97ನೇ ವಯಸ್ಸಿನಲ್ಲೂ ಸೆಕ್ಸ್ ಮಾಡಬೇಕೆಂದಿದ್ದ ಹಿರಿಯ ಬಾಲಿವುಡ್ ನಟಿ ಜೋಹ್ರಾ ಸೈಗಲ್
ಸದಾ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇದ್ದ ಬಾಲಿವುಡ್ ನಟಿ ಜೋಹ್ರಾ ಸಖತ್ ಪೋಲಿ ಜೋಕ್ಗಳನ್ನೂ ಮಾಡುತ್ತಿದ್ದರು. 97ನೇ ಹುಟ್ಟುಹಬ್ಬದ ಸಮಯದಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಜೋಹ್ರಾ ತಮಗೆ ಇಳಿ ವಯಸ್ಸಿನಲ್ಲೂ ಸೆಕ್ಸ್ ಮಾಡಬೇಕೆನಿಸುತ್ತದೆ ಎಂದು ಹೇಳಿದ್ದರಂತೆ.

ಜೋಹ್ರಾ ಸೈಗಲ್
- News18 Kannada
- Last Updated: November 25, 2020, 1:29 PM IST
ಬಾಲಿವುಡ್ನ ತುಂಟಿ ಎಂದೇ ಕರೆಯಲ್ಟಡುತ್ತಿದ್ದ ನಟಿ ಜೋಹ್ರಾ ಸೈಗಲ್. ರಂಗಭೂಮಿಯಿಂದ ಬೆಳ್ಳಿತೆರೆಗೆ ಬಂದ ನಟಿ ಜೋಹ್ರಾ ವಿವಿಧ ಪಾತ್ರಗಳ ಮೂಲಕ ರಂಜಿಸಿದ್ದರು. 102ನೇವಯಸ್ಸಿನಲ್ಲಿ ಅಗಲಿದ ನಟಿ ವಯಸ್ಸು ನೂರರ ಗಡಿ ದಾಟಿದ್ದರೂ ಸಖತ್ ಹ್ಯೂಮರಸ್ ಆಗಿದ್ದರು. ಜೋಹ್ರಾ ಸೆಹೆಗಲ್ ಅವರ ಬಗ್ಗೆ ಮಾತನಾಡುವ ಮೊದಲು ಅವರ ಉದ್ದವಾದ ಮುಖ, ಸುಕ್ಕುಗಟ್ಟಿದ ಚರ್ಮ, ಪುಟ್ಟ ಪುಟ್ಟ ಕಣ್ಣುಗಳು, ಆತ್ಮವಿಶ್ವಾಸ ತುಂಬಿರುವ ನಗು, ಜತೆಗೆ ತುಂಟತನದ ಭಾವ ಕಣ್ಮುಂದೆ ಬರುತ್ತದೆ. ಇವರ ಈ ಗುಣದಿಂದಲೇ ಬಾಲಿವುಡ್ನಲ್ಲಿ ಅತಿ ಹೆಚ್ಚು ವರ್ಷ ಚಟುವಟಿಕೆಯಿಂದ ಇದ್ದರು ಎನ್ನಬಹುದು. 1912 ಏ.27ರಂದು ಜನಿಸಿದ್ದ ಇವರು 2014ರಲ್ಲಿ ಇಹಲೋಕ ತ್ಯಜಿಸಿದ್ದರು. ಉತ್ತರಪ್ರದೇಶದ ಸುನ್ನಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಜೋಹ್ರಾ ಅವರ ಪೂರ್ಣ ಹೆಸರು ಜೋಹ್ರಾ ಬೇಗಂ ಮುಮ್ತಾಜ್ ಉಲ್ಲಾ ಖಾನ್. ಹುಟ್ಟಿನಿಂದ ಕಷ್ಟದಲ್ಲೇ ಬೆಳೆದ ಇವರಿಗೆ ಬಾಲ್ಯದಲ್ಲೇ ಗ್ಲುಕೋಮಾದಿಂದ ಕಣ್ಣಿನ ದೃಷ್ಟಿ ದೋಷ ಆರಂಭವಾಗಿತ್ತು. ಚಿಕಿತ್ಸೆಯಿಂದ ಕಣ್ಣಿನ ಸಮಸ್ಯೆ ಬಗೆಹರಿದಿತ್ತು. ಆದರೆ ಆಗ ಯಾರಿಗೂ ಇವರ ಭವಿಷ್ಯ ಹಾಗೂ ಮುಂದೆ ಇದೇ ಮಗು ರಂಗಭೂಮಿ ಹಾಗೂ ಬಾಲಿವುಡ್ನಲ್ಲಿ ಇಷ್ಟೊಂದು ದೊಡ್ಡ ಹೆಸರು ಮಾಡುತ್ತಾಳೆ ಎಂದು ಊಹಿಸಿಯೂ ಇರಲಿಲ್ಲ.
ಜೋಹ್ರಾ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಚಿಕ್ಕಂದಿನಿಂದಲೇ ಅಭಿನಯ ಹಾಗೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಜೋಹ್ರಾ ದೂರದರ್ಶನದಲ್ಲಿ ನೃತ್ಯಗಾರ ಹಾಗೂ ನೃತ್ಯ ಸಂಯೋಜಕರಾಗಿದ್ದ ಉದಯ್ ಶಂಕರ್ ಅವರ ನೃತ್ಯವನ್ನು ನೋಡುತ್ತಲೇ ಪ್ರಭಾವಿತರಾಗಿದ್ದರು. ನಂತರ ಉದಯ್ ಅವರ ನೃತ್ಯ ಅಕಾಡೆಮಿಗೆ ಸೇರಿಕೊಂಡರು. ಇಲ್ಲೇ ಅವರಿಗೆ ಕಾಮೇಶ್ವರ್ ಸೆಹೆಗಲ್ ಅವರ ಪರಿಚಯವಾಗಿತ್ತು. ನಂತರ ಪ್ರೇಮಾಂಕುರವಾಗಿ ಇಬ್ಬರೂ ಸಪ್ತಪದಿ ತುಳಿದರು. ಆಗ ಇಂಧೋರ್ನಲ್ಲಿದ್ದ ಕೆಲವೇ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರು ಕಾಮೇಶ್ವರ್ ಸೆಹೆಗಲ್. ಅವರಿಗೂ ನೃತ್ಯ ಹಾಗೂ ಪೇಟಿಂಗ್ ಮಾಡುವ ಅಭ್ಯಾಸವಿತ್ತು. 
ಕಾಮೇಶ್ವರ್ ಸೆಹೆಗಲ್ ಜೋಹ್ರಾ ಅವರಿಗಿಂತ 8 ವರ್ಷ ಚಿಕ್ಕವರಿದ್ದರು. ಆದರೂ ಮನೆಯವರಿಗೆ ವಿರುದ್ಧವಾಗಿ ಹೋಗಿ ವಿವಾಹವಾಗಿದ್ದರು. ಭಾರತದಲ್ಲಿ ಉದಯ್ ಶಂಕರ್ ಅವರ ನೃತ್ಯ ಅಕಾಡೆಮಿ ಮುಚ್ಚುವವರೆಗೂ ಜೋಹ್ರಾ ಹಾಗೂ ಅವರ ಪತಿ ಇದೇ ಅಕಾಡೆಮಿಯಲ್ಲಿದ್ದರು. ಜೋಹ್ರಾ ಅವರು 'ನೀಚಾ ನಗರ್' 'ದಿಲ್ ಸೆ', 'ಸಾವರಿಯಾ' ಹಾಗೂ 'ಚೀನಿ ಕಮ್' ಸಿನಿಮಾಗಳಲ್ಲಿ ಅಭಿನಯಿಸಿದ್ದು, ಕಿರುತೆರೆಯಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಜತೆಗೆ 14 ವರ್ಷ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು.
ಇದನ್ನೂ ಓದಿ: ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು... ಅಂತ ಹಾಡುತ್ತಿದ್ದಾರೆ ನಟ ಗಣೇಶ್
ಒಮ್ಮೆ ಸಂದರ್ಶನದಲ್ಲಿ ಅವರು ಜೀವನದಲ್ಲಿ ಅನುಭವಿಸಿದ್ದ ಕಷ್ಟಗಳ ಬಗ್ಗೆಯೂ ಹೇಳಿಕೊಂಡಿದ್ದರು ಜೋಹ್ರಾ. ನಿಮಗೆ ಇಂದು ನಾನು ಮುದುಕಿ ಹಾಗೂ ಕೆಟ್ಟ ಮುಖ ಹೊತ್ತವಳಂತೆ ಕಾಣಿಸುತ್ತಿದ್ದೇನೆ. ಆದರೆ ನಾನು ಯುವತಿಯಾಗಿದ್ದಾಗಲೂ ನನ್ನ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಆಗಲೂ ನಾನು ಕುರೂಪಿಯೇ ಆಗಿದ್ದೆ ಎಂದಿದ್ದರು.
ಸದಾ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇದ್ದ ಜೋಹ್ರಾ ಸಖತ್ ಪೋಲಿ ಜೋಕ್ಗಳನ್ನೂ ಮಾಡುತ್ತಿದ್ದರು. 97ನೇ ಹುಟ್ಟುಹಬ್ಬದ ಅಂಗವಾಗಿ ಅವರು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ್ದ ಸಂದರ್ಶನದಲ್ಲಿ ಮಜವಾದ ಉತ್ತರಗಳನ್ನು ನೀಡಿದ್ದರು. ನೀವು ಇಷ್ಟು ಲವಲವಿಕೆಯಿಂದರುವ ಹಿಂದಿನ ರಹಸ್ಯ ಏನು ಎಂದಿದ್ದಕ್ಕೆ ಅವರು ನೀಡಿರುವ ಉತ್ತರ ಹಾಸ್ಯ ಮತ್ತು ಸೆಕ್ಸ್ ಎಂದು. ಈ ವಯಸ್ಸಿನಲ್ಲೂ ಅವರ ಜೀವನದಲ್ಲಿ ಸೆಕ್ಸ್ ತುಂಬಾ ಮಹತ್ವ ಪಡೆದುಕೊಂಡಿದೆ ಎಂದು ಹ್ಯೂಮರ್ ಆಗಿ ಉತ್ತರಿಸಿದ್ದರಂತೆ.
ಜೋಹ್ರಾ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ಚಿಕ್ಕಂದಿನಿಂದಲೇ ಅಭಿನಯ ಹಾಗೂ ನೃತ್ಯದಲ್ಲಿ ಆಸಕ್ತಿ ಹೊಂದಿದ್ದ ಜೋಹ್ರಾ ದೂರದರ್ಶನದಲ್ಲಿ ನೃತ್ಯಗಾರ ಹಾಗೂ ನೃತ್ಯ ಸಂಯೋಜಕರಾಗಿದ್ದ ಉದಯ್ ಶಂಕರ್ ಅವರ ನೃತ್ಯವನ್ನು ನೋಡುತ್ತಲೇ ಪ್ರಭಾವಿತರಾಗಿದ್ದರು. ನಂತರ ಉದಯ್ ಅವರ ನೃತ್ಯ ಅಕಾಡೆಮಿಗೆ ಸೇರಿಕೊಂಡರು. ಇಲ್ಲೇ ಅವರಿಗೆ ಕಾಮೇಶ್ವರ್ ಸೆಹೆಗಲ್ ಅವರ ಪರಿಚಯವಾಗಿತ್ತು. ನಂತರ ಪ್ರೇಮಾಂಕುರವಾಗಿ ಇಬ್ಬರೂ ಸಪ್ತಪದಿ ತುಳಿದರು. ಆಗ ಇಂಧೋರ್ನಲ್ಲಿದ್ದ ಕೆಲವೇ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದರು ಕಾಮೇಶ್ವರ್ ಸೆಹೆಗಲ್. ಅವರಿಗೂ ನೃತ್ಯ ಹಾಗೂ ಪೇಟಿಂಗ್ ಮಾಡುವ ಅಭ್ಯಾಸವಿತ್ತು.

ಜೋಹ್ರಾ ಸೆಹಗಲ್