• Home
  • »
  • News
  • »
  • entertainment
  • »
  • Adipurush: ಟ್ರೋಲ್ ಆದ ಆದಿಪುರುಷ್ ಚಿತ್ರದ ಬಿಗ್ ಅಪ್​ಡೇಟ್ ರಿವೀಲ್!

Adipurush: ಟ್ರೋಲ್ ಆದ ಆದಿಪುರುಷ್ ಚಿತ್ರದ ಬಿಗ್ ಅಪ್​ಡೇಟ್ ರಿವೀಲ್!

ಆದಿಪುರುಷ ಚಿತ್ರ

ಆದಿಪುರುಷ ಚಿತ್ರ

ಆದಿಪುರುಷ ಸಿನೆಮಾದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ. ಕೃತಿ ಸನೋನ್ ಸೀತೆಯಾಗಿ ನಟಿಸಿದ್ದಾರೆ. ದೇವದತ್ತ ನಾಗೆ ಅವರು ಹನುಮಂತನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಲಾಗಿತ್ತು. ಚಿತ್ರದ ಮೇಲೆ ಬೆಟ್ಟದಷ್ಟು ನೀರಿಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಚಿತ್ರದ ಟೀಸರ್‌ ಯಾಕೋ ಅದನ್ನು ಹುಸಿಯಾಗಿಸುವಂತೆ ಮಾಡಿತ್ತು.

ಮುಂದೆ ಓದಿ ...
  • Share this:

ಪ್ರಭಾಸ್ ನಟನೆಯ 'ಆದಿಪುರುಷ್' (Adipurush) ಶ್ರೀರಾಮನ ಕುರಿತ ಸಿನಿಮಾ. ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ಬಣ್ಣ ಹಚ್ಚಿದ್ದಾರೆ. ಕೃತಿ ಸನೋನ್ ಸೀತೆಯಾಗಿ ನಟಿಸಿದ್ದಾರೆ. ದೇವದತ್ತ ನಾಗೆ ಅವರು ಹನುಮಂತನಾಗಿ (Hanuman) ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್‌ (Teaser) ಅನ್ನು ಬಿಡುಗಡೆ ಮಾಡಲಾಗಿತ್ತು. ಚಿತ್ರದ ಮೇಲೆ ಬೆಟ್ಟದಷ್ಟು ನೀರಿಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಚಿತ್ರದ ಟೀಸರ್‌ ಯಾಕೋ ಅದನ್ನು ಹುಸಿಯಾಗಿಸುವಂತೆ ಮಾಡಿದೆ. ಹೌದು, ಚಿತ್ರದ ಟೀಸರ್‌ ಸಾಕಷ್ಟು ಟೀಕೆಗೆ ಒಳಗಾಗಿದೆ. ಕಾರಣ ಇಷ್ಟೇ ಗ್ರಾಫಿಕ್ಸ್‌, ಪಾತ್ರದ ಗೆಟಪ್‌ಗಳು. ಆದಿಪುರುಷ್ ಚಿತ್ರ ಅದರ ವಿಷಯದ ಹೊರತಾಗಿ ಅದರ ಪಾತ್ರಗಳ (Characters) ನೋಟ ಮತ್ತು ಅದರ ಪ್ರಸ್ತುತಿಯ ಬಗ್ಗೆ ಟೀಕೆಗೆ ಗುರಿಯಾಗಿದೆ. 


ರಾವಣ, ಹನುಮಂತನ ಪಾತ್ರಗಳ ಚಿತ್ರಿಸಿದ ರೀತಿಗೆ ಟೀಕೆ
ಕೆಲವರು ಗ್ರಾಫಿಕ್ಸ್‌ ಅನ್ನು ಕಾರ್ಟೂನ್‌ ಎಂದರೆ, ಇನ್ನೂ ಕೆಲವರು ಇದ್ಯಾವ ಊರಿನ ರಾವಣ, ಆತ ಎಲ್ಲಿ ಹೇರ್‌ ಕಟ್ ಮಾಡಿಸಿದ್ದ ಅಂತಾ ಹೀಗೆ ಹಲವು ಟೀಕೆಗಳನ್ನು ಬಿಟ್ಟಿದ್ದಾರೆ.


ರಾವಣನ ಪಾತ್ರವನ್ನು ಅಲಾವುದ್ದೀನ್ ಖಿಲ್ಜಿಗೆ ಹೋಲಿಕೆ
ದೇವದತ್ತ ನಾಗ ಅವರು ಹನುಮಾನ್ ಆಗಿ ಬಣ್ಣ ಹಚ್ಚಿದ್ದು, ಚಿತ್ರದಲ್ಲಿ ಮಧ್ಯಕಾಲೀನ ಕ್ರೂರ ಮೊಘಲ್‌ ದೊರೆಯಂತೆ ಕಾಣುತ್ತಾನೆ ಎಂದು ಕೆಲವರು ಟ್ರೋಲ್‌ ಮಾಡಿದ್ದಾರೆ. ಇನ್ನೂ ಕೆಲವರು ರಾವಣನ ಪಾತ್ರವನ್ನು ಅಲಾವುದ್ದೀನ್ ಖಿಲ್ಜಿಗೆ ಹೋಲಿಸಿದ್ದಾರೆ. ಸಿನಿಮಾದಲ್ಲಿ ಹನುಮಂತನ ಪಾತ್ರವನ್ನು ತುಂಬಾ ಕೆಟ್ಟದಾಗಿ ತೋರಿಸಲಾಗಿದೆ ಎಂದು ಹಲವರು ಭಾವಿಸಿದ್ದಾರೆ. ಆದಿಪುರುಷ್ ಚಿತ್ರದಲ್ಲಿ ಆಂಜನೇಯನ ಪಾತ್ರಧಾರಿ ದಟ್ಟವಾದ ಗಡ್ಡ ಮತ್ತು ಮೀಸೆ ಇಲ್ಲದ ಹಾಗೆ ಚಿತ್ರಿಸಲಾಗಿದೆ ಮತ್ತು ಚರ್ಮದ ಬಟ್ಟೆಗಳನ್ನು ಧರಿಸಿರುವಂತೆ ತೋರಿಸಲಾಗಿದೆ.


ಇನ್ನೂ ಚಿತ್ರದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಸೈಫ್ ಅಲಿ ಖಾನ್ ರಾವಣನನ ಲುಕ್.‌ ಟೀಸರ್ ರಿಲೀಸ್ ಆದಾಗಿಂತ ಸೈಫ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಹಾಗಾದರೆ, ಧರ್ಮಗ್ರಂಥಗಳಲ್ಲಿ ಹನುಮಂತನ ಮತ್ತ ರಾವಣನ ಚಿತ್ರಣ ಹೇಗಿದೆ. ಈ ಎರಡು ಪಾತ್ರಗಳ ಗೋಚರಿಸುವಿಕೆಯ ಬಗ್ಗೆ ಧರ್ಮಗ್ರಂಥಗಳು ಏನು ಹೇಳುತ್ತವೆ ಎಂದು ನಾವಿಲ್ಲಿ ತಿಳಿಯೋಣ.


ಹನುಮಂತನ ನೋಟ ಗ್ರಂಥಗಳಲ್ಲಿ ಹೇಗೆ ಬಿಂಬಿತವಾಗಿದೆ?
ಕೇಸರಿ ನಂದನ, ಆಂಜನೇಯ, ವಾಯುಪುತ್ರ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಹನುಮಂತ ಭಕ್ತರ ಪಾಲಿನ ಬಂಧು. ಹಿಂದೂ ಧರ್ಮದಲ್ಲಿ ಹನುಮಂತನಿಗೆ ವಿಶೇಷವಾದ ಸ್ಥಾನವಿದೆ. ಹನುಮಂತ ಎಂದರೆ ಭೀಮನ ‌ ಶಕ್ತಿ, ಧೈರ್ಯ, ಪ್ರೀತಿ, ನಿಸ್ವಾರ್ಥ ಸೇವೆಗೆ ಹೆಸರಾದವನು, ಹನುಮಂತ ಹೇಗಿದ್ದಾನೆ ಎಂದರೆ ನೆನಪಾಗುವುದೇ ಮಂಗನ ರೀತಿಯ ಮುಖ, ಉದ್ದ ಬಾಲ, ಶಕ್ತಿಯುತ ದೇಹ. ಹನುಮಂತನ ಚಿತ್ರಣವದ ನೋಟವನ್ನು ನಾರದ ಪುರಾಣದ 3 ನೇ ವಿಭಾಗದಲ್ಲಿ ಕಾಣಬಹುದು.


ಇದನ್ನೂ ಓದಿ: Kantara: ಅಮೆರಿಕಾದಲ್ಲಿ ಕಾಂತಾರ ವೀಕ್ಷಿಸಿ ಜಗ್ಗೇಶ್ ಹೇಳಿದ್ದು ಹೀಗೆ


ನಾರದ ಪುರಾಣ 3.74.192-197 ರ ಪ್ರಕಾರ, ಹನುಮಂತನನ್ನು ಹೀಗೆ ವಿವರಿಸಲಾಗಿದೆ. ಓಂ ವಜ್ರಕಾಯ ವಜ್ರತುಂಡ - ವಜ್ರದಂತಹ ಗಟ್ಟಿ ದೇಹವನ್ನು ಹೊಂದಿರುವವನು, ಕಪಿಲ- ಕೆಂಪು ಕಂದು ಮುಖದವನು, ಪಿಂಗಲ -ಕಂದುಬಣ್ಣದ, ಊರ್ಧ್ವಕೇಶಾ - ಕೂದಲು ಉಳ್ಳವನು, ಮಹಾಬಲ ಹೊಂದಿರುವವ, ರಕ್ತಮುಖ - ಕೆಂಪು ಮುಖವುಳ್ಳವನು, ತದಿಜ್ಜಿಹ್ವ- ಹರಿತವಾದ ನಾಲಿಗೆಯುಳ್ಳವನು, ಮಹಾರೌದ್ರ ದಮಸ್ರೋತ್ಕಟ -ಕೋರೆಹಲ್ಲುಗಳು, ಕರಾಳ -ಭಯಾನಕ, ಮಹಾದೃಧಪ್ರಹಾರೇಶ -ಲಂಕಾಶ್ವರವಧ , ಮಹಾಸೇತುಬಂಧ -ರಾಮಸೇತುವನ್ನು ನಿರ್ಮಿಸಿದವನು, ಮಹಾಶೈಲಪ್ರವಾಹ - ಸಂಜೀವಿನಿ ಮಹಾಪರ್ವತವನ್ನು ಹೊತ್ತವನು, ಗಗನೇಕಾರ - ಆಕಾಶದಲ್ಲಿ ಹಾರುವವನು, ದೀರ್ಘಪುಚ್ಚೇನ ವೇಷ್ಠಾಯ ವೈರಿಣಂ - ಶತ್ರುವನ್ನು ಸುತ್ತುವರೆದಿರುವವನು, ಉದ್ದ ಬಾಲ ಹೀಗೆ ಹನುಮಂತನ ಚಿತ್ರಣವನ್ನು ಪುರಾಣವು ಕಟ್ಟಿಕೊಟ್ಟಿದೆ.


ಇನ್ನೂ ವಾಲ್ಮೀಕಿ ರಾಮಾಯಣದ ಉತ್ತರ ಕಾಂಡ್ 36.23 ರ ಪ್ರಕಾರ, ಬ್ರಹ್ಮ “ನಿಮ್ಮ ಮಗ ಹನುಮಂತನು ಶತ್ರುಗಳಿಗೆ ಭಯ ಹುಟ್ಟಿಸುವ ಮತ್ತು ಸ್ನೇಹಿತರಿಗೆ ಅಜೇಯನಾಗಿರುತ್ತಾನೆ. ಯುದ್ಧದಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ವಾಯುದೇವನಿಗೆ ಹೇಳಿದ್ದಾಗಿ ಇಲ್ಲಿ ಉಲ್ಲೇಖವಾಗಿದೆ. ಹನುಮಾನ್ ಚಾಲೀಸಾ ಪ್ರಕಾರ, ಹನುಮಂತ ಜನಿವಾರ ಧರಿಸುತ್ತಿದ್ದ ಎನ್ನಲಾಗಿದೆ.


ಗ್ರಂಥಗಳಲ್ಲಿನ ಉಲ್ಲೇಖಕ್ಕೂ ಆದಿಪುರುಷ್ ಚಿತ್ರದಲ್ಲಿ ತೋರಿಸಿದ್ದಕ್ಕೂ ಅಜ-ಗಜಾಂತರ ವ್ಯತ್ಯಾಸ
ಪುರಾಣಗಳ ಉಲ್ಲೇಖಗಳನ್ನು ನೋಡಿದರೆ ಆದಿಪುರುಷ್ ಚಿತ್ರದಲ್ಲಿ ತೋರಿಸಿದಂತೆ, ಬೋಳು ಮೀಸೆ, ಉದ್ದನೆಯ ಗಡ್ಡ ಇರುವ ಹನುಂತನ ಬಗ್ಗೆ ಎಲ್ಲಿಯೂ ಮಾಹಿತಿ ಇಲ್ಲ ಎಂಬುವುದು ಸ್ಪಷ್ಟವಾಗಿದೆ. ಸುಪ್ರಸಿದ್ಧ ಸಾಲಸರ್ ಬಾಲಾಜಿ ದೇವಸ್ಥಾನವು ಗಡ್ಡ ಮತ್ತು ಮೀಸೆ ಹೊಂದಿರುವ ಹನುಮಂತನನ್ನು ತೋರಿಸಿದರೂ, ಉಳಿದ ಯಾವುದೇ ಪ್ರಸಿದ್ಧ ದೊಡ್ಡ ದೇವಾಲಯಗಳು ಈ ರೀತಿ ಹನುಮ ವಿಗ್ರಹಗಳನ್ನು ಹೊಂದಿಲ್ಲ ಎಂಬುವುದನ್ನು ನಾವಿಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಹಾಗೆಯೇ ಆಂಜನೇಯ ಚರ್ಮದ ಬಟ್ಟೆಗಳನ್ನು ಧರಿಸಿರುವ ಬಗ್ಗೆಯೂ ಎಲ್ಲೂ ಉಲ್ಲೇಖಗಳಿಲ್ಲ.


ಹಿಂದೂ ಧರ್ಮಗ್ರಂಥಗಳಲ್ಲಿ ರಾವಣನ ಚಿತ್ರಣ
ಆದಿಪುರುಷ ಚಿತ್ರದಲ್ಲಿ ರಾವಣನ ಪಾತ್ರವನ್ನು ಮುಸ್ಲಿಂ ರಾಜನಂತೆ ತೋರಿಸಲಾಗಿದೆ ಎಂದು ಹಲವು ಸಿನಿರಸಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಿಗಿಲಾಗಿ ರಾವಣ ಪಾತ್ರಧಾರಿ ಸೈಫ್‌ ಅಲಿಖಾನ್‌ ಥೇಟ್‌ ಅಲ್ಲಾವುದ್ದೀನ್ ಖಿಲ್ಜಿಯನ್ನು ಹೋಲುತ್ತಾನೆ ಎಂದಿದ್ದಾರೆ. ಚಿತ್ರದಲ್ಲಿ ರಾವಣ ಪಾತ್ರಧಾರಿ ಉದ್ದ ಗಡ್ಡ, ಟ್ರೆಂಡಿಯಾಗಿರುವ ಹೇರ್‌ ಕಟ್‌ ಲುಕ್‌ ಮೂಲಕ ತೋರಿಸಲಾಗಿದೆ. ಹಾಗಾದರೆ ಪುರಾಣಗಳು ರಾವಣನನ್ನು ಹೇಗೆ ಚಿತ್ರಿಸಿವೆ, ರಾವಣ ನೋಡಲು ಹೇಗಿದ್ದ ಎಂಬುದನ್ನು ಇಲ್ಲಿ ನೋಡೋಣ.


ಇದನ್ನೂ ಓದಿ:   Priyamani: ಮೆಗಾಸ್ಟಾರ್ ಚಿತ್ರದಲ್ಲಿ ಪ್ರಿಯಾಮಣಿ; ನಾಯಕಿಯೋ? ಪ್ರಮುಖ ಪಾತ್ರವೋ?


ರಾವಣನ ಭೌತಿಕ ನೋಟವನ್ನು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದ ಅಧ್ಯಾಯ 9.33 ರ ಪ್ರಕಾರ, ರಾವಣನಿಗೆ ಆರಂಭದಲ್ಲಿ ದಶಗ್ರೀವ ಎಂದು ಹೆಸರಿಸಲಾಯಿತು ಏಕೆಂದರೆ ರಾವಣ 10 ತಲೆಗಳನ್ನು ಹೊಂದಿದ್ದನು. ನಂತರ, ವಾಲ್ಮೀಕಿ ರಾಮಾಯಣ ಉತ್ತರ ಕಾಂಡದ ಅಧ್ಯಾಯ 10.10-12 ರ ಪ್ರಕಾರ, ರಾವಣನು ತಪಸ್ಸನ್ನು ಮಾಡುವಾಗ ಯಾಗದ ಬೆಂಕಿಯಲ್ಲಿ ತನ್ನ 9 ತಲೆಗಳನ್ನು ಬಲಿಕೊಟ್ಟನು, ಅವನು 10,000 ವರ್ಷಗಳ ಕಾಲ ತಪಸ್ಸನ್ನು ಮಾಡಿದನು ಮತ್ತು ಪ್ರತಿ 1000 ವರ್ಷಗಳಲ್ಲಿ ಅವನು ತನ್ನ ಪ್ರತಿ ತಲೆಯನ್ನು ಯಾಗಕ್ಕೆ ಬಲಿಕೊಟ್ಟನು ಎನ್ನಲಾಗಿದೆ. ತಪಸ್ಸು ಪೂರ್ತಿ ಗೊಳಿಸಿದ ರಾವಣ ಬ್ರಹ್ಮನಿಂದ ವರ ಪಡೆಯುತ್ತಾನೆ.


ಕೈಲಾಸ ಪರ್ವತವನ್ನು ಎತ್ತುವ ಪ್ರಯತ್ನದಲ್ಲಿ ಕೈಲಾಸ ಪರ್ವತದಲ್ಲಿ ಸಿಲುಕಿಕೊಂಡಾಗ ಅವನು ಮಾಡಿದ ಶಬ್ದದಿಂದಾಗಿ ಭಗವಾನ್ ಶಿವ (ವಾಲ್ಮೀಕಿ ರಾಮಾಯಣ ಉತ್ತರ ಕಾಂಡದ ಅಧ್ಯಾಯ 16.37) ಅವನಿಗೆ ರಾವಣ ಎಂದು ಕರೆದನು. ಅಲ್ಲಿಂದ ದಶಗ್ರೀವ ರಾವಣ ಆದ ಎನ್ನುತ್ತವೆ ಪುರಾಣಗಳು. ಅಲ್ಲದೆ, ವಾಲ್ಮೀಕಿ ರಾಮಾಯಣ ಸುಂದರ ಕಾಂಡದ ಹತ್ತನೆಯ ಅಧ್ಯಾಯದ ಪ್ರಕಾರ, ಅವನ ತೋಳುಗಳು ಗಾತ್ರದಲ್ಲಿ ಸಮಾನವಾಗಿದ್ದವು ಮತ್ತು ಅಗಲವಾದ ಭುಜ ಹೊಂದಿದ್ದನು. ರಾವಣನ ಬೆರಳುಗಳು ಮತ್ತು ಮಣಿಕಟ್ಟುಗಳು ಆನೆಯ ಉದ್ದನೆಯ ಸೊಂಡಿಲಿನಂತೆ ಸುಂದರವಾಗಿದ್ದವು. ಆಭರಣಗಳೊಂದಿಗೆ ಕೆಂಪು ಚಂದನವನ್ನು ಲೇಪಿಸುವುದರಿಂದ ತೋಳುಗಳು ಕೆಂಪಾಗಿದ್ದವು. ಅವನ ಕಣ್ಣುಗಳು ಸಹ ಕೆಂಪಾಗಿದ್ದವು ಎನ್ನಲಾಗಿದೆ.


ಪುರಾಣ ಗ್ರಂಥಗಳು ರಾವಣನ ಚಿತ್ರಣವನ್ನು ಹೇಗೆ ಕಟ್ಟಿಕೊಟ್ಟಿವೆ?
ರಾವಣ ಧರಿಸುತ್ತಿದ್ದ ಕಿವಿಯೋಲೆಗಳು ಅವನ ಮುಖವನ್ನೂ ಸಹ ಹೊಳೆಯುವಂತೆ ಮಾಡುತ್ತಿತ್ತಂತೆ. ರಾವಣ ತೊಡತ್ತಿದ್ದ ಕಿರೀಟವೇ ಅವನಿಗೆ ಕಳಶವಾಗಿತ್ತು ಎನ್ನುತ್ತವೆ ಹಿಂದೂ ಪುರಾಣ ಗ್ರಂಥಗಳು. ರಾವಣನ ಧ್ವನಿ ಭಯಕಂರವಾಗಿತ್ತು, ಅಲ್ಲದೇ ಆತ ಹಾವಿನಂತೆ ಬುಸುಗುಡುತ್ತಿದ್ದನಂತೆ. ಒಟ್ಟಾರೆ ರಾವಣ ಗಂಗಾ ನದಿಯಲ್ಲಿ ವಿಶ್ರಾಂತಿ ಪಡೆಯುವ ಆನೆಯಂತೆ ಕಾಣುತ್ತಿದ್ದ ಎಂದು ಪುರಾಣ ಗ್ರಂಥಗಳು ಅವನ ಚಿತ್ರಣವನ್ನು ಕಟ್ಟಿಕೊಟ್ಟಿವೆ.


ಪುರಾಣ ಗ್ರಂಥದಲ್ಲಿ ಕಟ್ಟಿಕೊಟ್ಟಿರುವ ರಾವಣ ನಮ್ಮ ಹಳೆಯ ಚಿತ್ರಗಳಲ್ಲಿ ತೋರಿಸುತ್ತಿದ್ದ ರಾವಣ ಒಂದೇ ರೀತಿ ಇದ್ದರು. ಆದರೆ ಆದಿಪುರುಷದಲ್ಲಿ ತೋರಿಸಿದ ರಾವಣ ಪುರಾಣ ಗ್ರಂಥಗಳು ಕಟ್ಟಿಕೊಟ್ಟ ಹಾಗಿಲ್ಲ, ಈ ರಾವಣ ಅಲ್ಲಾವುದ್ದೀನ್ ಖಿಲ್ಜಿಯಂತೆ ಕಾಣುತ್ತಾರೆ ಎನ್ನುವುದು ಹಲವಾರ ವಾದ. ಹಾಗೆಯೇ ರಾವಣನು ಉದ್ದನೆಯ ಗಡ್ಡವನ್ನು ಹೊಂದಿದ್ದನೆಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.


ಇದನ್ನೂ ಓದಿ:  Pushpa: ಪುಷ್ಪಾ 2 ಫಸ್ಟ್ ಲುಕ್ ಬಗ್ಗೆ ಬಿಗ್ ಅಪ್ಡೇಟ್, ಅಭಿಮಾನಿಗಳು ಥ್ರಿಲ್


ರಾವಣನ ಕ್ರೂರ ವರ್ತನೆಯನ್ನು ನಾವು ಸಮರ್ಥಿಸಲು ಸಾಧ್ಯವಿಲ್ಲವಾದರೂ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡ್ 13.8-9 ರ ಪ್ರಕಾರ, ರಾವಣನು ಋಷಿಗಳು, ದೇವತೆಗಳು, ಯಕ್ಷರು ಮತ್ತು ಇತರರನ್ನು ಭಯಭೀತಗೊಳಿಸಿ ಕೊಂದನು. ಅವನು ಮರಗಳನ್ನು ಕಿತ್ತು ಪರ್ವತಗಳನ್ನು ಒಡೆಯುವಷ್ಟು ಶಕ್ತಿ ಹೊಂದಿದ್ದನು.


ಧರ್ಮಗ್ರಂಥಗಳ ವಿರುದ್ಧವಾಗಿ ಪಾತ್ರಗಳು ಇರಬಾರದು
ಇಲ್ಲಿ ಯಾರೊಬ್ಬರ ಸಮರ್ಥನೆಯೂ ನಡೆಯುತ್ತಿಲ್ಲ. ಬದಲಿಗೆ ಒಬ್ಬರು ನಮ್ಮ ಹಿಂದೂ ಪಾತ್ರಗಳನ್ನು (ನಾಯಕ ಅಥವಾ ಖಳನಾಯಕ) ನಮ್ಮ ಧರ್ಮಗ್ರಂಥಗಳ ಪ್ರಕಾರ ಚಿತ್ರಿಸಬೇಕೇ ಹೊರತು ಇನ್ನೊಂದು ಧಾರ್ಮಿಕ ಪುಸ್ತಕದಂತೆ ಅಲ್ಲ. ಪುರಾಣಗಳಲ್ಲಿ ಬರುವ ಪಾತ್ರ ವರ್ಗಗಳ ಮೇಲೆ ಈಗಾಗಲೇ ಒಂದು ಕಲ್ಪನೆ ಚಿತ್ರಿತವಾಗಿದೆ. ಹೀಗಾಗಿ ಆ ಪಾತ್ರಗಳು ಅದೇ ರೀತಿ ಬಿಂಬಿತವಾದರೆ ಸಿನಿಮಾ ಸಹ ಚೆನ್ನಾಗಿ ಮೂಡಿ ಬರುತ್ತದೆ ಮತ್ತು ಪುರಾಣಕ್ಕೂ ಬೆಲೆ ಇರುತ್ತದೆ.

Published by:Ashwini Prabhu
First published: