• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Adipurush: 'ಆದಿಪುರುಷ್'​ ಸಿನಿಮಾದಲ್ಲಿ ಲಂಕೇಶನಾಗಿ ನಟಿಸಲಿದ್ದಾರೆ ಬಿ-ಟೌನ್​ನ ಈ ನಟ​: ಹೊರಬಿತ್ತು ಅಧಿಕೃತ ಪ್ರಕಟಣೆ..!

Adipurush: 'ಆದಿಪುರುಷ್'​ ಸಿನಿಮಾದಲ್ಲಿ ಲಂಕೇಶನಾಗಿ ನಟಿಸಲಿದ್ದಾರೆ ಬಿ-ಟೌನ್​ನ ಈ ನಟ​: ಹೊರಬಿತ್ತು ಅಧಿಕೃತ ಪ್ರಕಟಣೆ..!

ರಾಮನ ಪಾತ್ರದಲ್ಲಿ ಪ್ರಭಾಸ್​

ರಾಮನ ಪಾತ್ರದಲ್ಲಿ ಪ್ರಭಾಸ್​

Prabhas: ಓಂ ರಾವತ್​ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು,ಇದರಲ್ಲಿ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಟೈಟಲ್​ ಪೋಸ್ಟ್​ ರಿಲೀಸ್ ಆಗಿದ್ದು, ಈಗ ಚಿತ್ರದ ಪ್ರಮುಖ ವಿಲನ್​ ಕುರಿತಾಗಿ ಪ್ರಕಟಣೆ ಹೊರ ಬಿದ್ದಿದೆ.

ಮುಂದೆ ಓದಿ ...
  • Share this:

'ಸಾಹೋ' ಸಿನಿಮಾದ ನಂತರ  ಪ್ರಭಾಸ್​ ಕೈತುಂಬ ಸಿನಿಮಾಗಳಿವೆ. 'ಸಾಹೋ' ಟಾಲಿವುಡ್​ನಲ್ಲಿ ನೆಲಕಚ್ಚಿದರೂ, ಹಿಂದಿ ಬಾಕ್ಸಾಫಿಸ್​ನಲ್ಲಿ ಹಿಟ್ ಎಂದು ಹೇಳುವಷ್ಟು ಕಲೆಕ್ಷನ್​ ಮಾಡಿತ್ತು. ಸದ್ಯ ಟಾಲಿವುಡ್​ ಡಾರ್ಲಿಂಗ್ ಕೈಯಲ್ಲಿ ಮೂರು ಪ್ಯಾನ್​ ಇಂಡಿಯಾ ಸಿನಿಮಾಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು, ತಾನಾಜಿ ಖ್ಯಾತಿಯ ನಿರ್ದೇಶಕ ಓಂ ರಾವರ್​ ಅವರ 'ಆದಿಪುರುಷ್'​. 


ಓಂ ರಾವತ್​ ನಿರ್ದೇಶನದಲ್ಲಿ ಪ್ರಭಾಸ್​ ನಟಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು,ಇದರಲ್ಲಿ ಪ್ರಭಾಸ್​ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಟೈಟಲ್​ ಪೋಸ್ಟ್​ ರಿಲೀಸ್ ಆಗಿದ್ದು, ಈಗ ಚಿತ್ರದ ಪ್ರಮುಖ ವಿಲನ್​ ಕುರಿತಾದ ಪ್ರಕಟಣೆ ಹೊರ ಬಿದ್ದಿದೆ.ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ ರಾಮನಾದರೆ, ರಾವಣನಾಗಿ ಬಾಲಿವುಡ್​ನ ಖ್ಯಾತ ನಟ ಕಾಣಿಸಿಕೊಳ್ಳಲಿದ್ದಾರೆ. 'ತಾನಾಜಿ' ಸಿನಿಮಾದಲ್ಲಿ ಉದಯ್​ಬಾನ್ ಸಿಂಗ್​ ರಾಥೋಡ್​ ಪಾತ್ರದಲ್ಲಿ ನಟಿಸಿದ್ದ ಸೈಫ್​ ಅಲಿ ಖಾನ್​, 'ಆದಿಪುರುಷ್'​ ಸಿನಿಮಾದಲ್ಲಿ ಲಂಕೇಶನಾಗಲಿದ್ದಾರಂತೆ. ಈ ಕುರಿತಾಗಿ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.


7000 years ago existed the world's most intelligent demon! #Adipurush#Prabhas #SaifAliKhan @itsBhushanKumar @vfxwaala @rajeshnair06 @TSeries @retrophiles1 #TSeries pic.twitter.com/xVPrlJQSKFಈ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್ ಆದ ನಂತರ, ಸೈಫ್​ ಅಲಿ ಖಾನ್​ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈಗ ಆ ಸುದ್ದಿ ನಿಜವಾಗಿದೆ. 7 ಸಾವಿರ ವರ್ಷಗಳ ಹಿಂದೆ ಇದ್ದ ಬುದ್ಧಿವಂತ ರಾಕ್ಷಸ ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಅಭಿನಯಿಸುತ್ತಿರುವ 22ನೇ ಸಿನಿಮಾ ಇದಾಗಿದ್ದು, ಇದನ್ನು ಟಿ-ಸಿರೀಸ್​ನ ಭೂಷನ್​ ಕುಮಾರ್​, ಕ್ರಿಷನ್​ ಕುಮಾರ್​, ಓಂ ರಾವತ್​, ಪ್ರಸಾದ್ ಸುತಾರ್​ ಹಾಗೂ ರಾಜೇಶ್ ನಾಯರ್​ ನಿರ್ಮಿಸುತ್ತಿದ್ದಾರೆ.


bollywood saif ali khan gets trolled after announces his autobiography
ಸೈಫ್​ ಅಲಿ ಖಾನ್​


ಪ್ರಭಾಸ್​ ರಾಮನ ಪಾತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡುತ್ತಿದ್ದಾರಂತೆ. ಜೊತೆ ಬಿಲ್ಲು ವಿದ್ಯೆ ಸಹ ಕಲಿಯುತ್ತಿದ್ದಾರಂತೆ. ಸೀತೆಯಾಗಿ ಈ ಸಿನಿಮಾದಲ್ಲಿ ಕಿಯಾರಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2021ರಲ್ಲಿ ಚಿತ್ರ ಸೆಟ್ಟೇರಲಿದ್ದು, 2022ರಲ್ಲಿ 'ಆದಿಪುರುಷ್'​ ತೆರೆಕಾಣಲಿದೆಯಂತೆ.
ಕರೀನಾ ಕಪೂರ್ ಸಹ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹ್ಯಾಂಡ್ಸಮ್​ ಡೆವಿಲ್​ ಇನ್​ ಹಿಸ್ಟರಿ ಅಂತ ಈ ವಿಷಯವನ್ನು ಖುಷಿಯಿಂದ ಪೋಸ್ಟ್ ಮಾಡಿದ್ದಾರೆ ಬೇಬೊ.ಇನ್ನು ಇದನ್ನು ಹೊರತುಪಡಿಸಿ, ರಾಧಾಕೃಷ್ಣ ನಿರ್ದೇಶನದ 'ರಾಧೆ ಶ್ಯಾಮ್'​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಪೂಜೆ ಹೆಗ್ಡೆ ನಟಿಸಿದ್ದು, ಇದು ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ನಿಂತಿದೆ. ಸೆಪ್ಟೆಂಬರ್​ನಲ್ಲಿ ಮತ್ತೆ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. 'ರಾಧೆ ಶ್ಯಾಮ್'​ ನಂತರ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಲಿರುವ ತ್ರಿಭಾಷೀಯ ಚಿತ್ರ ಸೆಟ್ಟೇರಲಿದ್ದು, ಇದನ್ನು ನಾಗ್​ ಅಶ್ವಿನ್​ ನಿರ್ದೇಶನ ಮಾಡಲಿದ್ದಾರೆ.

Published by:Anitha E
First published: