ಈಗಂತೂ ಚಲನಚಿತ್ರೋದ್ಯಮದ ನಟ-ನಟಿಯರು ತಾವು ಮದುವೆ ಆಗದೆ ಇರುವುದರಿಂದ ಅಥವಾ ಮದುವೆಯಾಗಿ ವಿಚ್ಛೇದನ(Divorce) ಪಡೆದವರು ತಾಯ್ತನವನ್ನು ಮತ್ತು ಆ ತಂದೆಯ ಜವಾಬ್ದಾರಿಯನ್ನು ಅನುಭವಿಸಲು ಮಗುವನ್ನು ದತ್ತು ತೆಗೆದುಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ.ಈಗ ಬಾಲಿವುಡ್ ನಟಿ ಸ್ವರಾ ಭಾಸ್ಕರ್(Bollywood Actress Swara Bhasker) ಶೀಘ್ರದಲ್ಲಿಯೇ ತಾಯಿ ಆಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್(Bollywood) ತುಂಬೆಲ್ಲಾ ಹರಿದಾಡುತ್ತಿದೆ. ಹೌದು.. ಈ ನಟಿ ಶೀಘ್ರದಲ್ಲಿಯೇ ತಾಯ್ತನದ ಜವಾಬ್ದಾರಿ ನಿಭಾಯಿಸಲಿದ್ದಾರೆ. ತನ್ನ ಇತ್ತೀಚಿನ ಸಂದರ್ಶನವೊಂದರಲ್ಲಿ, ‘ವೀರೆ ಡಿ ವೆಡ್ಡಿಂಗ್’ ಚಿತ್ರದ ನಟಿ ತಾನು ಮಗುವೊಂದನ್ನು ದತ್ತು(Baby Adopt) ತೆಗೆದುಕೊಳ್ಳಲಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಈಗಾಗಲೇ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ ಮೂಲಕ ಒಂದು ಮಗುವನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದೇನೆ ಮತ್ತು ಪ್ರಸ್ತುತ ಅವರು ನನ್ನನ್ನು ವೇಟಿಂಗ್ ಪಟ್ಟಿಯಲ್ಲಿಟ್ಟಿದ್ದಾರೆ ಎಂದು ಸ್ವರಾ ಹೇಳಿಕೊಂಡಿದ್ದಾರೆ.
ಸ್ವರಾ ಭಾಸ್ಕರ್ಗೆ ಮಕ್ಕಳೆಂದರೆ ತುಂಬಾ ಇಷ್ಟವಂತೆ.!
ಈ ಹಿಂದೆ ಹಿಮಾಂಶು ಶರ್ಮಾರೊಂದಿಗೆ ಬಹಳ ಸಮಯದವರೆಗೆ ಸಂಬಂಧದಲ್ಲಿದ್ದ ನಟಿ ಸ್ವರಾ ಭಾಸ್ಕರ್ ಆ ಸಂಬಂಧದಿಂದ ಹೊರ ಬಂದಿದ್ದಾರೆ. ಅಲ್ಲದೆ, ನಟಿ ಸ್ವರಾ ಭಾಸ್ಕರ್ ಅವಿವಾಹಿತರಾಗಿದ್ದಾರೆ. ತಮ್ಮ ನಿರ್ಧಾರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ ನಟಿ, ತನಗೆ ಯಾವಾಗಲೂ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಮನರಂಜನಾ ಪೋರ್ಟಲ್ಗೆ ತಿಳಿಸಿದರು.
ಇದನ್ನೂ ಓದಿ: Atrangi Re Trailer: ಒಬ್ಬ ಸಾಲಲ್ಲ, ಇಬ್ಬರೂ ಬೇಕು ಎನ್ನುತ್ತಿರುವ Sara Ali Khan, ಬಾಲಿವುಡ್ನಲ್ಲಿ Dhanush ಮೋಡಿ!
ಮಗು ದತ್ತು ಪಡೆಯಲಿರುವ ನಟಿ
"ನಾನು ಯಾವಾಗಲೂ ಕುಟುಂಬ ಮತ್ತು ಮಕ್ಕಳನ್ನು ಇಷ್ಟ ಪಡುತ್ತೇನೆ. ಅದೃಷ್ಟವಶಾತ್ ಭಾರತದಲ್ಲಿ, ಒಂಟಿ ಮಹಿಳೆಯರು ಮಗುವೊಂದನ್ನು ದತ್ತು ತೆಗೆದುಕೊಳ್ಳಲು ಅನುಮತಿಸುತ್ತದೆ. ಈಗಾಗಲೇ ಬಹುತೇಕ ದತ್ತು ಮಕ್ಕಳನ್ನು ಮತ್ತು ಅನೇಕ ದಂಪತಿಯನ್ನು ನಾನು ಭೇಟಿಯಾದೆ. ನಾನು ಅವರ ಅನುಭವವನ್ನು ತಿಳಿದುಕೊಂಡಿದ್ದೇನೆ" ಎಂದು ನಟಿ ಹೇಳಿದರು.
"ಈ ಕಾಯುವ ಅವಧಿ ದೀರ್ಘವಾಗಿದೆ ಎಂದು ನನಗೆ ತಿಳಿದಿದೆ, ಆದರೆ ದತ್ತು ತೆಗೆದುಕೊಳ್ಳುವ ಮೂಲಕ ಮಗುವಿಗೆ ಪೋಷಕರಾಗಲು ನಾನು ತುಂಬಾ ಕಾಯಲು ಸಾಧ್ಯವಿಲ್ಲ" ಎಂದು ಸ್ವರಾ ಹೇಳಿದರು. ಈ ಶುಭ ಸುದ್ದಿ ಆನ್ಲೈನ್ ನಲ್ಲಿ ಹೊರಬಂದ ನಂತರ, ನಟಿಗೆ ಟ್ವಿಟ್ಟರ್ನಲ್ಲಿ ಅಭಿನಂದನಾ ಶುಭಾಶಯಗಳ ಮಹಾಪೂರವೇ ಹರಿದು ಬರಲು ಪ್ರಾರಂಭಿಸಿತು ಎಂದು ಹೇಳಬಹುದು.
ಕೃತಜ್ಞತೆ ಸಲ್ಲಿಸಿದ ನಟಿ
ತನಗೆ ಶುಭ ಹಾರೈಕೆಗಳನ್ನು ಕಳುಹಿಸಿದ ಬಹುತೇಕ ಎಲ್ಲರಿಗೂ ನಟಿ ಕೃತಜ್ಞತೆ ಸಲ್ಲಿಸಿದ್ದು, ಒಂದು ಟ್ವೀಟ್ ಅನ್ನೂ ಮಾಡಿದ್ದಾರೆ. "ನಿಮ್ಮ ಎಲ್ಲಾ ಪ್ರೀತಿ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು..! ನಾನು ನಿಮ್ಮ ಟ್ವೀಟ್ಗಳಿಂದ ಸಂತೋಷವಾಗಿದ್ದೇನೆ. ಈ ಹಿಂದೆ ಟ್ವಿಟ್ಟರ್ ನನಗೆ ಸಾಕಷ್ಟು ನಿಂದನೆಗೆ ಒಳಗಾಗಿರುವ ಸ್ಥಳವಾಗಿದೆ. ಆದರೆ ಸಮಾನವಾಗಿ ಇದು ನನಗೆ ನಿಜವಾದ ಸ್ನೇಹಿತರನ್ನು ಸಹ ನೀಡಿದೆ ಮತ್ತು ತುಂಬಾ ಬೆಂಬಲ ನೀಡಿದೆ! ಎಲ್ಲರಿಗೂ ಧನ್ಯವಾದಗಳು" ಎಂದು ಬರೆದಿದ್ದಾರೆ.
ಇದನ್ನೂ ಓದಿ: Katrina-Vicky Wedding: ಕತ್ರಿನಾ ಕೈ ಮೇಲೆ 1 ಲಕ್ಷ ಬೆಲೆಯ ಮೆಹೆಂದಿ ಚಿತ್ತಾರ, ಅದರ ವಿಶೇಷತೆ ಏನು?
ನಟಿ ಸ್ವರಾ ಅವರ ಕೆಲವು ಚಿತ್ರಗಳು 2020ರಲ್ಲಿ ಬಿಡುಗಡೆಯಾಗಿದ್ದವು. ಅವರು ‘ರಸ್ಭರಿ’ ಯಲ್ಲಿ ಶಾನೂ ಬನ್ಸಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ವಯಸ್ಕರ ಹಾಸ್ಯಮಯ ವೆಬ್ ಸೀರಿಸ್ ಆಗಿತ್ತು. ಆದರೆ ಇದು ಹೆಚ್ಚು ಗಮನ ಸೆಳೆಯಲಿಲ್ಲ. ಇನ್ನು, ನಟಿ ‘ಫ್ಲೆಶ್’ ನಲ್ಲಿ ಎಸಿಪಿ ರಾಧಾ ನೌಟಿಯಾಲ್ ಪಾತ್ರ ನಿರ್ವಹಿಸಿದರು. ಡಿಸೆಂಬರ್ನಲ್ಲಿ ಒಟಿಟಿ ಮಾಧ್ಯಮದಲ್ಲಿ ಬಿಡುಗಡೆಯಾದ ‘ಭಾಗ್ ಬೀನಿ ಭಾಗ್’ ನಲ್ಲಿ ಅವರು ಬೀನಿ ಭಟ್ನಾಗರ್ ಪಾತ್ರ ನಿರ್ವಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ