Dear Vikram: 'ಡಿಯರ್ ವಿಕ್ರಮ್' ಟ್ರೈಲರ್ ರಿಲೀಸ್, ನೈಜ ಕಥೆಯೊಂದಿಗೆ ಬರ್ತಿದ್ದಾರೆ ನೀನಾಸಂ ಸತೀಶ್

ನೀನಾಸಂ ಸತೀಶ್ (Sathish Ninasam) ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ 'ಡಿಯರ್ ವಿಕ್ರಮ್' (Dear Vikram) ಚಿತ್ರದ ಟ್ರೈಲರ್ (Trailer) ಬಿಡುಗಡೆ ಆಗಿದೆ.

ಡಿಯರ್ ವಿಕ್ರಮ್

ಡಿಯರ್ ವಿಕ್ರಮ್

  • Share this:
ನೀನಾಸಂ ಸತೀಶ್ (Sathish Ninasam) ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ 'ಡಿಯರ್ ವಿಕ್ರಮ್' (Dear Vikram) ಚಿತ್ರದ ಟ್ರೈಲರ್ (Trailer) ಬಿಡುಗಡೆ ಆಗಿದೆ. ವಿಭಿನ್ನ ಕಥಾಹಂದರ ಇರುವ ಈ ಚಿತ್ರವು ಒಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದೆ. ಗೋದ್ರಾ ಎಂಬ ಟೈಟಲ್​ ಅನ್ನು ನಂತರ ಚಿತ್ರತಂಡ ಡಿಯರ್ ವಿಕ್ರಮ್ ಎಂದು ಬದಲಾಯಿಸಿದೆ. ಕ್ರಾಂತಿಕಾರಿಯೊಬ್ಬನ ಜೀವನದಲ್ಲಿನ ಪ್ರೇಮಕತೆನ್ನು ವಿಭಿನ್ನವಾಗಿ ‘ಡಿಯರ್ ವಿಕ್ರಮ್’ ಚಿತ್ರದ್ಲಲಿ ತೋರಿಸಿದಂತೆ ಕಾಣುತ್ತಿದೆ. ಕೆಲದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಸಿನಿರಸಿಕರ ಗಮನ ಸೆಳೆದಿತ್ತು. ಇನ್ನು, ಜೂನ್ 30ರಂದು ಚಿತ್ರವು ಬಿಡುಗಡೆ ಆಗಲಿದೆ. ಆದರೆ ಈ ಸಿನಿಮಾವು ಚಿತ್ರಮಂದಿರದ ಬದಲಾಗಿ ನೇರವಾಗಿ ಓಟಿಟಿ (OTT) ಪ್ಲಾರ್ಟ್​ ಫಾರ್ಮ್ ಆದ ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 

ಅದ್ದೂರಿಯಾಗಿದೆ 'ಡಿಯರ್ ವಿಕ್ರಮ್' ಟ್ರೈಲರ್:

ಇನ್ನು, ಬಿಡುಗಡೆ ಆಗಿರುವ 'ಡಿಯರ್ ವಿಕ್ರಮ್' ಚಿತ್ರದ ಟ್ರೈಲರ್ ಅದ್ಧೂರಿಯಾಗಿದೆ. ನೈಜ ಕಥೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಕೆ ಎಸ್ ನಂದೀಶ್ ಈ ಸಿನಿಮಾವನ್ನು ಹೆಣೆದಿದ್ದಾರೆ. ಓರ್ವ ಸಾಮಾನ್ಯ ವ್ಯಕ್ತಿ ಸಮಾಜದಲ್ಲಿನ ಕೆಟ್ಟ ಶಕ್ತಿಗಳ ವಿರುದ್ಧ ಹೇಗೆ ಎದುರು ನಿಲ್ಲುತ್ತಾನೆ ಎಂದು ಹೇಳುವ ಈ ಟ್ರೈಲರ್ ನಲ್ಲಿ ಒಂದು ಸುಂದರ ಪ್ರೇಮ ಕಥೆಯನ್ನೂ ಸಹ ಇಡಲಾಗಿದೆ.ಚಿತ್ರಕತೆ ಈ ಸಿನಿಮಾದ ಟ್ರೈಲರ್​ ನಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ನಾಯಕನ ಸುತ್ತಲಿನ ಸಿಸ್ಟಮ್​ನ ಎದುರು ನಿಲ್ಲುವ ನಾಯಕ ಹೇಗೆಲ್ಲಾ ಬದಲಾಗುತ್ತಾನೆ ಎಂದು ಆಳವಾಗಿ ಚಿತ್ರೀಕರಿಸಆಗಿದೆ. ಇನ್ನು, ಕುಕ್ಕೆ ಸುಬ್ರಹ್ಮಣ್ಯ, ಹಾಸನ, ಭಟ್ಕಳ, ಕರ್ನೂಲ್ ಅಲ್ಲದೆ ಮಲೇಶಿಯಾದಲ್ಲೂ ಚಿತ್ರೀಕರಣ ಮಾಡಲಾಗಿದೆ.

ಇದನ್ನೂ ಓದಿ: Srinidhi Shetty: ರಾಕಿ ಭಾಯ್ ಬೆಡಗಿಯ ಮುಂದಿನ ಸಿನಿಮಾ ಯಾವ್ದು? ಶ್ರೀನಿಧಿಗೆ ಸಿನಿಮಾಗಳಲ್ಲಿ ಇದೇ ಸಮಸ್ಯೆಯಂತೆ

ಚಿತ್ರದ ಕುರಿತು ಉತ್ಸುಕರಾಗಿರುವ ಸತೀಶ್:

ಹೌದು, ಚಿತ್ರದ ಟ್ರೈಲರ್ ಬಿಡುಗಡೆಯ ನಂತರ ಸಿನಿಮಾದ ಕುರಿತು ಮಾತನಾಡಿರುವ ನಟ ನಿನಾಸಂ ಸತೀಶ್, ‘ಶ್ರದ್ಧಾ ಶ್ರೀನಾಥ್ ಅವರೊಂದಿಗೆ ಇದು ನನ್ನ ಮೊದಲ ಸಿನಿಮಾ. ವಸಿಷ್ಟ ಸಿಂಹ, ಸೋನು ಗೌಡ, ಅಚ್ಯುತ್ ಕುಮಾರ್ ಮುಂತಾದ ಹಲವು ಹೆಸರಾಂತ ನಟ ನಟಿಯರು ಚಿತ್ರಕ್ಕೆ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ. ಹೀಗಾಗಿ ಚಿತ್ರವು ಉತ್ತಮವಾಗಿ ಮೂಡಿಬಂದಿದೆ. ಚಿತ್ರದ ಕುರಿತು ನಾನಂತೂ ಉತ್ಸುಕನಾಗಿದ್ದೇನೆ‘ ಎಂದು ಹೇಳಿದ್ದಾರೆ.

ಇದಲ್ಲದೇ ನಟಿ ಶ್ರದ್ಧಾ ಶ್ರೀನಾಥ್ ಮಾತನಾಡಿ, ‘ವಾಸ್ತವವನ್ನು ಬಣ್ಣದ ಕನ್ನಡಕದೊಳಗಿನಿಂದ ಮಾತ್ರ ನೋಡಿ ಬೆಳೆದ ಹುಡುಗಿಯ ಪಾತ್ರ ನನ್ನದು. ಈ ಪಾತ್ರವನ್ನು ಎಂದೂ ಮರೆಯೋಕಾಗಲ್ಲ. ಅಲ್ಲದೇ  10 ವರ್ಷಗಳ ನಂತರ ಹಿಂತಿರುಗಿ ನೋಡಿದಾಗ, ಡಿಯರ್ ವಿಕ್ರಮ್‌ನಂತಹ ಚಿತ್ರದಲ್ಲಿ ನಟಿಸಿದ್ದಕ್ಕೆ ಮತ್ತು ಕೆಲಸ ಮಾಡಿದ್ದಕ್ಕೆ ನನಗೆ ಹೆಮ್ಮೆಯಾಗುತ್ತದೆ ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Weekend Planner: ಥಿಯೇಟರ್ ನಲ್ಲಿ ಮಿಸ್ ಮಾಡ್ಕೊಂಡಿರೋ ಸಿನಿಮಾಗಳನ್ನು ಮನೆಯಲ್ಲೇ ಕೂತು ನೋಡಿ, ಈ ವಾರ ಸಿನಿರಸಿಕರಿಗೆ ಭರ್ಜರಿ ರಸದೌತಣ

ನೇರವಾಗಿ ಓಟಿಟಿ ಅಲ್ಲಿ ರಿಲೀಸ್:

ಇನ್ನು, ಡಿಯರ್ ವಿಕ್ರಮ್ ಚಿತ್ರವು ನೇರವಾಗಿ ಜೂನ್ 30ರಂದು ಓಟಿಟಿ ಅಲ್ಲಿ ಬಿಡುಗಡೆ ಆಗಲಿದೆ. ಈ ನಿರ್ಧಾರದ ಕುರಿತು ನಟ ಸತೀಶ್ ಮಾತನಾಡಿದ್ದು, ‘ನನ್ನ ಕೆಲ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಹೀಗಾಗಿ ಎಲ್ಲಾ ಚಿತ್ರಗಳನ್ನೂ ಥಿಯೆಟರ್​ನಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಇದನ್ನು ಓಟಿಟಿಯಲ್ಲಿ ಬಿಡುಗಡಡೆ ಮಾಡುತ್ತಿದ್ದೇವೆ. ಅಲ್ಲದೇ ನಿರ್ಮಾಪಕ ಮತ್ತು ನಿರ್ದೇಶಕ ನಂದೀಶ್ ಅವರಿಗೆ ಅನುಕೂಲವಾಗುವುದು ಇಲ್ಲಿ ಬಹಳ ಮುಖ್ಯ‘ ಎಂದು ಹೇಳಿದ್ದಾರೆ.
Published by:shrikrishna bhat
First published: