ಪ್ರಧಾನಿ ಟ್ವೀಟ್​ ನಕಲು ಮಾಡಿ ಟ್ರೋಲ್​ ಆದ ಐರಾವತ ಚಿತ್ರದ ನಟಿ 

Urvashi Rautela: ಬಿ-ಟೌನ್​ನಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ತಮ್ಮ ನೃತ್ಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಬೋಲ್ಡ್​ ಫೋಟೋಗಳಿಂದ ಸಾಕಷ್ಟು ಸುದ್ದಿಯಲ್ಲಿರುತ್ತಾರೆ ಊರ್ವಶಿ. ಇಂತಹ ನಟಿ ಈಗ ತಾವೇ ಮಾಡಿಕೊಂಡ ಎಡವಟ್ಟಿನಿಂದಾಗಿ ಈಗ ಸದ್ದು ಮಾಡುತ್ತಿದ್ದಾರೆ.

Anitha E | news18-kannada
Updated:January 20, 2020, 11:40 AM IST
ಪ್ರಧಾನಿ ಟ್ವೀಟ್​ ನಕಲು ಮಾಡಿ ಟ್ರೋಲ್​ ಆದ ಐರಾವತ ಚಿತ್ರದ ನಟಿ 
ನಟಿ ಊರ್ವಶಿ
  • Share this:
ಯಾರಾದರೂ ಮಾಡಿದ ಟ್ವೀಟ್​ ಅನ್ನು ರೀಟ್ವೀಟ್​ ಮಾಡುವುದನ್ನು ನೋಡಿದ್ದೇವೆ. ಆದರೆ ಬೇರೆಯವ ಟ್ವೀಟ್​ ಅನ್ನು ಕಾಪಿ ಮಾಡುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ..? ಒಂದು ವೇಳೆಮಾಡುವುದಾದರೂ ಟ್ವೀಟ್​ ಮಾಡಿದವರಿಗೆ ಕೃಪೆ ಕೊಡುವ ಸೌಜನ್ಯ ತೋರುತ್ತಾರೆ. ಆದರೆ ಇಲ್ಲೊಬ್ಬರು ಖ್ಯಾತ ನಟಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟ್ವೀಟ್​ ಅನ್ನೇ ನಕಲು ಮಾಡಿದ್ದಾರಂತೆ.

ಹೌದು, ಸ್ಯಾಂಡಲ್​ವುಡ್​ನಲ್ಲಿ ದರ್ಶನ್​ ಜತೆ 'ಐರಾವತ' ತೆರೆ ಹಂಚಿಕೊಂಡಿರುವ ಖ್ಯಾತ ಬಾಲಿವುಡ್​ ನಟಿ ಊರ್ವಶಿ ರೌಟೆಲ. ಒಂದು ಗಂಟೆ ನೃತ್ಯ ಪ್ರದರ್ಶನ ನೀಡಿ ಕೋಟಿ ಕೋಟಿ ಸಂಭಾವನೆ ಪಡೆಯುವ ಊರ್ವಶಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಬಲಿಯಾಗಿದ್ದಾರೆ.

Indian all rounder Hardik Pandya has gifted a puppy to actress Urvashi Rautela
ಊರ್ವಶಿ


ಬಿ-ಟೌನ್​ನಲ್ಲಿ ಮಾಡಿದ್ದು ಬೆರಳೆಣಿಕೆ ಸಿನಿಮಾಗಳಾದರೂ, ತಮ್ಮ ನೃತ್ಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಬೋಲ್ಡ್​ ಫೋಟೋಗಳಿಂದ ಸಾಕಷ್ಟು ಸುದ್ದಿಯಲ್ಲಿರುತ್ತಾರೆ ಊರ್ವಶಿ.

ಇಂತಹ ನಟಿ ಈಗ ತಾವೇ ಮಾಡಿಕೊಂಡ ಎಡವಟ್ಟಿನಿಂದಾಗಿ ಈಗ ಸದ್ದು ಮಾಡುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೆ ನಟಿ ಶಬಾನಾ ಅಜ್ಮಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದು ತಿಳಿದೇ ಇದೆ. ಈ ಕುರಿತಾಗಿ ಪ್ರಧಾನಿ ಮೋದಿ ಅವರು ಒಂದು ಟ್ವೀಟ್​ ಮಾಡಿದ್ದರು.ಶಬಾನಾ ಅಜ್ಮಿ ಅವರ ಆರೋಗ್ಯದಲ್ಲಿ ಸುಧಾರಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮಾಡಿದರು. ಆ ಟ್ವೀಟ್​ನ ಒಂದೂ ಅಕ್ಷರವನ್ನು ಬದಲಾಯಿಸದಂತೆ ಊರ್ವಶಿ ನಕಲು ಮಾಡಿದ್ದಾರೆ.ಇದನ್ನು ಕಂಡ ಟ್ವೀಟಿಗರು ನಟಿ ಊರ್ವಶಿಯನ್ನು ಟ್ರೋಲ್​ ಮಾಡಿದ್ದಾರೆ. ನಿನಗೆ ಸ್ವಲ್ಪವೂ ಬುದ್ಧಿ ಇಲ್ಲವೇ..? ಕಾಪಿ ಪೇಸ್ಟ್​..., ನಕಲು ಮಾಡಲು ಸಹ ಬುದ್ಧಿ ಬೇಕು..., ಈಕೆಗೆ ಅದೂ ಇಲ್ಲವೆಂದು ಸಾಬೀತು ಮಾಡಿದ್ದಾರೆ.... ಎಂದೆಲ್ಲ ಟೀಕಿಸಿ ಕಮೆಂಟ್​ ಮಾಡಲಾಗುತ್ತಿದೆ.

 ನಟಿ ಊರ್ವಶಿ ಇತ್ತೀಚೆಗೆ ತೆರೆಕಂಡ 'ಪಾಗಲ್​ ಪಂತಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ನೃತ್ಯ ಶೈಲಿಯಿಂದಲೇ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಊರ್ವಶಿಗೆ ಸಿನಿಮಾಗಳಲ್ಲಿ ಮಾತ್ರ ಪಾತ್ರಗಳು ಸಿಗುತ್ತಿಲ್ಲ.

Meghana Raj: ಇರುವುದೆಲ್ಲ ಬಿಟ್ಟು ಕನ್ನಡ ಸಿನಿರಂಗದಲ್ಲಿ ಛಾಪು ಮೂಡಿಸಿದ ಮೇಘನಾ ರಾಜ್​​


  
First published:January 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ