Tamannaah Bhatia: ಬಾಹುಬಲಿ ನಟಿಗೆ ಕೊರೋನಾ ಸೋಂಕು; ಆಸ್ಪತ್ರೆಗೆ ದಾಖಲಾದ ತಮನ್ನಾ ಭಾಟಿಯಾ
Tamannaah Bhatia: ಬಾಹುಬಲಿ ನಟಿಗೆ ಕೊರೋನಾ ಸೋಂಕು; ಆಸ್ಪತ್ರೆಗೆ ದಾಖಲಾದ ತಮನ್ನಾ ಭಾಟಿಯಾ
ತಮನ್ನಾ
Tamannaah Bhatia: ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಗಳಿಸಿರುವ ನಟಿ ತಮನ್ನಾಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೈದ್ರಾಬಾದ್ನಲ್ಲಿ ಶೂಟಿಂಗ್ನಲ್ಲಿದ್ದ ನಟಿ ಅನಾರೋಗ್ಯಕ್ಕೆ ಒಳಗಾಗಿದ್ದು, ಪರೀಕ್ಷೆಗೆ ಒಳಪಟ್ಟಾಗ ಕೋವಿಡ್ ಸೋಂಕು ಪತ್ತೆಯಾಗಿದೆ. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೈದ್ರಾಬಾದ್ನಲ್ಲಿ ವೆಬ್ ಸಿರೀಸ್ ಶೂಟಿಂಗ್ನಲ್ಲಿ ನಟಿ ತಮನ್ನಾ ಭಾಗಿಯಾಗಿದ್ದರು. ಈ ವೇಳೆ ಅವರು ಜ್ವರ ಕಾಣಿಸಿಕೊಂಡಿದೆ. ವೈದ್ಯಕೀಯ ತಪಾಸಣೆಗೆ ಒಳಗಾದ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ
ಸದ್ಯ ನಟಿ ಹೈದ್ರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ. ನಾನು ಸುರಕ್ಷಿತವಾಗಿದ್ದು, ಐಸೋಲೇಷನ್ಗೆ ಒಳಗಾಗಿದ್ದೇನೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗಬೇಡಿ. ನಿಮ್ಮ ಪ್ರೀತಿಗೆ ಚಿರಋಣಿ ಎಂದಿದ್ದಾರೆ.
ಆಗಸ್ಟ್ನಲ್ಲಿ ತಮನ್ನಾ ಪೋಷಕರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ಕುರಿತು ನಟಿ ಮಾಹಿತಿ ಹಂಚಿಕೊಂಡಿದ್ದರು.
ಆಗಸ್ಟ್ನಲ್ಲಿ ತಮನ್ನಾ ಪೋಷಕರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಈ ಕುರಿತು ನಟಿ ಮಾಹಿತಿ ಹಂಚಿಕೊಂಡಿದ್ದರು.
ತೆಲುಗು-ತಮಿಳುನಲ್ಲಿ ಸಾಕಷ್ಟು ಬೇಡಿಕೆಯ ನಟಿಯಾಗಿ ತಮನ್ನಾ ಗುರುತಿಸಿಕೊಂಡಿದ್ದಾರೆ.
ಹಿಂದಿಯಲ್ಲಿಯೂ ನಟಿಸಿರುವ ತಮನ್ನಾ ನವಾಜುದ್ದೀನ್ ಸಿದ್ದಿಕ್ಕಿ ಜೊತೆ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.
ಕನ್ನಡದ ಕೆಜಿಎಫ್ ಸಿನಿಮಾದ ಜೋಕೆ ಹಾಡಿಗೆ ಯಶ್ ಜೊತೆ ಸೊಂಟ ಬಳುಕಿಸಿದ್ದರು.
ಸದ್ಯ ಐಸೋಲೇಷನ್ಗೆ ಒಳಗಾಗಿರುವ ನಟಿ ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
Published by:Seema R
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ