• Home
  • »
  • News
  • »
  • entertainment
  • »
  • Urfi Javed: ಮೈಮೇಲೆ ಬ್ಯಾಂಡೇಜ್ ಸುತ್ತಿ ಫ್ಯಾಷನ್ ಅಂತಿದ್ದಾರೆ ಉರ್ಫಿ!

Urfi Javed: ಮೈಮೇಲೆ ಬ್ಯಾಂಡೇಜ್ ಸುತ್ತಿ ಫ್ಯಾಷನ್ ಅಂತಿದ್ದಾರೆ ಉರ್ಫಿ!

ಉರ್ಫಿ ಜಾವೇದ್

ಉರ್ಫಿ ಜಾವೇದ್

ನಟಿ ಉರ್ಫಿ ಜಾವೇದ್ ಬ್ಯಾಂಡೇಜ್ ಸುತ್ತಿಕೊಂಡು ಫ್ಯಾಷನ್ ಎಂದು ಓಡಾಡುತ್ತಿದ್ದಾರೆ. ಏನಮ್ಮಾ ಇದು ಫ್ಯಾಷನ್ ಅಂತ ಪೇಷೆಂಟ್ ಆಗ್ಬಿಟ್ಯಾ ಅಂತಿದ್ದಾರೆ ನೆಟ್ಟಿಗರು!

  • News18 Kannada
  • Last Updated :
  • Bangalore, India
  • Share this:

ನಟಿ ಉರ್ಫಿ ಜಾವೇದ್ (Urfi Javed) ಇತ್ತೀಚೆಗಷ್ಟೇ ಪ್ಯಾಂಟ್ ಧರಿಸಿ ಟಾಪ್ ಲೆಸ್ (Topless) ಆಗಿ ವಿಡಿಯೋ (Video) ಶೇರ್ ಮಾಡಿದ್ದರು. ನಟಿ ಬಟ್ಟೆ ಧರಿಸೋ ಬದಲು ದೇಹದ ಮೇಲೆ ಬಣ್ಣ ಹಚ್ಚುವ, ಏನಾನ್ನಾದರೂ ಅಂಟಿಸಿ ದೇಹ (Body) ಮರೆ ಮಾಚುವ ಕೆಲಸ ಮಾಡುತ್ತಲೇ ಇರುತ್ತಾರೆ. ಈಗ ನಟಿಯ (Actress) ವಿಡಿಯೋ ಒಂದು ವೈರಲ್ (Viral) ಆಗಿದೆ. ಚಿಕಿತ್ಸೆಗೆ ಬಳಸುವ ಬ್ಯಾಂಡೇಜ್ ತೆಗೆದುಕೊಂಡು ಬಾಡಿ ಕವರ್ ಮಾಡಿದ್ದಾರೆ ನಟಿ. ಎದೆ ಹಾಗೂ ಸೊಂಟದ ಭಾಗವನ್ನು ನಟಿ ಬ್ಯಾಂಡೇಜ್ (Bandage) ಬಳಸಿ ಸುತ್ತಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್  (Viral) ಆಗಿದ್ದು ಎನ್ ಮೇಡಂ ಫ್ಯಾಷನ್ (Fashion) ಎನ್ನುತ್ತಾ ಪೇಷೆಂಟ್ ಆಗ್ಬಿಟ್ರಾ ಎಂದು ಕೇಳುತ್ತಿದ್ದಾರೆ ನೆಟ್ಟಿಗರು.


ಬ್ಯಾಂಡೇಜ್ ಸುತ್ತಿದ ಉರ್ಫಿ


ಉರ್ಫಿ ಜಾವೇದ್ ಬ್ಯಾಂಡೇಜ್ ಕೈಯಲ್ಲಿ ಹಿಡಿದು ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಅದರಿಂದಲೇ ಬಾಡಿ ಕವರ್ ಮಾಡಿದ ದೃಶ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೂ ಇಂತೂ ಉರ್ಫಿಯ ಓವರ್ ಕ್ರಿಯೇಟಿವಿಟಿ ನೋಡಿ ನೆಟ್ಟಿಗರಂತೂ ಸುಸ್ತಾಗಿದ್ದಾರೆ.


ವೈರಲ್ ಆಯ್ತು ಬ್ಯಾಂಡೇಜ್ ಫ್ಯಾಷನ್


ನಟಿಯ ವಿಡಿಯೋ 112 ಸಾವಿರ ವೀವ್ಸ್ ಗಳಿಸಿದೆ. ಎರಡು ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ. ಉರ್ಫಿಗೆ ದಿನವೂ ಹಾಲೋವೀನ್, ಬ್ಯಾಂಡೇಜ್ ಡ್ರೆಸ್ ಆಗಬಹುದೆಂದು ಎಂದಾದರೂ ಯೋಚಿಸಿದ್ದಿರಾ ಎಂದು ನಟಿ ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.


ಇದನ್ನೂ ಓದಿ: Bollywood Actresses: ರಾಜಮನೆತನದಿಂದ ಬಂದ ನಟಿಯರು! ರಿಯಲ್ ರಾಜಕುಮಾರಿಯರು


ನೆಟ್ಟಿಗರು ನಟಿಯ ಲಿಪ್​ಸ್ಟಿಕ್ ಹಾಗೂ ಬ್ಯಾಂಡೇಜ್ ಡ್ರೆಸ್ ಮೆಚ್ಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಂದಷ್ಟು ಜನ ಇದನ್ನೂ ಬಿಡಲ್ವಾ ಎಂದು ಕಾಲೆಳೆದಿದ್ದಾರೆ. ಟೋಟಲಿ ಉರ್ಫಿ ತಮ್ಮ ಬ್ಯಾಂಡೇಜ್ ಡ್ರೆಸ್ ಮೂಲಕ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದ್ದಾರೆ.

View this post on Instagram


A post shared by Uorfi (@urf7i)

ಟಾಪ್ ಧರಿಸದೆ ಬಂದ ನಟಿ


ಇತ್ತೀಚೆಗೆ ಉರ್ಫಿ ಜಾವೇದ್ ಟಾಪ್​ ಲೆಸ್ ಆಗಿ ಕಾಣಿಸಿಕೊಂಡಿದ್ದರು. ಬ್ಲ್ಯಾಕ್ ಪ್ಯಾಂಟ್ ಧರಿಸಿಕೊಂಡು ಬಂದ ನಟಿ ಟಾಪ್ ಧರಿಸಿರಲಿಲ್ಲ. ಇದನ್ನು ನೋಡಿದ ನೆಟ್ಟಿಗರು ಏನ್ ಮೇಡಂ ಟಾಪ್ ಧರಿಸೋಕೆ ಮರೆತುಬಿಟ್ಟಿರಾ ಎಂದು ಕಾಲೆಳೆದಿದ್ದರು. ಅಂತೂ ಇಂತೂ ನಟಿ ತಮ್ಮ ಫ್ಯಾಷನ್​ಗಾಗಿ ಪ್ರತಿದಿನ ಟ್ರೋಲ್ ಆಗುತ್ತಲೇ ಇರುತ್ತಾರೆ.


ಇದನ್ನೂ ಓದಿ: Urfi Javed: ಬೆತ್ತಲೆ ಫೋಟೋ ಶೂಟ್ ಮಾಡಿದ ಉರ್ಫಿ! ಗ್ಲಾಸ್ ಹಿಡಿದಿದ್ದಕ್ಕೆ ಬಚಾವ್ 


ಗ್ಲಾಸ್ ಹಿಡಿದು ದೇಹ ಮುಚ್ಚಿದ ನಟಿ


ಉರ್ಫಿ ಜಾವೇದ್ ಬೆತ್ತಲೆಯಾಗಿ ಕಾಣಿಸಿಕೊಂಡು ಹಳದಿ ಬಣ್ಣದ ಪೇಂಟ್ ಹಚ್ಚಿ ಖಾಸಗಿ ಭಾಗ ಕವರ್ ಆಗುವಂತೆ ಇರುವ ಗ್ಲಾಸ್ ಅಥವಾ ಗಾಜನ್ನು ಕೈಯಲ್ಲಿ ಹಿಡಿದಿದ್ದಾರೆ. ಇದು ನಟಿಯ ಮಾನವನ್ನು ಮುಚ್ಚಿದೆ ಎನ್ನುವುದು ಸತ್ಯ. ನಟಿಯ ಈ ಫೋಟೋಗೆ 116 ಸಾವಿರ ಲೈಕ್ಸ್ ಬಂದಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದರು. ಕಮೆಂಟ್ ಮಾಡಿದ ನೆಟ್ಟಿಗರು ಇಷ್ಟೇನಾ, ಇನ್ನೇನಾದರೂ ಇದೆಯಾ ಎಂದು ಕಾಲೆಳೆದಿದ್ದರು.


ಟ್ರೋಲ್​ ಕೇರ್ ಮಾಡಲ್ಲ ನಟಿ


ಬಹಳಷ್ಟು ನಟಿಯರು, ಜನರು ಉರ್ಫಿಯನ್ನು ಟ್ರೋಲ್ ಮಾಡಿ ಕಾಲೆಳೆದರೂ ಉರ್ಫಿ ಒಂಚೂರು ತೆಲೆ ಕೆಡಿಸಿಕೊಳ್ಳುವುದಿಲ್ಲ. ಈ ಕಾರಣದಿಂದಲೇ ನಟಿ ಸೋಷಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಏರಿಸಿಕೊಳ್ಳುತ್ತಲೇ ಇದ್ದಾರೆ.

Published by:Divya D
First published: