ಬಿ-ಟೌನ್​ನ ಈ ನಟಿಯ ಬೆಲ್ಲಿ ಡಾನ್ಸ್​ ವಿಡಿಯೋ ವೈರಲ್​...!

Anitha E | news18
Updated:July 7, 2018, 4:06 PM IST
ಬಿ-ಟೌನ್​ನ ಈ ನಟಿಯ ಬೆಲ್ಲಿ ಡಾನ್ಸ್​ ವಿಡಿಯೋ ವೈರಲ್​...!
Anitha E | news18
Updated: July 7, 2018, 4:06 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗಷ್ಟೆ 80 ಕೆ.ಜಿ ತೂಕದ ಡ್ರೆಸ್​ ತೊಟ್ಟು ಜಿಂಕೆ ಮರಿಯಂತೆ ಐಫಾ ಪ್ರಶಸ್ತ್ರಿ ಕಾರ್ಯಕ್ರಮದಲ್ಲಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು ಬಿ-ಟೌನ್​ ನಟಿ ಊರ್ವಶಿ ರೌತೆಲಾ. ಈಗ ಇದೇ 'ಹೇಟ್​ ಸ್ಟೋರಿ 4' ಸಿನಿಮಾದ ಈ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಸಹ ಅವರು ತಮ್ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿರುವ ವಿಡಿಯೋದಿಂದಾಗಿ.

80 ಕೆ.ಜಿ ತೂಕದ ಡ್ರೆಸ್​ ತೊಟ್ಟು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ವಿಡಿಯೋಗಾಗಿ ಈ ಲಿಂಕ್​ ಕ್ಲಿಕ್ ಮಾಡಿ...

https://kannada.news18.com/news/actress-urvashi-rautela-walked-on-the-red-carpet-wearing-80-kg-dress-55925.html

ಹೌದು ಡಾನ್ಸ್​ ಮಾಡುವುದರಲ್ಲಿ ಸದಾ ಎತ್ತಿದ ಕೈ ಈ ನಟಿಯದ್ದು. ಬಳಕುವ ಬಳ್ಳಿಯಂತಿರುವ ಈ ನಟಿ ಸೊಂಟ ಕುಣಿಸಿ ಸುದ್ದಿಯಾಗಿದ್ದಾರೆ. ಈಕೆ ಪ್ರಕಟಿಸಿರುವ ಬೆಲ್ಲಿ ಡಾನ್ಸ್​ ವಿಡಿಯೋ ಈಗ ಫುಲ್ ವೈರಲ್​ ಆಗುತ್ತಿದ್ದು, 30 ಲಕ್ಷ ವೀಕ್ಷಣೆ ಗಳಿಸಿದೆ.

ವಿಡಿಯೋ ಪ್ರಕಟಿಸಿರುವುದರೊಂದಿಗೆ ನಿಮ್ಮ ಡಾನ್ಸ್​ ಪಾರ್ಟ್​ನರ್​ ಅನ್ನು ಟ್ಯಾಗ್​ ಮಾಡಿ ಎಂದು #ಟ್ಯಾಗ್​ ಹಾಕುವ ಮೂಲಕ 'ಬೆಲ್ಲಿ ಡಾನ್ಸ್ ಹೊಸ​ ಅಭಿಯಾನ'ಕ್ಕೆ ನಾಂದಿ ಹಾಡಿದ್ದಾರೆ.

 
Loading...

2013ರಲ್ಲಿ 'ಸಿಂಗ್​ ಸಾಬ್​ ದಿ ಗ್ರೇಟ್​' ಸಿನಿಮಾ ಮೂಲಕ ಬಿ-ಟೌನ್​ಗೆ  ಎಂಟ್ರಿ ಕೊಟ್ಟ ಈ ನಾಯಕಿ 'ಸನಮ್​ ರೇ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಕಡೆಯದಾಗಿ 'ಹೇಟ್​ ಸ್ಟೋರಿ 4'ನಲ್ಲಿ ಕಾಣಿಸಿಕೊಂಡಿದ್ದಾರೆ.

 
First published:July 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ