ಬಾಲಿವುಡ್ನ (Bollywood) ಕ್ಯೂಟ್ ನಟಿ ಆದಾ ಶರ್ಮಾ (Adah Sharma) ಅವರು ಸ್ವಲ್ಪ ತೆರೆಮರೆಗೆ ಸರಿದಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯಲ್ಲಿದ್ದ ಆದಾ ಶರ್ಮಾ ಅವರು ಈಗ ಅವಾಕಶಗಳ ಕೊರತೆ ಎದುರಿಸುತ್ತಿದ್ದಾರೆ. ಆದರೆ ನಟಿಯ (Actress) ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾರಣ ಏನು ಅಂತೀರಾ? ನಟಿಯ ಇನ್ಸ್ಟಾಗ್ರಾಮ್ (Instagram) ಕಂಟೆಂಟ್ಗಳು ಅಷ್ಟು ಇಂಟ್ರೆಸ್ಟಿಂಗ್ ಆಗಿವೆ. ನಟಿ ಪ್ರತಿದಿನ ವಿಡಿಯೋ ಹಾಗೂ ಫೋಟೋಗಳನ್ನು (Photos) ಶೇರ್ ಮಾಡುತ್ತಲೇ ಇರುತ್ತಾರೆ.
ಇದೀಗ ನಟಿ ಇಡ್ಲಿ ತಿನ್ನುವುದು ಹೇಗೆ ಎಂದು ಹೇಳಿಕೊಡುವಂತಹ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕ್ಯೂಟ್ ಎನಿಸಿತು. ಆಮೇಲೆ ಬಹುಶಃ ಡಿಲೀಟ್ ಮಾಡಬಹುದು. ಸ್ನೇಹಲ್ ನನ್ನನ್ನು ಒಂದುಕಡೆ ಕೂರಿಸಲು ಮಾಡಿದ ಟ್ರಿಕ್ ಎಂದು ನಟಿ ಬರೆದಿದ್ದಾರೆ. ನಟಿ ಸಾಂಬಾರಿಗೆ ಇಡ್ಲಿಯನ್ನು ಹಾಕಿ ನಂತರ ಸ್ಪೂನ್ನಿಂದ ಅದ್ದಿ ತೆಗೆದು ಬೇಗ ಬೇಗನೆ ಇಡ್ಲಿ ಸೇವಿಸುವ ವಿಡಿಯೋ ವೈರಲ್ ಆಗಿದೆ.
View this post on Instagram
ಆದಾ ಶರ್ಮಾ ಅವರು ಇಡ್ಲಿ ತಿನ್ನುವ ವಿಡಿಯೋಗೆ ಬರೋಬ್ಬರಿ 91 ಸಾವಿರ ಲೈಕ್ಸ್ ಬಂದಿದೆ. 1200ಕ್ಕೂ ಹೆಚ್ಚು ಅಭಿಮಾನಿಗಳು ನಟಿಯ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ನಟಿ ಇದರಲ್ಲಿ ಆಗಷ್ಟೇ ಸ್ನಾನ ಮುಗಿಸಿ ಬಂದು ಕುಳಿತುಕೊಂಡಿರುವಂತೆ ಕಾಣಿಸಿದ್ದಾರೆ.
ಏನಂದಿದ್ದಾರೆ ನೆಟ್ಟಿಗರು?
ನಟಿ ಆದಾ ಅವರು ಇಡ್ಲಿ ತಿನ್ನುವ ವಿಡಿಯೋ ನೋಡಿದ ಜನರು ವಿಡಿಯೋ ಡಿಲೀಟ್ ಮಾಡಬೇಡಿ. ತುಂಬಾ ಕ್ಯೂಟ್ ಆಗಿದೆ. ನಾವು ಕೂಡಾ ಹೀಗೆಯೇ ಇಡ್ಲಿ ತಿನ್ನುತ್ತೇವೆ. ನೀವು ಆರಾಮಾವಾಗಿ ಫ್ರೀಯಾಗಿ ನಮ್ಮ ಜೊತೆ ವಿಡಿಯೋ ಶೇರ್ ಮಾಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: Happy Birthday Adah Sharma: ಹುಟ್ಟುಹಬ್ಬದ ಸಂಭ್ರಮದಲ್ಲಿ ಅದಾ ಶರ್ಮಾ: ಇಲ್ಲಿವೆ ನಟಿಯ ಗ್ಲಾಮರಸ್ ಫೋಟೋಗಳು..!
ಇನ್ನೂ ಕೆಲವರು ನೀವು ಯೂಟ್ಯೂಬ್ನಿಂದ ಹಿಂದಿ ಯಾವಾಗ ಕಲಿತಿರಿ ಎಂದು ಪ್ರಶ್ನಿಸಿದ್ದಾರೆ. ನೀವು ಬರೀ ನಟಿಯಲ್ಲ. ನಿಮಲ್ಲಿ ಏನೋ ಎಕ್ಸ್ಟ್ರಾ ಇದೆ ಎಂದಿದ್ದಾರೆ ನೆಟ್ಟಿಗರು.
ಅದಾ ಶರ್ಮಾ ಎಲ್ಲ ನಟಿಯರಂತೆ ತಮ್ಮ ಫಿಟ್ನೆಸ್ಗೆ ಪ್ರಾಮುಖ್ಯತೆ ಕೊಡುತ್ತಾರೆ. ಜೊತೆಗೆ ವರ್ಕೌಟ್ ಅನ್ನು ಸಖತ್ ಎಂಜಾಯ್ ಮಾಡುತ್ತಾ ಮಾಡುತ್ತಾರೆ. ಅವರು ಅಷ್ಟರ ಮಟ್ಟಿಗೆ ತಮ್ಮ ಫಿಟ್ನೆಸ್ ಸೆಷನ್ಸ್ ಎಂಜಾಯ್ ಮಾಡುತ್ತಾರೆ.
View this post on Instagram
ಈ ಹಿಂದೆ ಲಾಕ್ಡೌನ್ನಲ್ಲಿ ತಮ್ಮ ಅಜ್ಜಿ ಜೊತೆ ಅಭಿಮಾನಿಗಳಿಗಾಗಿ ಆನ್ಲೈನ್ನಲ್ಲಿ ಪಾರ್ಟಿ ಆಯೀಜಿಸಿದ್ದರು ಈ ನಟಿ. ಅದು ಪಾರ್ಟಿ ವಿತ್ ಪಾಟಿ ಎಂದಾಗಿತ್ತು. ತಮ್ಮ ಅಜ್ಜಿ ಜೊತೆ ಡ್ಯಾನ್ಸ್ ಮಾಡುತ್ತಾ ಅದರ ವಿಡಿಯೋಗಳನ್ನು ನಟಿ ಹಂಚಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ