ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್​ ನಟನ ಹೆಂಡತಿ ಮೀನು ಮಾರುತ್ತಿದ್ದರಂತೆ..!

Bollywood Star: ಬಾಲಿವುಡ್​ ಹೆಮ್ಮೆ ಪಡುವಂತಹ ನಟ ಎಂದು ಕರೆಸಿಕೊಳ್ಳುವ ನಟನ ಹೆಂಡತಿ ಮೀನು ಮಾರುತ್ತಾರಂತೆ. ಹೀಗೆಂದು ಬೇರೆ ಯಾರೂ ಹೇಳಿಕೊಂಡಿಲ್ಲ. ಖುದ್ದು ಆ ನಟನ ಪತ್ನಿಯೇ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ. 

Anitha E | news18-kannada
Updated:October 9, 2019, 4:33 PM IST
ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್​ ನಟನ ಹೆಂಡತಿ ಮೀನು ಮಾರುತ್ತಿದ್ದರಂತೆ..!
ಬಾಲಿವುಡ್​ನ ಕ್ಯೂಟ್​ ಕಪಲ್​
  • Share this:
ಈತ ಬಾಲಿವುಡ್​ನ ಸ್ಟಾರ್​ ನಟ. ಮಾಡಿದ ಸಿನಿಮಾಗಳೆಲ್ಲ ಹಿಟ್​. ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅವರೇ ಸಿನಿಮಾ ನಿರ್ಮಾಣ ಮಾಡುತ್ತಾರೆ. ಹೀಗಿರುವಾಗ ಅವರ ಹೆಂಡತಿ ಮಾತ್ರ ಮೀನು ಮಾರುತ್ತಾರಂತೆ.

ಹೌದು, ಬಾಲಿವುಡ್​ ಹೆಮ್ಮೆ ಪಡುವಂತಹ ನಟ ಎಂದು ಕರೆಸಿಕೊಳ್ಳುವ ನಟನ ಹೆಂಡತಿ ಮೀನು ಮಾರುತ್ತಾರಂತೆ. ಹೀಗೆಂದು ಬೇರೆ ಯಾರೂ ಹೇಳಿಕೊಂಡಿಲ್ಲ. ಖುದ್ದು ಆ ನಟನ ಪತ್ನಿಯೇ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಅಕ್ಷಯ್​ ಕುಮಾರ್​-ಟ್ವಿಂಕಲ್​ ಖನ್ನಾ


ನಾವು ಹೇಳುತ್ತಿರುವುದು ಮತ್ತಾರೂ ಅಲ್ಲ ಬಾಲಿವುಡ್​ನ ಆ್ಯಕ್ಷನ್​ ಕಿಂಗ್​ ಅಕ್ಷಯ್​ ಕುಮಾರ್​ ಅವರ ಹೆಂಡತಿ ಬಗ್ಗೆ. ಬಾಲಿವುಡ್​ನ ಮೊದಲ ಸೂಪರ್ ಸ್ಟಾರ್​ ರಾಜೇಶ್​ ಖನ್ನಾ ಅವರ ಮಗಳು ಹಾಗೂ ಆ್ಯಕ್ಷನ್​ ಕಿಂಗ್ ಅಕ್ಷಯ್ ಕುಮಾರ್​ ಅವರ ಹೆಂಡತಿ ಟ್ವಿಂಕಲ್​ ಖನ್ನಾ.

ಟ್ವಿಂಕಲ್​ ವಿವಾಹವಾದ ನಂತರ ಸಿನಿಮಾಗಳಿಂದ ದೂರ ಇದ್ದರೂ, ತಮ್ಮದೇ ಆದ ವ್ಯವಹಾರಗಳಲ್ಲಿ ಬ್ಯುಸಿ ಇರುತ್ತಾರೆ. ಇಂತಹ ನಟಿ ಮೀನು ಮಾರುತ್ತಾರೆ ಅಂದರೆ ನಂಬಬಹುದಾ..? ಹೌದು, ನಂಬಲೇಬೇಕು. ಟ್ವಿಕಂಲ್​ ಮೊದಲು ಆರಂಭಿಸಿದ ವ್ಯವಹಾರ ಮೀನು ಮಾರುವುದಂತೆ. ಅದೂ ತಮ್ಮ ಅಜ್ಜಿಯ ಜತೆ ಸೇರಿಕೊಂಡು ಈ ಬ್ಯುಸಿನೆಸ್​ ನಡೆಸುತ್ತಿದ್ದರಂತೆ.
 ದಿನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ವ್ಯವಹಾರಿಕ ಜೀವನದ ಕುರಿತು ಮಾತನಾಡಿದ್ದಾರೆ. ಅವರಿಗೆ ಒಂದು ಕಡೆ ಇರುವುದು ಇಷ್ಟವಿಲ್ಲವಂತೆ. ಒಂದು ವರ್ಷದಲ್ಲಿ 11 ಪ್ರಾಜೆಕ್ಟ್​ಗಳಲ್ಲಿ ಕೆಲಸ ಮಾಡಿಯೂ ಇದ್ದಾರಂತೆ. ಜೊತೆಗೆ ಇಂಟೀರಿಯರ್​ ಡಿಸೈನ್​ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ ಟ್ವಿಂಕಲ್​.ಅಕ್ಷಯ್​ ಕಳೆದ ವರ್ಷ ಸಹ ಫೋರ್ಬ್ಸ್​ ಪ್ರಕಟಿಸುವ ಅತಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿ 76ನೇ ಸ್ಥಾನದಲ್ಲಿದ್ದರು. ಈ ವರ್ಷವೂ ಅಕ್ಕಿ ಈ ಪಟ್ಟಿಯಲ್ಲಿ 33ನೇ ಸ್ಥಾನದಲ್ಲಿದ್ದಾರೆ. ಇಂತಹ ಶ್ರೀಮಂತ ನಟನ ಹೆಂಡತಿಯಾಗಿ ಟ್ವಿಂಕಲ್​ ಸ್ವತಂತ್ರವಾಗಿ ತಮ್ಮ ಕಾಲ ಮೇಲೆ ನಿಂತು ತಮ್ಮದೇ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಮಹಿಳೆಯರಿಗೆ ಹೆಮ್ಮೆಯ ವಿಷಯ.

 

Akanksha Singh: ಮಾಲ್ಡೀವ್ಸ್​ನಲ್ಲಿ ಮುತ್ತಿನ ಮಳೆ ಸುರಿಸುತ್ತಿದ್ದಾರೆ ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​..!

First published: October 9, 2019, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading