• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Tamannaah Bhatia: ದಿಲೀಪ್ ಮತ್ತು ಅರುಣ್ ಗೋಪಿಯವರ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸ್ತಿದ್ದಾರಾ ತಮನ್ನಾ!?

Tamannaah Bhatia: ದಿಲೀಪ್ ಮತ್ತು ಅರುಣ್ ಗೋಪಿಯವರ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸ್ತಿದ್ದಾರಾ ತಮನ್ನಾ!?

ನಟಿ ತಮನ್ನಾ, ದಿಲೀಪ್ ಮತ್ತು ಅರುಣ್ ಗೋಪಿ

ನಟಿ ತಮನ್ನಾ, ದಿಲೀಪ್ ಮತ್ತು ಅರುಣ್ ಗೋಪಿ

ಬಾಹುಬಲಿ ಸಿನೆಮಾ ಸೂಪರ್ ಹಿಟ್ ಆದ ನಂತರ ಈ ನಟಿಗೆ ಬಂದಂತಹ ಸಿನೆಮಾ ಅವಕಾಶಗಳು ಅಷ್ಟಿಷ್ಟಲ್ಲ ಬಿಡಿ. ನಂತರ ಇವರು ತೆಲುಗು ಚಿತ್ರರಂಗದಿಂದ ನೇರವಾಗಿ ಹಿಂದಿ, ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲಿ ದೊಡ್ಡ ದೊಡ್ಡ ನಟರ ಜೊತೆಯಲ್ಲಿ ಚಿತ್ರ ಮಾಡಿ ಸೈ ಎನಿಸಿಕೊಂಡರು. ಒಟ್ಟಿನಲ್ಲಿ ಈ ನಟಿ ತಮಗೆ ಸಿಕ್ಕ ಅವಕಾಶಗಳನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡರು. ಈಗ ಈ ನಟಿ ಮತ್ತೊಂದು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. 

ಮುಂದೆ ಓದಿ ...
  • Share this:

ಕೆಲವೊಮ್ಮೆ ಈ ಚಿತ್ರೋದ್ಯಮದಲ್ಲಿರುವ ಎಷ್ಟೋ ನಟ (Actor) ಮತ್ತು ನಟಿಯರಿಗೆ (Actress) ಸಿನೆಮಾದಲ್ಲಿ ಒಳ್ಳೆಯ ಪಾತ್ರ ಸಿಗಲು ತುಂಬಾ ವರ್ಷಗಳು ಕಾಯಬೇಕಾಗುತ್ತದೆ. ಆದರೆ ಇನ್ನೂ ಕೆಲವರಿಗೆ ಸಿನೆಮಾ ರಂಗಕ್ಕೆ ಕಾಲಿಟ್ಟ ತಕ್ಷಣವೇ ಬಿಗ್ ಬಜೆಟ್ ಚಿತ್ರಗಳು (Big Budget Movies) ಒಂದರ ನಂತರ ಇನ್ನೊಂದು ಸಿಗುತ್ತಲೇ ಹೋಗುತ್ತವೆ.  ಹಿಂದೊಮ್ಮೆ ತೆಲುಗು ಚಿತ್ರೋದ್ಯಮದ ಹೆಸರಾಂತ ನಿರ್ದೇಶಕರಾದ ಎಸ್ ರಾಜಮೌಳಿ (S Rajamouli) ಅವರ ಚಿತ್ರ ಬಾಹುಬಲಿ ಅಂತ ಬಂದಿತ್ತು. ಅದನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ? ಅಂತ ದೊಡ್ಡ ಹಿಟ್ ಸಿನೆಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದು ಅಂತ ಅಂದ ತಕ್ಷಣವೇ ನಮಗೆ ನೆನಪಾಗುವುದು ಸುಂದರ ನಟಿ ತಮನ್ನಾ ಭಾಟಿಯಾ (Tamannaah Bhatia).


ತಮನ್ನಾಳಾ ಅದೃಷ್ಟ ಬದಲಾಯಿಸಿದ ಸಿನೆಮಾ: ಬಾಹುಬಲಿ
ಹೀಗೆ ಬಾಹುಬಲಿ ಸಿನೆಮಾ ಸೂಪರ್ ಹಿಟ್ ಆದ ನಂತರ ಈ ನಟಿಗೆ ಬಂದಂತಹ ಸಿನೆಮಾ ಅವಕಾಶಗಳು ಅಷ್ಟಿಷ್ಟಲ್ಲ ಬಿಡಿ. ನಂತರ ಇವರು ತೆಲುಗು ಚಿತ್ರರಂಗದಿಂದ ನೇರವಾಗಿ ಹಿಂದಿ, ತಮಿಳು ಮತ್ತು ಕನ್ನಡ ಚಿತ್ರರಂಗಗಳಲ್ಲಿ ದೊಡ್ಡ ದೊಡ್ಡ ನಟರ ಜೊತೆಯಲ್ಲಿ ಚಿತ್ರ ಮಾಡಿ ಸೈ ಎನಿಸಿಕೊಂಡರು. ಒಟ್ಟಿನಲ್ಲಿ ಈ ನಟಿ ತಮಗೆ ಸಿಕ್ಕ ಅವಕಾಶಗಳನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡರು. ಈಗ ಈ ನಟಿ ಮತ್ತೊಂದು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.


ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಸಜ್ಜಾದ ನಟಿ 
ಹೌದು.. ತಮನ್ನಾ ಅವರು ನಟ ದಿಲೀಪ್ ಅಭಿನಯದ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ, ಇದನ್ನು ಅರುಣ್ ಗೋಪಿ ನಿರ್ದೇಶಿಸಲಿದ್ದಾರೆ. ಉದಯಕೃಷ್ಣ ಅವರು ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಗುರುವಾರ ಕೊಟ್ಟಾರಕ್ಕರದಲ್ಲಿ ಪೂಜೆ ನಡೆಯಿತು. ಅಜಿತ್ ವಿನಾಯಕ ನಿರ್ಮಿಸುತ್ತಿರುವ ಈ ಚಿತ್ರವು ದೊಡ್ಡ ಬಜೆಟ್ ಚಿತ್ರವಾಗಿದೆ ಮತ್ತು 2017 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ರಾಮಲೀಲಾ ಚಿತ್ರದ ನಂತರ ದಿಲೀಪ್ ಮತ್ತು ಅರುಣ್ ಗೋಪಿ ಅವರ ಜೋಡಿ ಎರಡನೇ ಸಿನೆಮಾದಲ್ಲಿ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುತ್ತಿರುವುದನ್ನು ನಾವು ನೋಡಬಹುದು.


ಇದನ್ನೂ ಓದಿ: Tollywood Actress: ಈ ಫೋಟೋದಲ್ಲಿರುವ ಟಾಪ್ ಸೌತ್​ ನಟಿ ಯಾರು ಹೇಳಿ?

ಈ ಸಿನೆಮಾದಲ್ಲಿ ಯಾರ‍್ಯಾರು ಕಾಣಿಸಿಕೊಳ್ಳಲಿದ್ದಾರೆ 
ಮುಂಬರುವ ಈ ಚಿತ್ರದಲ್ಲಿ ಸಿದ್ದಿಕ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮತ್ತೊಬ್ಬ ಸ್ಟಾರ್ ಕೂಡ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲು ನಿರ್ಮಾಪಕರು ಬಾಲಿವುಡ್ ನಟ ನೀಲ್ ನಿತಿನ್ ಮುಕೇಶ್ ಅವರೊಂದಿಗೆ ಚರ್ಚಿಸುತ್ತಿದ್ದಾರೆ ಎಂಬ ವದಂತಿಗಳು ಸಹ ಇತ್ತೀಚೆಗೆ ಹರಡಿದ್ದವು. ಈ ಹಿಂದೆ ತಮಿಳು ಮತ್ತು ತೆಲುಗಿನಲ್ಲಿ ಕೆಲಸ ಮಾಡಿದ್ದ ನಟ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.


ದಿಲೀಪ್ ಅವರ ಸತತ ಎರಡನೇ ಬಿಗ್ ಬಜೆಟ್ ಸಿನಮಾ 
ಉದಯಕೃಷ್ಣ ಅವರು ಈ ಹಿಂದೆ ಮನರಂಜನಾ ಮಾಧ್ಯಮಕ್ಕೆ ನೀಡಿದ ಒಂದು ಸಂದರ್ಶನದಲ್ಲಿ ಚಿತ್ರದ ಸ್ಕ್ರಿಪ್ಟ್ ಅನ್ನು ಲಾಕ್ಡೌನ್ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ ಮತ್ತು ಚಿತ್ರಮಂದಿರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ದೊಡ್ಡ ಬಜೆಟ್ ಚಿತ್ರವನ್ನು ಚಿತ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ತಂಡವು ಚಿತ್ರೀಕರಣವನ್ನು ವಿಳಂಬಗೊಳಿಸಿದೆ ಎಂದು ಹೇಳಿದ್ದರು. ಈ ಚಿತ್ರವು ರಫಿ ಅವರ ವಾಯ್ಸ್ ಆಫ್ ಸತ್ಯನಾಥನ್ ನಂತರ ದಿಲೀಪ್ ಅವರ ಸತತ ಎರಡನೇ ಬಿಗ್ ಬಜೆಟ್ ಚಿತ್ರವೆಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  Urfi Javed: ಕೆಂಪು, ಬಿಳಿ, ನೀಲಿ ಹೂಗಳನ್ನು ದೇಹಕ್ಕೆ ಅಂಟಿಸಿದ ಉರ್ಫಿ! ಅಬ್ಬಾ ಸಾಕಮ್ಮಾ ಅಂತಿದ್ದಾರೆ ನೆಟ್ಟಿಗರು


ಕಳೆದ ತಿಂಗಳು ಮುಂಬೈನಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು ಜೋಜು ಜಾರ್ಜ್, ವೀಣಾ ನಂದಕುಮಾರ್ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮನರಂಜನಾ ಚಿತ್ರವಾಗಿದೆ. ಈ ಚಿತ್ರವು ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ಜಗಪತಿ ಬಾಬು ಮತ್ತು ಪ್ರಕಾಶ್ ರಾಜ್ ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ.


ಈ ಮುಂಬರುವ ಚಿತ್ರವು ಅರುಣ್ ಗೋಪಿ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಮೂರನೇ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ.

top videos
    First published: