• Home
  • »
  • News
  • »
  • entertainment
  • »
  • ಕನ್ನಡ ಸಿನಿರಂಗಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಿ ಎಂದು ಸಿಎಂಗೆ ತಾರಾ ಮನವಿ

ಕನ್ನಡ ಸಿನಿರಂಗಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಿ ಎಂದು ಸಿಎಂಗೆ ತಾರಾ ಮನವಿ

BSY, Tara

BSY, Tara

ತಾರಾ ಅನುರಾಧ ಅವರ ಮನವಿಯನ್ನ ಸ್ವೀಕರಿಸಿದ ಸರ್ಕಾರ ಚಿತ್ರರಂಗದ ಕಾರ್ಮಿಕರಿಗೆ ವಿಶೇಷ ಪ್ಯಾಕೆಜ್ ನೀಡಲಿದೆಯಾ? ಒಂದೊತ್ತು ಊಟಕ್ಕೆ ಪರದಾಡ್ತಿರೋ ಕಾರ್ಮಿಕರ ಕೈ ಹಿಡಿಯುತ್ತಾ? ಕಾದು ನೋಡಬೇಕಿದೆ.

  • Share this:

ಮಾಹಾಮಾರಿ ಕೊರೊನಾ ವೈರಸ್ ಅವಾಂತರ ಅಷ್ಟಿಷ್ಟಲ್ಲ. ಬಡವ ಬಲ್ಲಿದ ಅನ್ನೋ ಬೇಧ ಭಾವ ಇಲ್ಲದೆ ಎಲ್ಲರನ್ನೂ ಕಾಡಿದೆ. ಎಲ್ಲಾ ವರ್ಗವನ್ನೂ ದಿಕ್ಕೆಡಿಸಿದೆ‌‌‌. ಹಣವಂತರು ಹೇಗೋ ಈ ವಿಷಮ ಪರಿಸ್ಥಿತಿಯನ್ನು ಎದುರಿಸಿ ನಿಲ್ಲಬಹುದು. ಆದರೆ ಅಂದಿನ ಕೂಲಿಯನ್ನೇ ನಂಬಿ ಬದುಕುವವರ ಪಾಡು ಹೇಳತೀರದು. ಒಂದೊತ್ತು ಊಟಕ್ಕೂ ಪರದಾಡುವ ಸ್ಥಿತಿ ಅಂತಹ ಕೂಲಿ ಕಾರ್ಮಿಕರದ್ದು.  ಇದಲ್ಲೆವನ್ನೂ ಮನಗಂಡು, ರಾಜ್ಯ ಸರ್ಕಾರ ಅಂತವರ ಸಹಾಯಕ್ಕೆ ನಿಂತಿದೆ. 1200 ಕೋಟಿ ವಿಶೇಷ ಪ್ಯಾಕೆಜ್ ಮೂಲಕ ಕೊರೊನಾ ಕಾಲದಲ್ಲಿಯೂ ನಿಮ್ಮೊಂದಿಗೆ ನಾವಿದ್ದೇವೆ ಎಂಬುದನ್ನ ರುಜುವಾತು ಮಾಡಿದೆ.


ಇನ್ನು ಸಿನಿಮಾ ರಂಗದಲ್ಲಿ ಇಂತಹ ದಿನಗೂಲಿ ಕಾರ್ಮಿಕರು ಸಾಕಷ್ಟು ಜನ ಇದ್ದಾರೆ. ಅವರ ಪರಿಸ್ಥಿತಿ ಸಹ ತೀರ ಕೆಟ್ಟದಾಗಿದೆ.‌ ಅಂತವರನ್ನ ಗಣನೆಗೆ ತೆಗೆದುಕೊಂಡು, ನಮ್ಮ ಚಿತ್ರರಂಗದ ಕಾರ್ಮಿಕರನ್ನ ಸಹ ವೃತ್ತಿಪರ ಕಾರ್ಮಿಕರೆಂದು ಪರಿಭಾವಿಸಿ, ನಮಗೂ ಏನಾದರೂ ಸಹಾಯ ಮಾಡಿ, ವಿಶೇಷ ಪ್ಯಾಕೇಜ್ ಗೆ ಅರ್ಹರ ಪಟ್ಟಿ ಸೇರಿಸಿಕೊಳ್ಳಿ ಅಂತ ನಟಿ ಹಾಗೂ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಪತ್ರ ಬರೆದಿದ್ದಾರೆ‌‌. ಸ್ವತಃ ಕೈ ಬರಹದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.


ತಾರಾ ಅನುರಾಧ ಅವರ ಮನವಿಯನ್ನ ಸ್ವೀಕರಿಸಿದ ಸರ್ಕಾರ ಚಿತ್ರರಂಗದ ಕಾರ್ಮಿಕರಿಗೆ ವಿಶೇಷ ಪ್ಯಾಕೆಜ್ ನೀಡಲಿದೆಯಾ? ಒಂದೊತ್ತು ಊಟಕ್ಕೆ ಪರದಾಡ್ತಿರೋ ಕಾರ್ಮಿಕರ ಕೈ ಹಿಡಿಯುತ್ತಾ? ಕಾದು ನೋಡಬೇಕಿದೆ.


ಸದ್ಯ ಚಿತ್ರರಂಗ ಸ್ತಬ್ಧವಾಗಿ 45 ದಿನಗಳು ಕಳೆದಿವೆ. ಇನ್ನಷ್ಟು ದಿನಗಳು ಚಿತ್ರರಂಗದ ಚಟುವಟಿಕೆಗಳು ಆರಂಭವಾಗೋದು ಡೌಟು‌. ಹೀಗಾಗಿ ಅಲ್ಲಿಯವರೆಗೆ ಸರ್ಕಾರದ ಸಹಾಯದ ಕಣ್ಗಾವಲಿನಲ್ಲಿ ಆಶ್ರಯ ಪಡೆಯಬೇಕಾದ ಅನಿವಾರ್ಯತೆ ಸಾವಿರಾರು ಸಿನಿ ಕಾರ್ಮಿಕರ ಕುಟುಂಬಗಳಾದ್ದಾಗಿದೆ.


Michael Madhu Passes Away: 50ನೇ ವರ್ಷಕ್ಕೆ ಬದುಕು ಮುಗಿಸಿದ ಕನ್ನಡದ ಹಾಸ್ಯ ನಟ ಮೈಕೆಲ್ ಮಧು!

Published by:Harshith AS
First published: