Yajamana 100 Days: ಶತದಿನೋತ್ಸವ ಪೂರೈಸಿದ ಯಜಮಾನ

Darshan And Rashmika Mandanna: ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆಯೊಂದಿಗೆ ಮಾರ್ಚ್​ 1ರಂದು ತೆರೆಕಂಡಿದ್ದ ಯಜಮಾನ ಶತಕ ಬಾರಿಸಿದೆ. ಹೌದು ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸುವ ಮೂಲಕ ಮುನ್ನುಗ್ಗುತ್ತಿದೆ.

Anitha E | news18
Updated:June 8, 2019, 1:02 PM IST
Yajamana 100 Days: ಶತದಿನೋತ್ಸವ ಪೂರೈಸಿದ ಯಜಮಾನ
ಯಜಮಾನ ಸಿನಿಮಾದಲ್ಲಿ ರಶ್ಮಿಕಾ ಹಾಗೂ ದರ್ಶನ್​
  • News18
  • Last Updated: June 8, 2019, 1:02 PM IST
  • Share this:
ದರ್ಶನ್​ ಅಭಿನಯದ 'ಯಜಮಾನ' ಸಿನಿಮಾ ನೂರು ದಿನಗಳನ್ನ ಯಶಸ್ವಿಯಾಗಿ ಪೂರೈಸಿದೆ. ಸ್ಯಾಂಡಲ್​ವುಡ್​ನ ಡಿಬಾಸ್​ ದರ್ಶನ್​ ಅಭಿಮಾನಿಗಳು ಇದನ್ನು ಸಂಭ್ರಮಿಸುತ್ತಿದ್ದಾರೆ.

ಬಿ.ಸುರೇಶ್​ ಹಾಗೂ ಶೈಲಜಾ ನಾಗ್​ ನಿರ್ಮಾಣದ ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತಾದ ವಿಷಯಗಳು ವೈರಲ್​ ಆಗುತ್ತಿದ್ದವು.

yajamana 100 days
ನೂರು ದಿನ ಪೂರೈಸಿದ ಯಜಮಾನ ಸಿನಿಮಾ


ದರ್ಶನ್​, ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್​ ಅಭಿನಯದ ಈ ಚಿತ್ರವನ್ನು ಪೋನ್​ ಕುಮಾರ್​ ಹಾಗೂ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಇಂದು ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ನಿರ್ಮಾಪಕಿ ಶೈಲಜಾ ನಾಗ್ ಟ್ವಿಟರ್​ನಲ್ಲಿ​ ಹಂಚಿಕೊಂಡಿದ್ದಾರೆ.

#YajamanaCompletes100days today ✌️Am indebted to #yajamana @dasadarshan 🙏@harimonium @bsuresha artists, technicians , entire crew, who have been great strength in this Journey of Yajamana . Huge thanks to all #DBoss fans @Dcompany171 ,Kannadigas , movie lovers & exhibitors 🙏 pic.twitter.com/AR02w4lCTo

ಮಾರ್ಚ್​ 1ಕ್ಕೆ ದೇಶದಾದ್ಯಂತ ತೆರೆಕಂಡಿರುವ ಈ ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಯಶಸ್ಸಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: Mouni Roy: ಮುಖದ ಶಸ್ತ್ರ ಚಿಕಿತ್ಸೆಯಿಂದ ಅಂದ ಕೆಡಿಸಿಕೊಂಡರಾ ಕೆ.ಜಿ.ಎಫ್.ನಲ್ಲಿ ಯಶ್​ ಜತೆ ಹೆಜ್ಜೆ ಹಾಕಿದ್ದ ಈ​ ನಟಿ..!

Mouni Roy Photos: ಮುದ್ದಾದ ನಗು ಮೊಗದ 'ಕೆ.ಜಿ.ಎಫ್' ಸಿನಿಮಾದ ನಟಿ ಮೌನಿ ರಾಯ್​

First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ