ಉರ್ಫಿ ಜಾವೇದ್ (Urfi Javed) ಬಗೆ ಬಗೆಯ ಅವತಾರ ಮಾಡಿಕೊಂಡು ರಸ್ತೆಗಿಳಿಯೋದು (Road) ಹೊಸದೇನಲ್ಲ. ಈ ಬಾರಿ ನಟಿ ರಸ್ತೆಗೆ ಬಂದಿಲ್ಲ. ಆದರೆ ಪ್ರೇಮಿಗಳ ದಿನಾಚರಣೆ (Valentine's Day) ಸಂದರ್ಭದಲ್ಲಿ ವಿಶೇಷವಾದ ವಿಡಿಯೋ (Video) ಒಂದನ್ನು ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ನಟಿ ಹೊಸ ಲುಕ್ ನೋಡಿ ರೆಡ್ ಹಾಟ್ ಚಿಲ್ಲಿ ಎಂದೇ ಕರೆದಿದ್ದಾರೆ ನೆಟ್ಟಿಗರು. ಇದನ್ನು ಹೊರತುಪಡಿಸಿದ ನಟಿಯ ಈ ಹೊಸ ಅವತಾರಕ್ಕೆ ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಏನೇನು ಹೇಳಿದ್ದಾರೆ ಗೊತ್ತೇ?
ಪ್ರೇಮಿಗಳ ದಿನ ಫುಲ್ ರೆಡ್
ನಟಿ ಉರ್ಫಿ ಜಾವೇದ್ ಪ್ರೇಮಿಗಳ ದಿನ ಕಂಪ್ಲೀಟ್ ರೆಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ತಿಯಾಗಿ ರೆಡ್ ಕಲರ್ ಡ್ರೆಸ್ನಲ್ಲಿ ನಟಿ ಮಿಂಚಿದ್ದಾರೆ. ಒಳಉಡುಪಿನಿಂದ ಹಿಡಿದು ಹಿಂಭಾಗದಲ್ಲಿ ಡ್ರಾಪ್ ಮಾಡುವ ತನಕ ಎಲ್ಲವೂ ರೆಡ್.
ಪ್ರೇಮಿಗಳ ದಿನಾಚರಣೆಯಂದು ರೆಡ್ ಕಾಮನ್
ಪ್ರೇಮಿಗಳ ದಿನದಂದು ಎಲ್ಲರೂ ಕೆಂಬಣ್ಣದ ಉಡುಗೆ ಧರಿಸುತ್ತಾರೆ. ಇದು ವಿಶೇಷ ಏನಲ್ಲ. ಆದರೆ ಉರ್ಫಿ ಜೊತೆ ಪ್ರೇಮಿ ಇರಲಿಲ್ಲ. ರೆಡ್ ಡ್ರೆಸ್ ಮಾತ್ರ ಇತ್ತು. ನಟಿ ಸುಂದರವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಪೋಸ್ಟ್ ಮಾಡಿದ ಒಂದೇ ದಿನಕ್ಕೆ ಲಕ್ಷಗಟ್ಟಲೆ ಲೈಕ್ಸ್ ಪಡೆದುಕೊಂಡಿದೆ.
ವೈರಲ್ ಆಯ್ತು ವಿಡಿಯೋ
ನಟಿಯ ವಿಡಿಯೋಗೆ 196 ಸಾವಿರ ಲೈಕ್ಸ್ ಬಂದಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 5 ಸಾವಿರ ಜನರು ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ವಿಡಿಯೋ ನೋಡಿ ಕಮೆಂಟ್ ಮಾಡಿರುವುದು ವಿಶೇಷ.
ವಿಡಿಯೋ ನೋಡಿದ ನೆಟ್ಟಿಗರು ಕೆಲವರು ಮುಕ್ತವಾಗಿ ಹೊಗಳಿದ್ದರೆ ಇನ್ನು ಕೆಲವರು ಕಾಲೆಳೆದು ಟ್ರೋಲ್ ಮಾಡಿದ್ದಾರೆ. ಒಬ್ಬರು ಮಾತ್ರ ಹಿಂದೆ ಇಳಿಬಿಟ್ಟಿರೋ ಬಟ್ಟೆ ಮುಂದಕ್ಕೆ ಜೋಡಿಸಬಹುದಾಗಿತ್ತಲ್ವೇ ಅಂತ ಪ್ರಶ್ನೆ ಮಾಡಿದ್ದಾರೆ.
View this post on Instagram
ಟ್ರೋಲ್ಗೆ ಡೋಂಟ್ ಕೇರ್
ನಟಿ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಹಳಷ್ಟು ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಈ ಮೂಲಕ ತಮ್ಮ ಫಾಲೋವರ್ಸ್ ಸಂಖ್ಯೆ ಹೆಚ್ಚಿಸುತ್ತಲೇ ಇದ್ದಾರೆ.
ಉರ್ಫಿ ವಿಡಿಯೋ ಸಖತ್ ಟ್ರೋಲ್
ಉರ್ಫಿ ಜಾವೇದ್ ಅನೇಕ ವಿಡಿಯೋ ಹಾಗೂ ಫೋಟೋಗಳು ಸಖತ್ ಟ್ರೋಲ್ ಆಗಿದೆ. ಈ ಹಿಂದೆ ಜಡೆಯಲ್ಲೇ ಮೈ ಮುಚ್ಚಿಕೊಂಡು ಬಂದ ಉರ್ಫಿ ಜಾವೇದ್ ವಿಡಿಯೋ ಕೂಡ ಸಖತ್ ಟ್ರೋಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆ ಕಮೆಂಟ್ ಮಾಡ್ತಿದ್ದಾರೆ. ಏನ್ ತಾಯಿ ನಿನ್ನ ಅವತಾರ ಅಂತಿದ್ದಾರೆ. ಮೊದಲು ಬಟ್ಟಿ ಧರಿಸೋದು ಕಲಿ ಅಂತಿದ್ದಾರೆ. ಇನ್ನು ಕೆಲವರು ಉರ್ಫಿ ಜಾವೇದ್ ಬೋಲ್ಡ್ ಅವಾತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡ್ರೆಸ್ ಹಾಕದೆ ಇದೆಂಥಾ ಫ್ಯಾಷನ್
ಉರ್ಫಿ ಫೋಟೋ ನೋಡಿದ ನೆಟ್ಟಿಗರು, ನಿನ್ನ ಫ್ಯಾಷಲ್ ಮಿತಿ ಮೀರಿದೆ ಎಂದಿದ್ದಾರೆ. ಬಟ್ಟೆ ಹಾಕದೆ ಇದೆಂಥಾ ಫ್ಯಾಷನ್ ಮಾಡ್ತಿಯಮ್ಮ ನೀನು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಟ್ರೋಲ್ ಮಾಡಿ ಕೇಳಿದರೆ ನೀನು ಫ್ಯಾಷನ್ ಡಿಸೈನಿಂಗ್ ಎನ್ನುತ್ತಿ. ಆದರೆ ಡ್ರೆಸ್ಸೇ ಇಲ್ಲದೆ ಎಂಥಾ ಫ್ಯಾಷನ್ ಮಾಡ್ತೀಯಾ ಎಂದು ಕಮೆಂಟ್ ಮಾಡಿದ್ದಾರೆ. ನಟಿಯ ಈ ವಿಡಿಯೋ ಈಗ ವೈರಲ್ ಆಗಿದ್ದು, ಉರ್ಫಿ ಹುಚ್ಚುತನ ನೋಡೋಕಾಗ್ತಿಲ್ಲ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ