ಪಡುಕೋಣೆ ಜೊತೆ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

Published by:ವಾಸುದೇವ್ ಎಂ
First published: