Akshay Kumar-Twinkle Khanna: ಮಕ್ಕಳ ಶಿಕ್ಷಣಕ್ಕಾಗಿ ಗಂಡನ ಬಳಿ ದುಡ್ಡು ಕೇಳಲ್ವಂತೆ ನಟಿ ಟ್ವಿಂಕಲ್!

ಬಾಲಿವುಡ್ ನ ಜನಪ್ರಿಯ ನಟ ಅಕ್ಷಯ್ ಕುಮಾರ್ ಮತ್ತು ನಟಿ ಟ್ವಿಂಕಲ್ ಖನ್ನಾ ಅವರ ಮಕ್ಕಳು ಎಲ್ಲಿ ಓದುತ್ತಿದ್ದಾರೆ ಅಂತ ಅನೇಕರಿಗೆ ಗೊತ್ತಿರುತ್ತದೆ. ಆದರೆ ಅನೇಕರಿಗೆ ಗೊತ್ತಿರಲಾರದ ಒಂದು ಸುದ್ದಿಯನ್ನು ನಾವು ಇಲ್ಲಿ ಹೇಳುತ್ತೇವೆ ಕೇಳಿ. ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ಅವರು ಪತಿ ಅಕ್ಷಯ್ ಕುಮಾರ್ ಅವರೊಂದಿಗೆ ಜಾಯಿಂಟ್ ಬ್ಯಾಂಕ್ ಖಾತೆಯನ್ನು ಎಂದಿಗೂ ಹೊಂದಿಲ್ಲವಂತೆ ಎಂದು ಬಹಿರಂಗಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಅವರ ಕುಟುಂಬ

ಅಕ್ಷಯ್ ಕುಮಾರ್ ಅವರ ಕುಟುಂಬ

  • Share this:
ಈ ಬಾಲಿವುಡ್ ನಟ (Bollywood actress), ನಟಿಯರ ಮಕ್ಕಳ ವಿದ್ಯಾಭ್ಯಾಸ ಎಂದರೆ ಕೇಳಬೇಕೆ? ಅವರನ್ನು ಒಳ್ಳೆಯ ಶಾಲೆಯಲ್ಲಿ ಹಾಕಿ ಚೆನ್ನಾಗಿ ಓದಿಸುತ್ತಿರುತ್ತಾರೆ ಮತ್ತು ಕೆಲವೊಬ್ಬ ನಟ, ನಟಿಯರ ಮಕ್ಕಳಂತೂ (Children) ವಿದೇಶಗಳಲ್ಲಿ ಬೋರ್ಡಿಂಗ್ ಶಾಲೆಗಳಲ್ಲಿ ಓದುತ್ತಿರುತ್ತಾರೆ.  ಅದರಲ್ಲೂ ಬಾಲಿವುಡ್ ನ ಜನಪ್ರಿಯ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಟಿ ಟ್ವಿಂಕಲ್ ಖನ್ನಾ (Twinkle Khanna) ಅವರ ಮಕ್ಕಳು ಎಲ್ಲಿ ಓದುತ್ತಿದ್ದಾರೆ ಅಂತ ಅನೇಕರಿಗೆ ಗೊತ್ತಿರುತ್ತದೆ. ಆದರೆ ಅನೇಕರಿಗೆ ಗೊತ್ತಿರಲಾರದ ಒಂದು ಸುದ್ದಿಯನ್ನು ನಾವು ಇಲ್ಲಿ ಹೇಳುತ್ತೇವೆ ಕೇಳಿ. ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ ಅವರು ಪತಿ ಅಕ್ಷಯ್ ಕುಮಾರ್ ಅವರೊಂದಿಗೆ ಜಾಯಿಂಟ್ ಬ್ಯಾಂಕ್ ಖಾತೆಯನ್ನು ಎಂದಿಗೂ ಹೊಂದಿಲ್ಲವಂತೆ ಎಂದು ಬಹಿರಂಗಪಡಿಸಿದ್ದಾರೆ.

ಟ್ವೀಕ್ ಕಂಪನಿಯನ್ನು ಪ್ರಾರಂಭಿಸಲು ತನ್ನದೇ ಹಣ ಬಳಸಿದ ನಟಿ
ಇಷ್ಟೇ ಅಲ್ಲದೆ ತನ್ನ ಸ್ವಂತ ಪ್ರದರ್ಶನವಾದ ಟ್ವೀಕ್ ನಲ್ಲಿ ನಡೆದ ಸಂಭಾಷಣೆಯ ಸಮಯದಲ್ಲಿ, ಟ್ವಿಂಕಲ್, ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಪ್ರಾಮುಖ್ಯತೆಯ ಬಗ್ಗೆ ಮತ್ತು ಮಹಿಳೆಯರ ಸಮಸ್ಯೆಗಳನ್ನು ಪರಿಹರಿಸುವ ಡಿಜಿಟಲ್ ಕಂಟೆಂಟ್ ಕಂಪನಿ ಟ್ವೀಕ್ ಅನ್ನು ಪ್ರಾರಂಭಿಸಲು ತನ್ನ ಸ್ವಂತ ಹಣವನ್ನು ಹೇಗೆ ಬಳಸಬೇಕಾಯಿತು ಎಂಬುದರ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟರು.

ಮೊದಲ ಸಂಬಳದ ಬಗ್ಗೆ ಏನಂದ್ರು ನಟಿ
ಟ್ವಿಂಕಲ್ ತನ್ನ ಮೊದಲ ಸಂಬಳವು 17ನೇ ವಯಸ್ಸಿನಲ್ಲಿ ಪಡೆದಿದ್ದು ಎಂದು ಹೇಳುತ್ತಾ ಅಗೆಲ್ಲಾ ಸಂಬಳ ತುಂಬಾನೇ ಕಡಿಮೆ ಆಗಿತ್ತು ಎಂದು ಬಹಿರಂಗಪಡಿಸಿದರು. "ಆಗಿನ ಸಂಬಳ ತಿನ್ನಲು ಲಡ್ಡುಗಳನ್ನು ಖರೀದಿಸಲು ಸಾಕಾಗುತ್ತಿತ್ತು ಅಷ್ಟೇ ಎಂದು ನಾನು ಭಾವಿಸುತ್ತಿದ್ದೆ. ಆದರೆ ನನಗೆ ನನ್ನ ಮೊದಲ ಮಹತ್ವದ ಪೇಚೆಕ್ ಪಡೆದಿದ್ದು ಇಂದಿಗೂ ನನಗೆ ನೆನಪಿದೆ ಮತ್ತು ನಾನು ಅದನ್ನು ಕಾರು, ಸಿಲ್ವರ್ ಓಪೆಲ್ ಖರೀದಿಸಲು ಬಳಸಿಕೊಂಡೇ” ಎಂದು ಹೇಳಿದರು.

ಇದನ್ನೂ ಓದಿ: Ranbir Kapoor-Alia Bhatt: ಐ ಲವ್ ಮೈ ವೈಫ್, I am Sorry; ಗರ್ಭಿಣಿ ಪತ್ನಿ ಆಲಿಯಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಕ್ಷಮೆ ಕೇಳಿದ ರಣಬೀರ್​​

"ಆ ಸಮಯದಲ್ಲಿ, ನಟಿ ನೇಹಾ ಧೂಪಿಯಾ ಮಧ್ಯ ಪ್ರವೇಶಿಸಿ "ಆ ಸಮಯದಲ್ಲಿ ಒಪೆಲ್ ಅಸ್ಟ್ರಾಸ್ ಕಾರನ್ನು ಖರೀದಿಸುವುದು ಎಂದರೆ ತುಂಬಾ ದೊಡ್ಡ ವಿಷಯವಾಗಿತ್ತು" ಎಂದು ಹೇಳಿದರು. ಅದಕ್ಕೆ ಟ್ವಿಂಕಲ್ "ಉಳಿದ ಹಣವನ್ನು ಪಾವತಿಸಲು ನಾನು ಇಎಂಐ ತೆಗೆದುಕೊಳ್ಳಬೇಕಾಯಿತು" ಎಂದು ಆ ದಿನಗಳನ್ನು ನೆನಪಿಸಿಕೊಂಡರು.

ಮಕ್ಕಳ ಶಿಕ್ಷಣಕ್ಕೂ ಇವರೇ ಹಣ ಪಾವತಿಸುತ್ತಾರಂತೆ 
ಸಂಭಾಷಣೆಯ ಸಮಯದಲ್ಲಿ, ಟ್ವಿಂಕಲ್ ಅವರು ಈ ವರ್ಷ ಮಾಸ್ಟರ್ಸ್ ಕೋರ್ಸ್ ಗೆ ಹಾಜರಾಗಲು ಸಾಕಷ್ಟು ಹಣವನ್ನು ಉಳಿಸಿದ್ದಾರೆ ಎಂದು ಬಹಿರಂಗಪಡಿಸಿದರು. "ಆದ್ದರಿಂದ ನಾನು ನನ್ನ ಮಗಳ ಕಾಲೇಜು ಫೀಸ್ ಅನ್ನು ನಾನೇ ಪಾವತಿಸುತ್ತೇನೆ. ನಾನು ಯಾವಾಗಲೂ ನನ್ನಿಬ್ಬರು ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸುತ್ತೇನೆ. ನನ್ನ ತಾಯಿ ನನ್ನ ಶಿಕ್ಷಣಕ್ಕಾಗಿ ಹಣ ಪಾವತಿಸಿದರು ಮತ್ತು ನಾನು ಸಹ ಅದನ್ನೇ ಮುಂದುವರೆಸಿ ನನ್ನ ಮಕ್ಕಳ ಶಿಕ್ಷಣಕ್ಕೆ ನಾನೇ ಹಣವನ್ನು ಖರ್ಚು ಮಾಡುತ್ತೇನೆ” ಎಂದು ಟ್ವಿಂಕಲ್ ಹೇಳಿಕೊಂಡರು.

ಪತಿಯ ಜೊತೆ ಯಾವುದೇ ಜಾಯಿಂಟ್ ಬ್ಯಾಂಕ್ ಖಾತೆ ಹೊಂದಿಲ್ಲ
ಟ್ವಿಂಕಲ್ ಅವರು "ನಾನು ಯಾವುದಕ್ಕೂ ಹೆಚ್ಚು ಹಣ ಖರ್ಚು ಮಾಡುವುದಿಲ್ಲ. ನನ್ನ ಕುಟುಂಬದವರು ನನ್ನನ್ನು ಯಾವಾಗಲೂ ಕೀಟಲೆ ಮಾಡುತ್ತ ನೀನು ಯಾವುದಕ್ಕೂ ಹಣವನ್ನು ಖರ್ಚು ಮಾಡದಿದ್ದರೆ, ನೀನು ಏಕೆ ಕೆಲಸ ಮಾಡುತ್ತಿದ್ದಿಯಾ ಎಂದು ಕೇಳುತ್ತಾರೆ" ಎಂದು ಹೇಳಿಕೊಂಡರು. ಟ್ವೀಕ್ ಅನ್ನು ಪ್ರಾರಂಭಿಸಿದಾಗ ತನ್ನ ಕೆಲಸಕ್ಕೆ ಹೂಡಿಕೆ ಮಾಡಿಕೊಳ್ಳಲು ಸ್ವಲ್ಪ ಕಷ್ಟವಾಯಿತು ಎಂದು ಅವರು ಹೇಳಿದರು. "ನನಗೆ ಸ್ಟಾರ್ಟ್ ಅಪ್ ಶುರು ಮಾಡಲು ಹಣದ ಅಗತ್ಯವಿತ್ತು ಮತ್ತು ಆ ಸಮಯದಲ್ಲಿ ನನ್ನ ಕೆಲಸದಲ್ಲಿ ಬೇರೆ ಯಾರೂ ಹೂಡಿಕೆ ಮಾಡಲಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:  Avatar: ಚಿತ್ರಮಂದಿರಗಳಲ್ಲಿ ಮತ್ತೆ ಅವತಾರ್ ದರ್ಶನ! ಚಿತ್ರದ ಹೊಸ ಟ್ರೇಲರ್ ಹೇಗಿದೆ?

ಅವರು ಮದುವೆಯಾದಾಗಿನಿಂದಲೂ ತಮ್ಮ ಪತಿ ಅಕ್ಷಯ್ ಅವರೊಂದಿಗೆ ಯಾವುದೇ ರೀತಿಯ ಜಾಯಿಂಟ್ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಎಂದು ಸಹ ಟ್ವಿಂಕಲ್ ಹೇಳಿದರು.
Published by:Ashwini Prabhu
First published: