Video: 80 ಕೆ.ಜಿ. ತೂಕದ ಡ್ರೆಸ್​ ತೊಟ್ಟು ಐಫಾದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ಬಿ-ಟೌನ್​ ನಟಿ

news18
Updated:June 25, 2018, 3:54 PM IST
Video: 80 ಕೆ.ಜಿ. ತೂಕದ ಡ್ರೆಸ್​ ತೊಟ್ಟು ಐಫಾದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ಬಿ-ಟೌನ್​ ನಟಿ
news18
Updated: June 25, 2018, 3:54 PM IST
ನ್ಯೂಸ್​ 18 ಕನ್ನಡ 

10-20 ಕೆ.ಜಿ ತೂಕದ ಬಟ್ಟೆತೊಟ್ಟು ನಟಿಯರು ನೃತ್ಯ ಮಾಡೋದನ್ನು ಈಗಾಗಲೇ ಸಂಜಯ್​ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ನೋಡಿದ್ದೇವೆ. ಎಷ್ಟೇ ಕಷ್ಟ ಆದರೂ ಏನೂ ಆಗದಂತೆ ಜಿಂಕೆಯಂತೆ ಕುಣಿಯುತ್ತಾರೆ ನಟಿಯರು. ಆದರೆ ಇಲ್ಲೊಬ್ಬರು ಬಿ-ಟೌನ್​ ಬೆಡಗಿ ಈಗ 80 ಕೆ.ಜಿ. ತೂಕದ ಗೌನ್​ ತೊಟ್ಟು ಐಫಾ ಅಂಗಳಕ್ಕೆ ಕಾಲಿಟ್ಟಿದ್ದರು.

'ಸನಮ್​ ರೆ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಊರ್ವಶಿ ರೌತೆಲಾ ಈ ಬಾರಿಯ ಐಫಾದಲ್ಲಿ 80 ಕೆ.ಜಿ. ತೂಕದ ವಸ್ತ್ರವನ್ನು ತೊಟ್ಟು ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿತ್ತು. ಈಗ ಈ ಡ್ರೆಸ್​ನ ಕಾರಣದಿಂದಾಗಿಯೇ ಊರ್ವಶಿ ಚರ್ಚೆಯಲ್ಲಿದ್ದಾರೆ. ತನ್ನ ಡ್ರೆಸ್​ ಕುರಿತು ತಾವೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
#FeelingFaint #IIFA2018 #80Kgs


Loading...

A post shared by URVASHI RAUTELA 🇮🇳Actor (@urvashirautela) on


ಸಾಮಾನ್ಯವಾಗಿ ವಿನ್ಯಾಸಕರು ಸಿದ್ಧಪಡಿಸುವ ಡ್ರೆಸ್​ಗಳ ತೂಕ 10-25 ಕೆ.ಜಿ. ಇರುತ್ತದೆ. ಆದರೆ ಊರ್ವಶಿ 80 ಕಿ.ಜಿ. ತೂಕದ ಡ್ರೆಸ್​ ತೊಟ್ಟು ಆರಾಮಾಗಿ ಓಡಾಡಿಕೊಂಡು ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು.
ಆ ವಸ್ತ್ರ ತೊಟ್ಟಾಗ ಅವರ ಮುಖದಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲವಾದರೂ, ಕಾರ್ಯಕ್ರಮಕ್ಕೆ ಹೋಗುವ ಮುನ್ನ ಊರ್ವಶಿ ತಾನು ಇಂದು ತಲೆಸುತ್ತಿ ಬೀಳುವುದಾಗಿ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
First published:June 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...