Mohan Kumar: ಹೃದಯಾಘಾತದಿಂದ ನಿರ್ದೇಶಕ ಕೆಎನ್​ ಮೋಹನ್ ಕುಮಾರ್ ನಿಧನ - ಟಿಎನ್​ ಸೀತಾರಾಂ ಸಂತಾಪ

Director Death News: ಪ್ರಸಿದ್ದ ಧಾರಾವಾಹಿ ಕನ್ನಡತಿಯಲ್ಲಿ ಇತ್ತೀಚೆಗೆ ಅಭಿನಯಿಸಿದ್ದರು. ಅಲ್ಲದೇ ಈ ವಾರವಷ್ಟೇ ತೆರೆಕಂಡ ಕಟ್ಟಿಂಗ್ ಶಾಪ್ ಚಿತ್ರದಲ್ಲಿ ಸಹ ಪಾತ್ರ ಮಾಡಿದ್ದರು.

ನಿರ್ದೇಶಕ ಮೋಹನ್ ಕುಮಾರ್

ನಿರ್ದೇಶಕ ಮೋಹನ್ ಕುಮಾರ್

  • Share this:
ಕಳೆದ ಸುಮಾರು 2 ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ (Sandalwood)  ಬರೀ ಬೇಸರದ ಸಂಗತಿಗಳೇ ಆಗಿವೆ. ಒಬ್ಬರ ನಂತರ ಒಬ್ಬ ನಟ, ನಟಿಯರ ಸಾವಿನ ಸುದ್ದಿ ಕೇಳಿ ಬರುತ್ತಿದೆ. ನಟ ಚಿರಂಜೀವಿ ಸರ್ಜಾ , ಸಂಚಾರಿ ವಿಜಯ್, ರಾಜರತ್ನ ಪುನೀತ್ ರಾಜ್ಕುಮಾರ್ ಹೀಗೆ ಸಾಲು ಸಾಲು ನೋವಿನಿಂದ ಸ್ಯಾಂಡಲ್​ವುಡ್​ ಕಂಗೆಟ್ಟಿದೆ. ಇದೀಗ ನಿರ್ದೇಶಕರೊಬ್ಬರು (Director) ಮೃತಪಟ್ಟಿದ್ದು, ಪುನೀತ್ (Puneeth) ಸಾವಿನಿಂದ ಚೇತರಿಸಿಕೊಳ್ಳುತ್ತಿದ್ದ ಚಿತ್ರರಂಗಕ್ಕೆ ಬರಸಿಡಿಲು ಬಡಿದಾಂತಾಗಿದೆ.

ಕೆ ಎನ್ ಮೋಹನ್ ಕುಮಾರ್ ಅವರು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 56 ವರ್ಷ. ಮೋಹನ್ ಅವರ ಪತ್ನಿ ಪ್ರಸಿದ್ಧ ಕಿರುತೆರೆ ನಟಿ ಮತ್ತು ನಿರೂಪಕಿ ವತ್ಸಲಾ ಮೋಹನ್ ಹಾಗೂ ಮಗಳು ಅನನ್ಯಾರನ್ನು ಅಗಲಿದ್ದಾರೆ.

ಅಂತರರಾಷ್ಟ್ರೀಯ ವನ್ಯಜೀವಿ ಛಾಯಾಗ್ರಾಹಕರಾಗಿದ್ದ ಮೋಹನ್ ಕುಮಾರ್ ಅವರು ಎಂಜಿನಿಯರಿಂಗ್ ಪದವೀಧರರಾಗಿದ್ದರು. ಮೈಸೂರು ಮಲ್ಲಿಗೆಯಲ್ಲಿ ನಾಯಕನ ಪಾತ್ರಕ್ಕೆ ಧ್ವನಿ ಸಹ ನೀಡಿದ್ದರು. ಅಲ್ಲದೇ, ವತ್ಸಲಾ ಅವರು ಬರೆದ ಕಾದಂಬರಿಯನ್ನು ಆಧರಿಸಿದ ಬೊಂಬ್ಯಾಟ ಎಂಬ ಚಿತ್ರವನ್ನು ಸಹ ಅವರು ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅಲ್ಲದೇ ಅವರು ರಂಗಭೂಮಿ, ಧಾರವಾಹಿ, ಪತ್ರಿಕೋದ್ಯಮ ಹೀಗೆ ಹಲವರು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಟಿ.ಎನ್​.ಸೀತಾರಾಮ್​ ಸಂತಾಪ

ಮೋಹನ್ ಅವರ ಅಕಾಲಿಕ ಮರಣಕ್ಕೆ ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ಅವರು ಸಂತಾಪ ಸೂಚಿಸಿದ್ದು, ತಮ್ಮ ಫೇಸ್ ಬುಕ್ ಪೇಜ್ ಬೇಸರದಿಂದ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ. ಇಂದು ಆನೇಕಲ್ ತಾಲೂಕಿನ ಸಮದೋರಿನಲ್ಲಿ ಮಧ್ಯಾಹ್ನ 2 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


ಇನ್ನು ಮೋಹನ್ ಅವರ ಪತ್ನಿ ವತ್ಸಲಾ ಕೂಡ ಪ್ರಸಿದ್ದ ಕಿರುತೆರೆ ನಟಿಯಾಗಿದ್ದು ಕನ್ನಡದ ಪ್ರಸಿದ್ದ ಧಾರಾವಾಹಿ ಕನ್ನಡತಿಯಲ್ಲಿ ಇತ್ತೀಚೆಗೆ ಅಭಿನಯಿಸಿದ್ದರು. ಅಲ್ಲದೇ ಈ ವಾರವಷ್ಟೇ ತೆರೆಕಂಡ ಕಟ್ಟಿಂಗ್ ಶಾಪ್ ಚಿತ್ರದಲ್ಲಿ ಸಹ ಪಾತ್ರ ಮಾಡಿದ್ದರು.

ಇದನ್ನೂ ಓದಿ: ರಾಧಿಕಾ-ಯಶ್ ಮಗಳ ಹೊಸಾ ಫೋಟೋ ನೋಡಿ, ಎಷ್ಟೊಂದು ಮುದ್ದು!

ರಂಗಭೂಮಿ ಹಿನ್ನೆಲೆಯಿಂದ ಬಂದ ವತ್ಸಲಾ ಅವರು ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾನಪದ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಮುಲಕ ಕಿರುತೆರೆಗೆ ಬಂದು, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟಿಯಾಗಿರುವ ವತ್ಸಲಾ ಅವರು ಮಮ್ಮಿ, ಡೈರಕ್ಟರ್ಸ್ ಸೇವ್ ಮಿ, ಅಮೃತಮತಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಮತ್ತೊಬ್ಬ ನಿರ್ಮಾಪಕರ ನಿಧನ

ಇನ್ನು ಇಂದು ಮತ್ತೊಬ್ಬ ಸ್ಯಾಂಡಲ್​ವುಡ್​ ನಿರ್ಮಾಪಕ ಬಾಲರಾಜ್‌ ಅವರು ಇಂದು ಬೆಳಗ್ಗೆ ವಾಕಿಂಗ್‌ಗೆ ತೆರಳುವಾಗಿ ಅಪಘಾತವಾಗಿ ಮೃತಪಟ್ಟಿದ್ದಾರೆ.
ವಾಹನವೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪುಟ್‌ ಪಾತ್‌ಗೆ ತಲೆ ತಾಗಿದೆ. ತಕ್ಷಣವೇ ಹತ್ತಿರವಿದ್ದ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: 'ಅಲೆಕ್ಸಾ' ಅವತಾರದಲ್ಲಿ ಅದಿತಿ - ಫುಲ್​ ಫೈಟಿಂಗ್ ಮೂಡ್​ನಲ್ಲಿ ಶ್ಯಾನೆ ಟಾಪ್ ಹುಡ್ಗಿ

ಹಾಗೆಯೇ, ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ಮಾಪಕ ಎಂ.ಪಿ. ಶಂಕರ್ ಪತ್ನಿ ಮಂಜುಳಾ ಶಂಕರ್ ನಿಧನರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು. ಮೈಸೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಂಜುಳಾ ಶಂಕರ್ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
Published by:Sandhya M
First published: