Adheera: ಅಧೀರನಿಗೆ ಅನಾರೋಗ್ಯ, ಕೆಜಿಎಫ್- 2ಗೆ ಪೆಟ್ಟು! ನೋವೇ, ಚಾನ್ಸೇ ಇಲ್ಲ ಅಂದರು ರಾಕಿಭಾಯ್!

KGF Chapter 2: ಅಧೀರನಿಲ್ಲದೇ ಚಿತ್ರ ಅಂತ್ಯಗೊಳ್ಳುವುದಿಲ್ಲ ಎಂಬ  ಸುದ್ದಿ ಹಬ್ಬಿತ್ತು. ಆದರೆ, ಪ್ರಶಾಂತ್​ ನೀಲ್​ ಈಗ ಸ್ಕ್ರಿಪ್ಟ್​ನಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಸಿನಿಮಾ ಮುಗಿಸಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

news18-kannada
Updated:September 23, 2020, 8:36 AM IST
Adheera: ಅಧೀರನಿಗೆ ಅನಾರೋಗ್ಯ, ಕೆಜಿಎಫ್- 2ಗೆ ಪೆಟ್ಟು! ನೋವೇ, ಚಾನ್ಸೇ ಇಲ್ಲ ಅಂದರು ರಾಕಿಭಾಯ್!
yash
  • Share this:
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಇದೇ ಅಕ್ಟೋಬರ್​ನಲ್ಲಿ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ, ಕೊರೊನಾ ಹಾವಳಿ, ಲಾಕ್ಡೌನಿಂದಾಗಿ ಈ ಸಿನಿಮಾ ಬಿಡುಗಡೆ ತಡವಾಗಲಿದೆ. ಇದಾದ ಬಳಿಕ ಅಕ್ಟೋಬರ್​ 26ರಂದು ಈ ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಅನ್​ಲಾಕ್​ ಬಳಿಕ ಮುನ್ನೆಚ್ಚರಿಕೆ ಕ್ರಮದೊಂದಿಗೆ ಅರ್ಧಕ್ಕೆ ನಿಂತ ಚಿತ್ರೀಕರಣವನ್ನು ಮತ್ತೆ ಪ್ರಾರಂಭಿಸಲು ಚಿತ್ರತಂಡ ಹುಮ್ಮಸ್ಸು ತೊರಿತು. ಆದರೆ, ಸಂಜಯ್​ ದತ್​ ಅನಾರೋಗ್ಯಕ್ಕೆ ಒಳಗಾಗುವ ಮೂಲಕ ಇಡೀ ಚಿತ್ರತಂಡ ಶಾಕ್​ಗೆ ಒಳಗಾಯಿತು. ' ಕೆಜಿಎಫ್​- ಚಾಪ್ಟರ್​ 2'ನಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ಸಂಜಯ್​ ದತ್ ಚಿಕಿತ್ಸೆಗೆಂದು ತೆರಳಿದರು. ಇದರಿಂದ ಚಿತ್ರೀಕರಣ ನಿಲ್ಲಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ, ನಿರ್ದೇಶಕ ಪ್ರಶಾಂತ್​ ನೀಲ್ ಯಾವುದೇ ಕಾರಣಕ್ಕೂ ಚಿತ್ರವನ್ನು ಸಾಕಷ್ಟು ವಿಳಂಬಮಾಡುವುದಿಲ್ಲ ಎಂಬ ಭರವಸೆಯನ್ನು​  ಕೆಜಿಎಫ್​​-2  ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

KGF 2: Sanjay Dutt ADHEERA Look Copied From Bahubali
ಅಧೀರ ಪಾತ್ರದಲ್ಲಿ ಸಂಜಯ್​


ಐದು ಭಾಷೆಗಳಲ್ಲಿಯೂ ಸದ್ದು ಮಾಡಿದ್ದ 'ಕೆಜಿಎಫ್​ ಚಾಪ್ಟರ್​ 2' ಬಗ್ಗೆ ಈಗಾಗಲೇ ಎಲ್ಲ ಅಭಿಮಾನಿಗಳಿಂದಲೂ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. 'ಅಧೀರ'ನ ಪಾತ್ರದಲ್ಲಿ ನಟಿಸುತ್ತಿರುವ 'ಸಂಜಯ್​ ದತ್'​ ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿದ್ದರು. ಆದರೆ, ಯಶ್​ ಜೊತೆಗಿನ ಫೈಟ್​ ಸೀನ್​ ಒಂದು ಬಾಕಿ ಉಳಿದಿತ್ತು. ಈ ನಡುವೆ ಶ್ವಾಸಕೋಶ ಕ್ಯಾನ್ಸರ್​ಗೆ ತುತ್ತಾದ ಅವರು ಚಿತ್ರೀಕರಣದಿಂದ ಹೊರ ಬಿದ್ದರು.



ಅಧೀರನಿಲ್ಲದೇ ಚಿತ್ರ ಅಂತ್ಯಗೊಳ್ಳುವುದಿಲ್ಲ ಎಂಬ  ಸುದ್ದಿ ಹಬ್ಬಿತ್ತು. ಆದರೆ, ಪ್ರಶಾಂತ್​ ನೀಲ್​ ಈಗ ಸ್ಕ್ರಿಪ್ಟ್​ನಲ್ಲಿ ಕೊಂಚ ಬದಲಾವಣೆ ಮಾಡುವ ಮೂಲಕ ಸಿನಿಮಾ ಮುಗಿಸಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.

ಅಕ್ಟೋಬರ್​ ಮೊದಲವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಇದೇ ತಿಂಗಳ ಅಂತ್ಯಕ್ಕೆ ಸಂಪೂರ್ಣ ಚಿತ್ರೀಕರಣ ಮುಗಿಯಲಿದೆ. ಇದಕ್ಕಾಗಿ ಬೆಂಗಳೂರಿನಲ್ಲಿಯೇ ಸೆಟ್​ ನಿರ್ಮಿಸಲು ತೀರ್ಮಾನಿಸಲಾಗಿದೆ. ಕೊಂಚ ಲೇಟಾದರೂ ಲೆಟೆಸ್ಟಾಗಿ ಬಂದು ಅಭಿಮಾನಿಗಳನ್ನು ಮೋಡಿ ಮಾಡುತ್ತೇವೆ ಎನ್ನುತ್ತಿದ್ದಾರೆ ರಾಕಿ ಭಾಯ್​.

ಈಗಾಲೇ ಚಿತ್ರೀಕರಣ ಆರಂಭಿಸಿರುವ ಸಿನಿ ತಂಡಕ್ಕೆ ಪ್ರಕಾಶ್​ ರೈ ಸೇರ್ಪಡೆಯಾಗಿದ್ದಾರೆ. ಆದರೆ, ಅದು ಅನಂತ್​ ನಾಗ್​ ಅವರ ಜಾಗಕ್ಕೆ ಎಂದು ಸುದ್ದಿಯಾಗಿತ್ತು. ಇದರಿಂದ ಸಿಟ್ಟಿಗೆದ್ದ ನೆಟ್ಟಿಗರು ಬಾಯ್ಕಾಟ್​ ಕೆಜಿಎಫ್​ 2 ಎಂದು ಕಮೆಂಟ್​ ಮಾಡುತ್ತಿದ್ದರು. ಸಾಲದಕ್ಕೆ ಪ್ರಕಾಶ್​ ರೈ ಅವರನ್ನು ಸಿನಿಮಾಗೆ ತೆಗೆದುಕೊಳ್ಳಬಾರದಿತ್ತು. ಈ ನಿರ್ಧಾರ ತಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಿಟ್ಟು ಹೊರ ಹಾಕಿದ್ದಾರೆ ನೆಟ್ಟಿಗರು. ಈಗ ಪ್ರಶಾಂತ್​ ನೀಲ್​ ತಮ್ಮ ನಿರ್ಧಾರದ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ
Published by: Seema R
First published: September 23, 2020, 7:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading