• Home
  • »
  • News
  • »
  • entertainment
  • »
  • Adah Sharma: ಸೀರೆಯುಟ್ಟು ಬೀಚ್​ನಲ್ಲಿ ಕಾರ್ಟ್​ವೀಲ್​ ಫ್ಲಿಪ್​ ಮಾಡಿದ ಅದಾ ಶರ್ಮಾ..!

Adah Sharma: ಸೀರೆಯುಟ್ಟು ಬೀಚ್​ನಲ್ಲಿ ಕಾರ್ಟ್​ವೀಲ್​ ಫ್ಲಿಪ್​ ಮಾಡಿದ ಅದಾ ಶರ್ಮಾ..!

ನಟಿ ಅದಾ ಶರ್ಮಾ

ನಟಿ ಅದಾ ಶರ್ಮಾ

Cartwheel Flip: ಕಡಲ ತೀರದಲ್ಲಿ ಸೋಮವಾರ ಬೆಳಿಗ್ಗೆ ಅದಾ ಅವರ ವರ್ಕೌಟ್​ ಸೆಷನ್ಸ್​ ಆರಂಭವಾಗಿದ್ದು ಹೀಗೆ. ಸೀಯುಟ್ಟ ಅದಾ ಶರ್ಮಾ ಬೀಚ್​ನಲ್ಲಿ ಕಾರ್ಟ್​ವೀಲ್​ ಫ್ಲಿಪ್​ ಮಾಡಿದ್ದಾರೆ. ಅವರ ಈ ವಿಡಿಯೋ ವೈರಲ್​ ಆಗುತ್ತಿದೆ.

  • Share this:

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್​ ಫೋಟೋಗಳಿಂದಲೇ ಸುದ್ದಿಯಲ್ಲಿರುವ ನಟಿ ಅದಾ ಶರ್ಮಾ. ಇತ್ತೀಚೆಗಷ್ಟೆ ತಮ್ಮ ಲೆಟೆಸ್ಟ್​ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವು ವೈರಲ್​ ಆಗಿದ್ದವು. ಫೋಟೋಗಳ ಜೊತೆಗೆ ತಮ್ಮ ವಿಭಿನ್ನವಾದ ವಿಡಿಯೋಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ ಅದಾ. ಈ ನಟಿಯ ಹಾಟ್​ ಫೋಟೋಗಳಿಗೆ ಅಭಿಮಾನಿಗಳು ಮುಗಿಬಿದ್ದು ಕಮೆಂಟ್​ ಹಾಗೂ ಲೈಕ್​ ಮಾಡುತ್ತಿರುತ್ತಾರೆ. ಅದಾ ಶರ್ಮಾ ಇತ್ತೀಚೆಗೆ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹಾಟ್​ ಫೋಟೋಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಲಾಕ್​ಡೌನ್​ನಲ್ಲೂ ಸಹ ನಟಿ ಅದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದರು. ಫ್ಯಾನ್ಸ್​ಗಾಗಿ ನಿತ್ಯ ಅಪ್ಡೇಟ್​ ಕೊಡುತ್ತಿದ್ದರು. ಒಮ್ಮೆ ತಮ್ಮ ಡ್ಯಾನ್ಸ್ ವಿಡಿಯೋ ಹಾಕಿದರೆ, ಒಮ್ಮೆ ತಮ್ಮ ವಿಭಿನ್ನವಾದ ಫೋಟೋಶೂಟ್​ಗಳ ಸ್ಟಿಲ್ಸ್​. ಈಗ ಇದೇ ನಟಿ ತಮ್ಮ ಸಖತ್ ಡಿಫರೆಂಟ್​ ಫಿಟ್ನೆಸ್​ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದಾರ ಈ ವಿಡಿಯೋ ಅಭಿಮಾನಿಗಳು ಸಖತ್​ ಕಮೆಂಟ್​ ಮಾಡುತ್ತಿದ್ದಾರೆ. 


ಅದಾ ಶರ್ಮಾ ಎಲ್ಲ ನಟಿಯರಂಎ ತಮ್ಮ ಫಿಟ್ನೆಸ್​ಗೆ ಪ್ರಾಮುಖ್ಯತೆ ಕೊಡುತ್ತಾರೆ. ಜೊತೆಗೆ ವರ್ಕಾಟ್​ ಅನ್ನು ಸಖತ್ ಎಂಜಾಯ್ ಮಾಡುತ್ತಾ ಮಾಡುತ್ತಾರೆ. ಅವರು ಎಷ್ಟರ ಮಟ್ಟಿಗೆ ತಮ್ಮ ಫಿಟ್ನೆಸ್​ ಸೆಷನ್ಸ್​ ಎಂಜಾಯ್​ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ.

View this post on Instagram


A post shared by Adah Sharma (@adah_ki_adah)

ಕಡಲ ತೀರದಲ್ಲಿ ಸೋಮವಾರ ಬೆಳಿಗ್ಗೆ ಅದಾ ಅವರ ವರ್ಕೌಟ್​ ಸೆಷನ್ಸ್​ ಆರಂಭವಾಗಿದ್ದು ಹೀಗೆ. ಸೀಯುಟ್ಟ ಅದಾ ಶರ್ಮಾ ಬೀಚ್​ನಲ್ಲಿ ಕಾರ್ಟ್​ವೀಲ್​ ಫ್ಲಿಪ್​ ಮಾಡಿದ್ದಾರೆ. ಅವರ ಈ ವಿಡಿಯೋ ವೈರಲ್​ ಆಗುತ್ತಿದ್ದು, ಕೆಲವರು ಕ್ರೇಜಿ ಅಂತ ಕಮೆಂಟ್  ಮಾಡಿದರೆ, ಅದಾಗೆ ಹುಚ್ಚು ಹಿಡಿದಿದೆಯಾ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.


Adah Sharma photogallery, Adah Sharma hot photos, Adah Sharma new pics, Adah Sharma sexy images, Adah Sharma photos, CartWheel Flip By Adah Sharma, ಸೀರೆಯಲ್ಲಿ ಕಾರ್ಟ್​ ವೀಲ್​ ಫ್ಲಿಪ್​ ಮಾಡಿದ ಅದಾ ಶರ್ಮಾ, ಅದಾ ಶರ್ಮಾ, ಬಾಲಿವುಡ್​ ನಟಿ ಅದಾ ಶರ್ಮಾ, Adah Sharma tried Cart Wheel flip by wearing saree here is the crazy video ae
ನಟಿ ಅದಾ ಶರ್ಮಾ


ಇನ್ನು ಈ ಹಿಂದೆ ಲಾಕ್​ಡೌನ್​ನಲ್ಲಿ  ತಮ್ಮ ಅರ್ಜಿ ಜೊತೆ ಅಭಿಮಾನಿಗಳಿಗಾಗಿ ಆನ್​ಲೈನ್​ನಲ್ಲಿ ಪಾರ್ಟಿ ಆಯೀಜಿಸಿದ್ದರು. ಅದು ಪಾರ್ಟಿ ವಿತ್​ ಪಾಟಿ. ತಮ್ಮ ಅಜ್ಜಿ ಜೊತೆ ಡ್ಯಾನ್ಸ್​ ಮಾಡುತ್ತಾ ಅದರ ವಿಡಿಯೋಗಳನ್ನು ಹಂಚಿಕೊಂಡಿದ್ದರು.

View this post on Instagram


A post shared by Adah Sharma (@adah_ki_adah)

ಅದಾ ಶರ್ಮಾ 16 ವರ್ಷದವರಿದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. 2008ರಲ್ಲೇ ಅದಾ ಅವರ ಬಣ್ಣದ ಜಗತ್ತಿನ ಪಯಣ ಆರಂಭವಾಗಿತ್ತು. ವಿಕ್ರಂ ಭಟ್​ ಅವರ ಸಿನಿಮಾ 1920ರ ಮೂಲಕ ಅದಾ ಬಾಲಿವುಡ್​ಗೆ ಕಾಲಿಟ್ಟರು.

View this post on Instagram


A post shared by Adah Sharma (@adah_ki_adah)

ಅದಾ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ಲೆಟೆಸ್ಟ್​ ಫೋಟೋಗಳು ಸದ್ಯ ವೈರಲ್​ ಆಗುತ್ತಿವೆ. ಮೆರೂನ್​ ಕಲರ್​ ಸ್ಲಿಟ್​ ಗೌನ್​ನಲ್ಲಿ ಅದಾ ಸಖತ್​ ಹಾಟಾಗಿ ಕಾಣಿಸಿಕೊಂಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದಾರೆ ಈ ನಟಿಗೆ.

Published by:Anitha E
First published: