ನಟ ಅರ್ಜುನ್​ ಸರ್ಜಾ ಅವರಿಗೂ ಉಂಡೆ ನಾಮ ಹಾಕಿರುವ ಮಲ್ಲಿಕಾರ್ಜುನ್​!

news18
Updated:July 23, 2018, 6:06 PM IST
ನಟ ಅರ್ಜುನ್​ ಸರ್ಜಾ ಅವರಿಗೂ ಉಂಡೆ ನಾಮ ಹಾಕಿರುವ ಮಲ್ಲಿಕಾರ್ಜುನ್​!
news18
Updated: July 23, 2018, 6:06 PM IST
ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಅವರು ದರ್ಶನ್ ಹೆಸರು ಹೇಳಿ ಹತ್ತಾರು ಕೋಟಿ ಸಾಲ ಪಡೆದು ಉಂಡೆನಾಮ ತಿಕ್ಕಿದ್ದ ವಿಷಯ ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಅದಾದ ನಂತರ ಮಲ್ಲಿಕಾರ್ಜುನ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದರು.

ಈಗ ಮಲ್ಲಿಕಾರ್ಜುನ್ ಖ್ಯಾತ ನಟ ದಕ್ಷಿಣ ಭಾರತದ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾಗೂ ವಂಚಿಸಿರೋ ವಿಷಯ ಬಯಲಾಗಿದೆ. ತಮ್ಮ ಮಗಳಿಗಾಗಿ ಅರ್ಜುನ್ ಸರ್ಜಾ ನಿರ್ಮಾಣ ಮಾಡಿ ನಿರ್ದೇಶಿಸಿದ್ದ 'ಪ್ರೇಮ ಬರಹ' ಚಿತ್ರದ ವಿತರಣಾ ಜವಾಬ್ಧಾರಿ ವಹಿಸಿಕೊಂಡಿದ್ದ ಮಲ್ಲಿಕಾರ್ಜುನ ಅವರು ಅದರ ಹಣವನ್ನೂ ನುಂಗಿ  ವಂಚಿಸಿರೋ ವಿಚಾರ ಬಯಲಾಗಿದೆ.

'ಪ್ರೇಮ ಬರಹ ಸಿನಿಮಾದ ವಿರತಣಾ ಜವಾಬ್ದಾರಿಯನ್ನು ತೂಗುದೀಪಾ ಪ್ರೊಡಕ್ಷನ್ಸ್​ಗೆ ನೀಡಲಾಗಿತ್ತು. ಅದರ ಸಂ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಮಲ್ಲಿಕಾರ್ಜುನ್​ ಅವರೇ. ಸಿನಿಮಾ ಹಕ್ಕು ವಿತರಿಸಿ, ಹಣ ಬಂದ ನಂತರ ಮಲ್ಲಿಕಾರ್ಜುನ್​ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದರಿಂದ ನಮ್ಮ ಜತೆಗೆ ದರ್ಶನ್​ ಅವರಿಗೂ ಮೋಸ ಆಗಿದೆ' ಎಂದು ಅರ್ಜುನ್ ಸರ್ಜಾ ನ್ಯೂಸ್​ 18ಗೆ ಸ್ಪಷ್ಟನೆ ನೀಡಿದ್ದಾರೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ