Vidya Balan: 4 ತಿಂಗಳ ನಂತರ ಚಿತ್ರೀಕರಣಕ್ಕೆ ಮರಳಿದ ವಿದ್ಯಾ ಬಾಲನ್​..!

ಈಗಾಗಲೇ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿದ್ದು, ಕಲಾವಿದರು ಸೆಟ್​ಗಳಿಗೆ ಮರಳಿದ್ದಾರೆ. ಜೊತೆಗೆ ಸಿನಿಮಾಗಳ ಶೂಟಿಂಗ್​ಗೂ ಕಿಕ್​ಸ್ಟಾರ್ಟ್​ ಸಿಕ್ಕಿದ್ದು, ಸ್ಟಾರ್ ನಟ-ನಟಿಯರು ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ. ಕಳೆದ4 ತಿಂಗಳಿನಿಂದ ಮನೆಯಲ್ಲೇ ಇದ್ದ ವಿದ್ಯಾ ಬಾಲನ್​  ಈಗ ಶೂಟಿಂಗ್​ಗೆ ಹಿಂತಿರುಗಿದ್ದಾರೆ.

ಚಿತ್ರೀಕರಣದ ಸೆಟ್​ನಲ್ಲಿ ವಿದ್ಯಾ ಬಾಲನ್​

ಚಿತ್ರೀಕರಣದ ಸೆಟ್​ನಲ್ಲಿ ವಿದ್ಯಾ ಬಾಲನ್​

  • Share this:
ಕೊರೋನ ಲಾಕ್​ಡೌನ್​ನಿಂದಾಗಿ ಸಿನಿಮಾ ಹಾಗೂ ಧಾರಾವಾಹಿಗಳ ಚಿತ್ರೀಕರಣಕ್ಕೆ ಬ್ರೇಕ್​ ಹಾಕಲಾಗಿತ್ತು. ಆದರೆ ಮಹಾರಾಷ್ಟ್ರ ಸರ್ಕಾರ ಲಾಕ್​ಡೌನ್​ ಅನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿದ್ದು, ಮೆಲ್ಲನೆ ಕಿರುತೆರೆ ಹಾಗೂ ಸಿನಿಮಾಗಳ ಶೂಟಿಂಗ್​ ಆರಂಭವಾಗುತ್ತಿದೆ. 

ಈಗಾಗಲೇ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿದ್ದು, ಕಲಾವಿದರು ಸೆಟ್​ಗಳಿಗೆ ಮರಳಿದ್ದಾರೆ. ಜೊತೆಗೆ ಸಿನಿಮಾಗಳ ಶೂಟಿಂಗ್​ಗೂ ಕಿಕ್​ಸ್ಟಾರ್ಟ್​ ಸಿಕ್ಕಿದ್ದು, ಸ್ಟಾರ್ ನಟ-ನಟಿಯರು ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ. ಕಳೆದ4 ತಿಂಗಳಿನಿಂದ ಮನೆಯಲ್ಲೇ ಇದ್ದ ವಿದ್ಯಾ ಬಾಲನ್​  ಈಗ ಶೂಟಿಂಗ್​ಗೆ ಹಿಂತಿರುಗಿದ್ದಾರೆ.

actress vidya balan returns to shoot after 4 months amid the covid 19 pandemic shares photo
ಚಿತ್ರೀಕರಣಕ್ಕೆ ಮರಳಿದ ವಿದ್ಯಾ ಬಾಲನ್​


ನಿನ್ನೆಯಷ್ಟೆ ತಮ್ಮ ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ವಿದ್ಯಾ, ಶೂಟಿಂಗ್​ನಲ್ಲಿ ಭಾಗಿಯಾಗಿರುವ ಕುರಿತು ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ತಂಡ ಪಿಪಿಇ ಕಿಟ್ ಹಾಗೂ ಮಾಸ್ಕ್​ ಧರಿಸಿದ್ದರು. 
View this post on Instagram
 

Baal Baal bach gaye even as @florianhurel sneaks up on me like #Mangalyan around Mars 😋.


A post shared by Vidya Balan (@balanvidya) on


ತಮ್ಮ ಮೊದಲ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ವಿದ್ಯಾ, ಮಂಗಳ ಗ್ರಹದಲ್ಲಿರುವಂತೆ ಫೀಲ್ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ. ಇದು ಮಂಗಳಯಾನ ಮಾಡಿದಂತಿದೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕಿರುತೆರೆಯ ಖ್ಯಾತ ಕಾಮಿಡಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋದ ಚಿತ್ರೀಕರಣ ಸಹ ಸದ್ಯದಲ್ಲೇ ಆರಂಭವಾಗಲಿದೆ.

Jagdeep Passes Away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿದ್ದ ನಟ ಇನ್ನಿಲ್ಲ..!


ಇದನ್ನೂ ಓದಿ: Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​: ಭಾವುಕರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ದುನಿಯಾ ವಿಜಿ..!
Published by:Anitha E
First published: