HOME » NEWS » Entertainment » ADHEERA POSTER HAS BEEN RELEASED AS SANJAY DUTT PLAYS VILLAIN ROLE IN KGF CHAPTER TWO AE

KGF Chapter 2 Poster: ಅಧೀರನಾದ ಸಂಜುಬಾಬಾ: ಬಿ-ಟೌನ್​ ಖಳನಾಯಕ್​ಗೆ ಕೆ.ಜಿ.ಎಫ್​ ತಂಡದ ಭರ್ಜರಿ ಗಿಫ್ಟ್​​..!

Adheera | Sanjay Dutt: ಇದೇ ಮೊದಲ ಬಾರಿಗೆ ಬಾಲಿವುಡ್​ ಖಳನಾಯಕ್​ ಸಂಜಯ್​ ದತ್​ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಕೆ.ಜಿ.ಎಫ್​ ಚಾಪ್ಟರ್​​ 2 ಸಿನಿಮಾದಲ್ಲಿ ಸಂಜು ಬಾಬ ವಿಲನ್​ ಅಧೀರನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

Anitha E | news18
Updated:July 29, 2019, 11:19 AM IST
KGF Chapter 2 Poster: ಅಧೀರನಾದ ಸಂಜುಬಾಬಾ: ಬಿ-ಟೌನ್​ ಖಳನಾಯಕ್​ಗೆ ಕೆ.ಜಿ.ಎಫ್​ ತಂಡದ ಭರ್ಜರಿ ಗಿಫ್ಟ್​​..!
ಅಧೀರನಾಗಿ ಸಂಜಯ್​ ದತ್​
  • News18
  • Last Updated: July 29, 2019, 11:19 AM IST
  • Share this:
- ಅನಿತಾ ಈ,

ಪ್ರಶಾಂತ್​ ನೀಲ್​ ನಿರ್ದೇಶನದ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕನ್ನಡದ ಬಹು ನಿರೀಕ್ಷಿತ ಸಿನಿಮಾದ ವಿಲನ್​ ಅಧೀರನ ಪೋಸ್ಟರ್​ ಬಿಡುಗಡೆಯಾಗಿದೆ. ಈ ಹಿಂದೆ ಹರಿದಾಡುತ್ತಿದ್ದ ಸುದ್ದಿಯಂತೆ ಬಿ-ಟೌನ್​ ಖಳನಾಯಕ್​ ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಮಿಂಚಲಿದ್ದಾರೆ.

ಅಧೀರನ ಲುಕ್​ನಲ್ಲಿ ಸಂಜು ಬಾಬ ಸಖತ್​ ಖಡಕ್​ ಆಗಿ ಕಾಣಸಿಕೊಂಡಿದ್ದು, ರಾಕಿಂಗ್​ ಸ್ಟಾರ್​ ಮುಂದೆ ಮಾನಸ್ಟರ್​ ವಿಲನ್​ ಆಗಿ ತೊಡೆ ತಟ್ಟಲು ಸಜ್ಜಾಗಿದ್ದಾರೆ.

Here Comes #MotherOfAllCollisions, @duttsanjay as #Adheera
ಎಲ್ಲದಕ್ಕೂ ವಿಶೇಷವಾಗಿ ಇಂದು ನಟ ಸಂಜಯ್​ ದತ್​ ಹುಟ್ಟುಹಬ್ಬ. ಅವರಿಗೆ ಬರ್ತ್​ಡೇ ಗಿಫ್ಟ್​ ಆಗಿ 'ಕೆ.ಜಿ.ಎಫ್​. ಚಾಪ್ಟರ್​ 2' ಚಿತ್ರತಂಡ ಈ ಪೋಸ್ಟರ್​ ಅನ್ನು ಉಡುಗೊರೆಯಾಗಿ ನೀಡಿದೆ.

ಇದನ್ನೂ ಓದಿ: Kurukshetra TikTok Contest: ಕುರುಕ್ಷೇತ್ರ ಸಿನಿಮಾದ ಉಚಿತ ಟಿಕೆಟ್​ ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಅವಕಾಶ..!

ಈ ಹಿಂದೆ ಚಿತ್ರತಂಡ ಕೇವಲ ಅಧೀರ ಉಂಗುರ ತೊಟ್ಟ ಕೈ ಮುಷ್ಠಿ ಇರುವ ಪೋಸ್ಟರ್​ ಅನ್ನು ಮಾತ್ರ ಬಿಡುಗಡೆ ಮಾಡಿತ್ತು. ಆದರೆ ಸಂಜಯ್​ ಅವರ ಹೊಸ ಪೋಸ್ಟರ್​ನಲ್ಲಿ ಅವರ ನೋಡ, ಕಣ್ಣಲ್ಲಿರುವ ಸಿಟ್ಟು, ನಿಜಕ್ಕೂ ಆ ಪತ್ರಕ್ಕೆ ಹೇಳಿ ಮಾಡಿಸಿದಂತಿದೆ.

ರಾಕಿಂಗ್​ ಸ್ಟಾರ್​ ಅಭಿನಯಿಸಿರುವ ಮಾನ್​ಸ್ಟರ್ ಪಾತ್ರಕ್ಕೆ ತಕ್ಕಂತೆ ಖಡಕ್​ ವಿಲನ್​ ಅನ್ನೂ ಚಿತ್ರ ತಂಡ ಆಯ್ಕೆ ಮಾಡಿಕೊಂಡಿರುವುದು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Rahul Bose: ಬಾಳೆಹಣ್ಣಿನ ಎಫೆಕ್ಟ್​: ಉಚಿತವಾಗಿ ಹಣ್ಣುಗಳನ್ನು ಕೊಡುತ್ತಿದೆ ಈ ಪಂಚತಾರಾ​ ಹೋಟೆಲ್..!​

ಸಂಜಯ್​ ದತ್​ 'ಅಗ್ನಿಪಥ್​' ಸಿನಿಮಾದಲ್ಲಿ ಹೃತಿಕ್​ ಮುಂದೆ ಕಂಚಾ ಚೀನಾ ಎಂಬ ವಿಲನ್​ ಪಾತ್ರದಲ್ಲಿ ಅಭಿನಯಿಸಿದ್ದರು. ಇದರಲ್ಲಿ ಸಂಜಯ್​ ನಿಜಕ್ಕೂ ಪ್ರೇಕ್ಷಕರ ಮನ ಗೆದಿದ್ದರು. ಅವರು ತಮ್ಮ ಹೀರೋ ಇಮೇಜ್​ನಿಂದ ಹೊರ ಬಂದು ಇಂತಹ ಖಳ ಪಾತ್ರದಲ್ಲಿ ಅಭಿನಯಿಸಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಅಲ್ಲದೆ ಆ ಪಾತ್ರ ಅವರ ಸಿನಿ ಜೀವನದ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ.

Sonakshi Sinha: ದೇಹದ ತೂಕ ಇಳಿಸಿಕೊಂಡ ನಂತರ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ಸೋನಾಕ್ಷಿ..!


 
First published: July 29, 2019, 10:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories