ಸಹಾಯ ಮಾಡಿದ ನಟಿ ಲೀಲಾವತಿ-ವಿನೋದ್​ ರಾಜ್​ಗೆ ಧನ್ಯವಾದ ತಿಳಿಸಿದ ನಟಿ ವಿಜಯಲಕ್ಷ್ಮಿ​

ವಿಜಯಲಕ್ಷ್ಮಿ ಅವರು ತಮ್ಮ ಸಹೋದರಿ ಉಷಾ ಅವರಿಗೆ ಗರ್ಭಕೋಶದ ಸಮಸ್ಯೆಯಾಗಿದ್ದು, ಚಿಕಿತ್ಸೆ ಕೊಡಿಸಲು ತನ್ನ ಬಳಿ ಹಣವಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ವಿಜಯಲಕ್ಷ್ಮಿ ಅವರಿಗೆ ನಟ ವಿನೋದ್​ ರಾಜ್​ ಅವರು ಸಹಾಯ ಮಾಡಿದ್ದಾರೆ.

ನಟಿ ವಿಜಯಲಕ್ಷ್ಮಿ

ನಟಿ ವಿಜಯಲಕ್ಷ್ಮಿ

  • Share this:
ಸಿನಿಮಾಗಳಿಗಿಂತ ಹೆಚ್ಚಾಗಿ ಒಂದಿಲ್ಲೊಂದು ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುತ್ತಾರೆ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ಸೇರಿದ್ದ ವಿಜಯಲಕ್ಷ್ಮಿ ಅವರ ಚಿಕಿತ್ಸೆಗೆ ಹಣವಿಲ್ಲವೆಂದು ಸಹಾಯ ಮಾಡಿ ಅಂತ ನಟಿಯ ಮನೆಯವರು ಮನವಿ ಮಾಡಿದ್ದರು. ಆಗಲೂ ಕನ್ನಡದ ನಟರು ವಿಜಯಲಕ್ಷ್ಮಿ ಅವರ ಕುಟುಂಬಕ್ಕೆ ನೆರವಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ನಟಿ ವಿಜಯ ಲಕ್ಷ್ಮಿ ಮತ್ತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ತನ್ನ ಸಹೋದರಿಯನ್ನು ಕಾಪಾಡುವ ನಿಟ್ಟಿನಲ್ಲಿ ಅವರು, ನಟ ಶಿವರಾಜ್​ ಕುಮಾರ್​ ಅವರ ಬಳಿ ಸಹಾಯಕ್ಕೆ ಮನವಿ ಮಾಡಿದ್ದರು. ತಮಿಳುನಾಡಿನಿಂದ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದ ನಟಿ ವಿಜಯಲಕ್ಷ್ಮಿ ವಿಡಿಯೋದಲ್ಲಿ ತನ್ನ ಸಹೋದರಿ ಪಡುತ್ತಿರುವ ಕಷ್ಟವನ್ನು ತಿಳಿಸಿದ್ದಾರೆ. ಅಲ್ಲದೆ, ತಾನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಹಣವಿಲ್ಲ. ಹೀಗಾಗಿ ಕನ್ನಡ ನಟರು, ಅದರಲ್ಲೂ ಶಿವಣ್ಣ, ಯಶ್​, ದರ್ಶನ್ ಸೇರಿದಂತೆ ಇತರೆ ನಟರು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದರು.

ವಿಜಯಲಕ್ಷ್ಮಿ ಅವರು ತಮ್ಮ ಸಹೋದರಿ ಉಷಾ ಅವರಿಗೆ ಗರ್ಭಕೋಶದ ಸಮಸ್ಯೆಯಾಗಿದ್ದು, ಚಿಕಿತ್ಸೆ ಕೊಡಿಸಲು ತನ್ನ ಬಳಿ ಹಣವಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು. ವಿಜಯಲಕ್ಷ್ಮಿ ಅವರಿಗೆ ನಟ ವಿನೋದ್​ ರಾಜ್​ ಅವರು ಸಹಾಯ ಮಾಡಿದ್ದಾರೆ. ಅವರ ಅಕ್ಕನಿಗೆ ಚಿಕತ್ಸೆ ಕೊಡಿಸಲು ಈ ನಟ ನೆರವಾಗಿದ್ದಾರೆ.

Actress Vijayalakshmi, Vinod Raj Helps to Vijayalakshmi Sister Usha Devi Treatment, Vijayalakshmi sister Usha Devi, Vinod raj help to vijayalakshmi sister, ವಿಜಯಲಕ್ಷ್ಮಿ ಸಹೋದರಿ, ವಿಜಯಲಕ್ಷ್ಮಿಗೆ ಸಹಾಯ ಮಾಡಿದ ವಿನೋದ್ ರಾಜ್, ವಿಜಯಲಕ್ಷ್ಮಿ ಸಹೋದರಿ ಉಷಾ ದೇವಿ, Actress Vijayalakshmi, Sandalwood, sandalwood news, Shivarajkumar, Actress Vijayalakshmi says thanks to Karnataka people and sandalwood celebrities ae
ನಟಿ ವಿಜಯಲಕ್ಷ್ಮಿ.


ಈ ಕುರಿತಾಗಿ ಈಗ ಮತ್ತೊಂದು ಹೊಸ ವಿಡಿಯೋ ಮಾಡಿರುವ ನಟಿ ವಿಜಯಲಕ್ಷ್ಮಿ, ಸಹಾಯ ಮಾಡಿದ  ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್​ ರಾಜ್​ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅವರು ಕೈಲಾದಷ್ಟು ಸಹಾಯ ಮಾಡಿದ್ದಾರೆ ಎಂದಿರುವ ನಟಿ, ಶಿವಣ್ಣ ಆರ್ಶೀವಾದ ಮಾಡಿದ್ದಾರೆ ಎಂದಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದೂ ಹೇಳಿದ್ದಾರೆ. ಜತೆಗೆ ಈ ವಿಷಯವನ್ನು ಸ್ಯಾಂಡಲ್​ವುಡ್​ ತಾರೆಯವರೆಗೂ ತಲುಪಿಸಿದವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: The Family Man 2 ಖ್ಯಾತಿಯ ನಟಿ ಪ್ರಿಯಾಮಾಣಿ ಈ ಹಿಂದೆ ಬಿಕಿನಿ ತೊಟ್ಟು ವಿವಾದಕ್ಕೀಡಾಗಿದ್ದರು..!

ಕನ್ನಡದ ಮಟ್ಟಿಗೆ ವಿಜಯಲಕ್ಷ್ಮಿ ಒಂದು ಕಾಲದಲ್ಲಿ ಬೇಡಿಕೆಯ ನಟಿ. ಅವರು ನಟಿಸಿದ್ದ ನಾಗಮಂಡಲ, ಸೂರ್ಯವಂಶ ಕನ್ನಡದಲ್ಲಿ ಇಂದಿಗೂ ಸಹ ಬಾಕ್ಸಾಫಿಸ್​ ಹಿಟ್​ ಚಿತ್ರಗಳಲ್ಲಿ ಒಂದು. ಆದರೆ, ಇವರು ಇತ್ತೀಚಿನ ವರ್ಷಗಳಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ.

40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಚೆನ್ನೈನಲ್ಲಿ ಜನಿಸಿದವರು. ಆದರೆ, ಕರ್ನಾಟಕದಲ್ಲೇ ವಿದ್ಯಾಭ್ಯಾಸ ಪೂರೈಸಿ, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅವರು ಸುಮಾರು 25 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಟಿ. ಎಸ್. ನಾಗಾಭರಣ ಚಿತ್ರ ನಾಗಮಂಡಲದಲ್ಲಿ ಪ್ರಥಮ ಬಾರಿಗೆ ಅಭಿನಯಿಸಿದರು. ನಂತರ ಸೂರ್ಯವಂಶ, ರಂಗಣ್ಣ, ಡ್ಯಾಡಿ ನಂ.1, ಕನಕಾಂಬರಿ, ಜೋಡಿಹಕ್ಕಿ ಮುಂತಾದ ಅನೇಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Madhuri Dixit: ಮಾಧುರಿ ದೀಕ್ಷಿತ್ ತೊಟ್ಟಿರುವ ನೀಲಿ ಬಣ್ಣದ ಲೆಹೆಂಗಾ ಬೆಲೆ ಕೇಳಿದ್ರೆ ದಂಗಾಗ್ತೀರಿ..!

2006ರಲ್ಲಿ, ವಿಜಯಲಕ್ಷ್ಮಿ ಅವರನ್ನು ಮದುವೆಯಾಗಲು ಬಯಸಿದ್ದ ಸಹಾಯಕ ನಿರ್ದೇಶಕರಿಂದ ಕಿರುಕುಳಕ್ಕೊಳಗಾದ ನಂತರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ತಂದೆ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: