ಅಲಿ ಬಾಬಾ: ದಸ್ತಾನ್ ಎ ಕಾಬೂಲ್ ಧಾರವಾಹಿಯಲ್ಲಿ(Serial) ನಟಿಸಿದ್ದ ತುನಿಶಾ ಶರ್ಮಾ(Tunisha Sharma) ಆತ್ಮಹತ್ಯೆ ಪ್ರಕರಣ ದಿನೇ ದಿನೇ ಅನೇಕ ರಹಸ್ಯಗಳನ್ನು(Secrets) ಬಿಚ್ಚಿಡುತ್ತಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿರುವ ಧಾರಾವಾಹಿ ಸೆಟ್ನಲ್ಲಿಯೇ(Serial Set) ತುನಿಶಾ ಆತ್ಮಹತ್ಯೆ(Suicide) ಮಾಡಿಕೊಂಡಿದ್ದರು ಹಾಗೂ ಮಾನಸಿಕ ಒತ್ತಡದಿಂದ(Mental Stress) ತುನಿಶಾ ಆತ್ಮಹತ್ಯೆಗೆ ಶರಣಾದರು ಎಂಬ ಮಾಹಿತಿ ಕೂಡ ದೊರಕಿದೆ.
ನಟಿಯ ಸಾವಿಯ ಸುತ್ತ ಹಬ್ಬಿದೆ ಅನೇಕ ವದಂತಿಗಳು
ಸಾವಿಗೂ ಮುನ್ನ ತುನಿಶಾ ಶರ್ಮ ಗರ್ಭಿಣಿಯಾಗಿದ್ದರು ಎಂಬ ವದಂತಿ ಕೂಡ ಹಬ್ಬಿದ್ದು, ಮರಣೋತ್ತರ ಪರೀಕ್ಷೆಯ ವರದಿಗಳ ನಂತರ ನಟಿ ನೇಣು ಬಿಗಿದುಕೊಂಡ ನಂತರ ಉಸಿರುಗಟ್ಟಿರುವ ಕಾರಣ ಮರಣ ಹೊಂದಿದ್ದಾರೆ ಎಂಬುದು ಬಹಿರಂಗಗೊಂಡಿತ್ತು.
ಇದೀಗ ನಟಿಯ ತಾಯಿ ವನಿತಾ ಇನ್ನೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದು ಆಕೆಯ ಪ್ರಿಯಕರ ಶೀಜಾನ್ ಖಾನ್ ಹಾಗೂ ತುನಿಶಾ ನಡುವೆ ಎಲ್ಲವೂ ಹಿತಕಾರಿಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ತುನಿಶಾರದ್ದು ಆತ್ಮಹತ್ಯೆಯಲ್ಲ, ಕೊಲೆ- ತಾಯಿ ವನಿತಾ ಹೇಳಿಕೆ
ತುನಿಶಾ ತಾಯಿ ಹಾಗೂ ಮಾವ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ತಮ್ಮ ಮಗಳಿಗೆ ಶೀಜಾನ್ ಹಿಂಸಿಸುತ್ತಿದ್ದನು ಎಂಬ ಆಘಾತಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಮಾನಸಿಕ ಹಿಂಸೆಗೊಳಗಾಗಿಯೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಳು, ಹೀಗಾಗಿ ತನ್ನ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ವನಿತಾ ಸುದ್ದಿಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಶೀಜಾನ್ ತುನಿಶಾ ಕೆನ್ನೆಗೆ ಹೊಡೆದಿದ್ದ ತಾಯಿಯ ಆರೋಪ
ತುನಿಶಾ ಆತ್ಮಹತ್ಯೆಯಿಂದ ಮಾತ್ರವೇ ಸಾಯಲು ಸಾಧ್ಯವಿಲ್ಲ. 10-15 ನಿಮಿಷಗಳಲ್ಲಿ ಏನಾಯಿತು ಎಂಬುದೇ ನನಗೆ ತಿಳಿದಿಲ್ಲ. ಶೀಜಾನ್ನ ಮೇಕಪ್ ರೂಮ್ನಲ್ಲಿ ಇದು ಸಂಭವಿಸಿದ್ದರಿಂದ ನನ್ನ ಮಗುವಿಗೆ ಏನಾಯಿತು ಎಂಬುದು ದೇವರಿಗೆ ಮಾತ್ರವೇ ತಿಳಿದಿದೆ.
ಅವರಿಬ್ಬರು ಬ್ರೇಕಪ್ ಮಾಡಿಕೊಂಡ ನಂತರ ಶೀಜಾನ್ ತುನಿಶಾ ಕೆನ್ನೆಗೆ ಹೊಡೆದಿದ್ದ ಹಾಗೂ ಆತ ಪ್ರೀತಿಯ ಹೆಸರಿನಲ್ಲಿ ನನಗೆ ದ್ರೋಹ ಮಾಡಿದ್ದಾನೆ ಎಂದು ತುಂಬಾ ಅಳುತ್ತಿದ್ದಳು. ಆರಂಭದಲ್ಲಿ ಶೀಜಾನ್ ಎಂದರೆ ನನಗೆ ಇಷ್ಟ ಎಂದೇ ಮಗಳು ಹೇಳುತ್ತಿದ್ದಳು ಎಂದು ತುನಿಶಾ ತಾಯಿ ಮಾಧ್ಯಮದ ಮುಂದೆ ಕಣ್ಣೀರಾಗಿದ್ದಾರೆ.
ಮಗಳ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಪಾರ್ಟಿ ಆಯೋಜಿಸಿದ್ದ ತಾಯಿ
ಮುಂದಿನ ಜನವರಿಯಲ್ಲಿ ಮಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕೆಂಬ ನಿಟ್ಟಿನಲ್ಲಿ ಆಕೆಗೆ ಗೊತ್ತಿಲ್ಲದೆಯೇ ಹುಟ್ಟುಹಬ್ಬದ ಪಾರ್ಟಿಯನ್ನು ಕೂಡ ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ.
ಶೀಜಾನ್ ಇನ್ನೊಂದು ಮಹಿಳೆಯೊಂದಿಗೆ ನಡೆಸಿದ್ದ ಚಾಟ್ಗಳ ಕಾರಣ ನನ್ನ ಮಗಳು ಆತನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಳು ಎಂದು ತಿಳಿಸಿದ್ದಾರೆ.
ತುನಿಶಾ ಸಾವಿಗೆ ಮಾಜಿ ಪ್ರಿಯಕರ ಕಾರಣವೇ?
ಆ ದಿನ ಏನಾಯಿತು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಠಿಣ ನಿರ್ಧಾರವನ್ನು ಮಗಳು ಏಕೆ ಕೈಗೊಂಡಳು ಎಂಬುದೇ ನನ್ನನ್ನು ಅತಿಯಾಗಿ ಕಾಡುತ್ತಿದೆ.
ನಾವಿಬ್ಬರೂ ಮಾತನಾಡಿದ್ದೇವೆ ಹಾಗೂ ಅರ್ಧಗಂಟೆಯಲ್ಲಿ ಏನಾಯಿತು ಎಂಬುದೇ ನನಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಶೀಜಾನ್ ಆಕೆಯನ್ನು ಕೆಳಕ್ಕೆ ಕರೆದುಕೊಂಡು ಬಂದಿದ್ದಾನೆ ಹಾಗೂ ಆ್ಯಂಬುಲೆನ್ಸ್ಗೆ ಕೂಡ ಕರೆಮಾಡಿಲ್ಲ. ಒಟ್ಟಿನಲ್ಲಿ 15 ನಿಮಿಷಗಳ ವಿಳಂಬವುಂಟಾಗಿದೆ ಎಂಬುದು ನಮಗೆ ಆ ಮೇಲೆ ತಿಳಿಯಿತು ಎಂದು ತುನಿಶಾ ಮಾವ ತಿಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಶೀಜಾನ್ ಖಾನ್
ತುನಿಶಾ ತಾಯಿ ಹಾಗೂ ಮಾವ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ನೇರವಾಗಿಯೇ ತಿಳಿಸಿದ್ದಾರೆ. ತುನಿಶಾ ತಮ್ಮ ಧಾರವಾಹಿ ಆಲಿಬಾಬಾ ಸೆಟ್ನಲ್ಲಿಯೇ ನೇಣು ಬಿಗಿದುಕೊಂಡು ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡರು.
ಆಕೆಯ ಸಹ ನಟ ಮತ್ತು ಗೆಳೆಯ ಶೀಜಾನ್ ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತುನಿಶಾ ಆತ್ಮಹತ್ಯೆ ಮಾಡಿಕೊಳ್ಳಲು ಗೆಳೆಯ ಶೀಜಾನ್ ಖಾನ್ ಕಾರಣ ಎಂಬ ಪ್ರಕರಣ ದಾಖಲಾದ ನಂತರ ಆತನನ್ನು ಪೊಲೀಸರು ಬಂಧಿಸಿದರು. ಆಲಿ ಬಾಬಾ: ದಾಸ್ತಾನ್-ಎ-ಕಾಬೂಲ್ ಧಾರವಾಹಿಯಲ್ಲಿ ತುನಿಶಾ ಹಾಗೂ ಶೀಜಾನ್ ಜೊತೆಯಾಗಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ