ನಟಿ ಮತ್ತು ಮಾಡೆಲ್ ಊರ್ವಶಿ ರೌಟೇಲಾ (Urvashi Rautela) ಅಂತ ಹೆಸರು ಕೇಳಿದರೆ ಸಾಕು ಬಹುತೇಕರಿಗೆ ನೆನಪಾಗುವುದು ಭಾರತೀಯ ಕ್ರಿಕೆಟಿಗನಾದ ರಿಷಭ್ ಪಂತ್ (Rishabh Pant) ಅವರೊಂದಿಗಿನ ಬ್ರೇಕಪ್ ಸ್ಟೋರಿ. ಅಷ್ಟೇ ಅಲ್ಲದೆ, ಈ ವಿಷಯಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ತುಂಬಾನೇ ಸುದ್ದಿಯಲ್ಲಿದ್ದರು ಅಂತ ಬಹುತೇಕರಿಗೆ ತಿಳಿದ ವಿಷಯವೇ ಆಗಿದೆ. ಈ ನಟಿ ಇತ್ತೀಚೆಗೆ ಆಸ್ಟ್ರೇಲಿಯಾಕ್ಕೆ (Australia) ಹಾರಿರುವುದು ಮತ್ತು ಅಲ್ಲಿ ರಿಷಭ್ ಪಂತ್ ಸಹ ಮುಂಬರುವ ಟ್ವೆಂಟಿ20 ವಿಶ್ವಕಪ್ ಟೂರ್ನಿಯನ್ನು ಆಡಲು ಹೋಗಿದ್ದು ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚು ಮಾಡಿದೆ. ಅವರು ಆಸ್ಟ್ರೇಲಿಯಾಕ್ಕೆ ಹೋಗುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಪೋಸ್ಟ್ ಮಾಡಿದ್ದರು.
ಈಗ, ನಟಿ ಮತ್ತೊಮ್ಮೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ವಿಭಿನ್ನ ಸಂದೇಶದೊಂದಿಗೆ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಈಗ ಪೋಸ್ಟ್ ಮಾಡಿರುವ ಫೋಟೋ ತುಂಬಾ ವಿಭಿನ್ನ
ಎಲ್ಲಾ ಗ್ಲಾಮ್ ಅವತಾರಗಳಲ್ಲಿ ಕಾಣಿಸಿಕೊಳ್ಳುವ ತನ್ನ ಸಾಮಾನ್ಯ ಇನ್ಸ್ಟಾಗ್ರಾಮ್ ಪೋಸ್ಟ್ ಗಳಿಗಿಂತಲೂ ಇದು ತುಂಬಾನೇ ಭಿನ್ನವಾಗಿದೆ. ನಟಿ ಈ ಬಾರಿ ಸಿಂಧೂರ ಮತ್ತು ಮಂಗಳಸೂತ್ರ (ವಿವಾಹಿತ ಹಿಂದೂ ಮಹಿಳೆಯರು ಧರಿಸುವ) ಸೀರೆಯನ್ನು ಧರಿಸಿರುವಂತಹ ಸರಳವಾದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. "ಪ್ರೀತಿಯಲ್ಲಿರುವ ಮಹಿಳೆಗೆ, ಕುಂಕುಮಕ್ಕಿಂತ ಪ್ರಿಯವಾದದ್ದು ಯಾವುದೂ ಇಲ್ಲ, ನನ್ನ ಜೀವನದುದ್ದಕ್ಕೂ ಎಲ್ಲಾ ಆಚರಣೆಗಳು ಮತ್ತು ಭರವಸೆಗಳೊಂದಿಗೆ ನೀವು ನನ್ನೊಂದಿಗೆ ಇರಬೇಕು” ಎಂದು ಅವರು ಫೋಟೋ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
View this post on Instagram
'ಸನಮ್ ರೇ' ಚಿತ್ರದ ನಟಿ ಊರ್ವಶಿ ಅವರು ಯಾವೊಬ್ಬರ ಹೆಸರನ್ನು ಬಹಿರಂಗವಾಗಿ ತೆಗೆದುಕೊಳ್ಳದಿದ್ದರೂ, ಅವರು ಕ್ರಿಕೆಟಿಗ ರಿಷಭ್ ಪಂತ್ ಬಗ್ಗೆ ಸುಳಿವು ನೀಡುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಮನವರಿಕೆಯಾಗಿದೆ. ಕೆಲವು ಅಭಿಮಾನಿಗಳು ಉಲ್ಲಾಸದಿಂದ ನಟಿಯನ್ನು ಟ್ರೋಲ್ ಮಾಡಿದರು ಮತ್ತು ಪಂತ್ ಅವರನ್ನು ಒಂಟಿಯಾಗಿ ಬಿಡುವಂತೆ ಕೇಳಿದರು ಮತ್ತು ಇತರರು ಆಕೆಯನ್ನು ನ್ಯಾಚುರಲ್ ಬ್ಯೂಟಿ ಎಂದು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ: Shubman Gill: ಶುಭ್ಮನ್ ಗಿಲ್-ಸಾರಾ ಡೇಟಿಂಗ್ ನಡುವೆ ಹೊಸ ಫೋಟೋ ವೈರಲ್, ಹೋಟೆಲ್ನಿಂದ ಹೊರಬಂದ ಕ್ಯೂಟ್ ಜೋಡಿ
ಅಂತೆಯೇ, ಕೆಲವು ದಿನಗಳ ಹಿಂದೆ, ಈ ಸುಂದರಿ ಹಸಿರು ಲೆಹೆಂಗಾದಲ್ಲಿ ಕ್ಲಿಕ್ಕಿಸಿಕೊಂಡ ಮತ್ತೊಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ "ಅವರನ್ನು ಹೇಗೆ ಮರೆಯುವುದು, ವ್ಯಕ್ತಿ ಸಾಯಬಹುದು ಆದರೆ ನೆನಪುಗಳು ಸಾಯುವುದಿಲ್ಲ” ಎಂದು ಶೀರ್ಷಿಕೆಯನ್ನು ನೀಡಿದ್ದರು.
ಪಂತ್ ಅವರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಅಂತ ಟ್ರೋಲ್
ಅಕ್ಟೋಬರ್ 23 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಆಟದ ಮೈದಾನದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ತಂಡವು ತನ್ನ ಮೊದಲ ಪಂದ್ಯವನ್ನು ಆಡಲಿರುವುದರಿಂದ ಪ್ರಸ್ತುತ ಟ್ವೆಂಟಿ20 ವಿಶ್ವಕಪ್ ಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಪಂತ್ ಅವರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಕೆಲವು ಟ್ರೋಲ್ ಗಳು ಆರೋಪಿಸಿವೆ.
"ನಾವು ನಿಮ್ಮಿಬ್ಬರಿಗೆ ವಿಶ್ವಕಪ್ ನಂತರ ಮದುವೆ ಮಾಡಿಸುತ್ತೇವೆ, ಆದರೆ ದಯವಿಟ್ಟು ಈಗಲೇ ಅವರ ಗಮನವನ್ನು ಬೇರೆಡೆಗೆ ತಿರುಗಿಸಬೇಡಿ" ಎಂದು ಅಭಿಮಾನಿಯೊಬ್ಬರು ಪೋಸ್ಟ್ ಗೆ ಕಾಮೆಂಟ್ ಮಾಡಿದರೆ, "ದಯವಿಟ್ಟು ರಿಷಭ್ ಪಂತ್ ಅವರನ್ನು ವಿಶ್ವಕಪ್ ಆಡಲು ಬಿಟ್ಟು ಬಿಡಿ” ಎಂದು ಮತ್ತೊಬ್ಬರು ಪೋಸ್ಟ್ ಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Sudeep And Chris Gayle: ಯೂನಿವರ್ಸಲ್ ಬಾಸ್ ಜೊತೆ ಸ್ಯಾಂಡಲ್ವುಡ್ ಬಾದ್ಶಾ, ಕ್ರಿಕೆಟ್ ದಿಗ್ಗಜರು vs ಭಾರತ ನಟರು!
ರೆಸ್ಟೋರೆಂಟ್ ಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ರಿಷಭ್ ಪಂತ್ ಅವರು ಊರ್ವಶಿ ಅವರೊಂದಿಗೆ ಡೇಟಿಂಗ್ ಮಾಡುವುದನ್ನು ನಿರಾಕರಿಸಿದರು. ಅವರು ಗೆಳತಿ ಇಶಾ ನೇಗಿ ಅವರೊಂದಿಗಿನ ತಮ್ಮ ಸಂಬಂಧವನ್ನು ಸಹ ಘೋಷಿಸಿದ್ದರು. ಆದಾಗ್ಯೂ, ಸಂದರ್ಶನವೊಂದರಲ್ಲಿ, ರಿಷಭ್ ಅವರು ಒಮ್ಮೆ ಸುಮಾರು 10 ಗಂಟೆಗಳ ಕಾಲ ಹೋಟೆಲ್ ಲಾಬಿಯಲ್ಲಿ ತನಗಾಗಿ ಕಾಯುತ್ತಿದ್ದರು ಎಂದು ಊರ್ವಶಿ ಖುದ್ದು ಹೇಳಿಕೊಂಡು ಅವರ ಮಧ್ಯೆ ಏನೋ ನಡೀತಾ ಇದೆ ಅನ್ನೋದರ ಬಗ್ಗೆ ಸುಳಿವು ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ