Mithali Raj Biopic: ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​ ಜೀವನಾಧಾರಿತ ಸಿನಿಮಾದಲ್ಲಿ ತಾಪ್ಸಿ ಪನ್ನು..!

Taapsee Pannu: ಈ ಹಿಂದೆ ಸೂರ್ಮಾ ಹಾಗೂ ಮನ್​ಮರ್ಜಿಯಾ ಸಿನಿಮಾಗಳಲ್ಲಿ ಹಾಕಿ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದ ತಾಪ್ಸಿ ಈಗ ಕ್ರಿಕೆಟರ್​ ಆಗಿ ಬಣ್ಣ ಹಚ್ಚಲಿದ್ದಾರೆ. ಹೌದು, ಈ ವಿಷಯವನ್ನು ಖುದ್ದು ತಾಪ್ಸಿ ತಮ್ಮ ಟ್ವಿಟರ್​ನಲ್ಲಿ ಟ್ವೀಟ್​ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

Anitha E | news18-kannada
Updated:December 3, 2019, 6:14 PM IST
Mithali Raj Biopic: ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​ ಜೀವನಾಧಾರಿತ ಸಿನಿಮಾದಲ್ಲಿ ತಾಪ್ಸಿ ಪನ್ನು..!
ಮಹಿಳಾ ಕ್ರಿಕೆಟರ್​ ಮಿಥಾಲಿ ರಾಜ್​ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದ ತಾಪ್ಸಿ ಪನ್ನು
  • Share this:
ತಾಪ್ಸಿ ತಮ್ಮ ಸಿನಿ ಜೀವನದಲ್ಲಿ ಗ್ಲಾಮರಸ್​ ಪಾತ್ರಗಳ ಜೊತೆಗೆ ಆ್ಯಕ್ಷನ್​ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ತಾಪ್ಸಿ ಕ್ರೀಡಾಪಟು ಪಾತ್ರದಲ್ಲೂ ಸಿನಿಪ್ರಿಯರಿಗೆ ಮನರಂಜನೆ ನೀಡಿದ್ದಾರೆ.

ಈ ಹಿಂದೆ 'ಸೂರ್ಮಾ' ಹಾಗೂ 'ಮನ್​ಮರ್ಜಿಯಾ' ಸಿನಿಮಾಗಳಲ್ಲಿ ಹಾಕಿ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದ ತಾಪ್ಸಿ ಈಗ ಕ್ರಿಕೆಟರ್​ ಆಗಿ ಬಣ್ಣ ಹಚ್ಚಲಿದ್ದಾರೆ. ಹೌದು, ಈ ವಿಷಯವನ್ನು ಖುದ್ದು ತಾಪ್ಸಿ ತಮ್ಮ ಟ್ವಿಟರ್​ನಲ್ಲಿ ಟ್ವೀಟ್​ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

Happy Birthday Captain @M_Raj03 On this Birthday, I don’t know what gift I can give you but this promise that I shall give it all I have to make sure you will be proud of what you see of yourself on screen with #ShabaashMithu

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾದಲ್ಲಿ ತಾಪ್ಸಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಹಿಂದೆ ನಟಿ ತಾಪ್ಸಿ, ಮಿಥಾಲಿ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ ಎಂಬ ಮಾತಿತ್ತು. ಅದು ಈಗ ನಿಜವಾಗಿದೆ.

 ಇಂದು ಮಿಥಾಲಿ ರಾಜ್ ಅವರ ಜನುಮದಿನವಾಗಿದ್ದು, ಈ ಸಂಧರ್ಭದಲ್ಲಿ ವಿಶ್ ಮಾಡಿ ಪೋಸ್ಟ್ ಹಾಕಿರೋ ತಾಪ್ಸಿ, 'ಮಿಥಾಲಿ ಜೀವನಾಧಾರಿತ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ' ಎಂದು ಬರೆದುಕೊಂಡಿದ್ದಾರೆ.

Actress Taapsee Pannu is acting as a Cricketer in Mithali Raj Biopic
ತಾಪ್ಸಿ ಪನ್ನು ಇನ್​ಸ್ಟಾಗ್ರಾಂ ಸ್ಟೋರಿ


ವಯಾಕಾಮ್​ 18 ನಿರ್ಮಾಣದ ಈ ಚಿತ್ರಕ್ಕೆ 'ಶಹಬಾಶ್​​ ಮಿಥು' ಎಂದು ಶೀರ್ಷಿಕೆ ನೀಡಲಾಗಿದೆ. ರಾಹುಲ್​ ಡೋಲಕಿಯಾ ನಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ತಾಪ್ಸಿ ಇತ್ತೀಚೆಗೆ ತೆರೆಕಂಡ 'ಸಾಂಡ್​ ಕಿ ಆಕ್​' ಚಿತ್ರದಲ್ಲಿ ಅಭಿನಯಿಸಿದ್ದಾರೆ.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published: December 3, 2019, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading