• Home
  • »
  • News
  • »
  • entertainment
  • »
  • Sukrutha Nag-Shine Shetty: ಸುಕೃತ ನಾಗ್-ಶೈನ್ ಶೆಟ್ಟಿ ಮದುವೆ ಫಿಕ್ಸ್? ದೀಪಿಕಾ ದಾಸ್ ಕಥೆ ಏನು?

Sukrutha Nag-Shine Shetty: ಸುಕೃತ ನಾಗ್-ಶೈನ್ ಶೆಟ್ಟಿ ಮದುವೆ ಫಿಕ್ಸ್? ದೀಪಿಕಾ ದಾಸ್ ಕಥೆ ಏನು?

ಶೈನ್ ಶೆಟ್ಟಿ- ಸುಕೃತ ನಾಗರಾಜ್

ಶೈನ್ ಶೆಟ್ಟಿ- ಸುಕೃತ ನಾಗರಾಜ್

ಸುಕೃತ ನಾಗ್ ಹಾಗೂ ಶೈನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. ದೀಪಿಕಾ ದಾಸ್ ಜೊತೆ ಶೈನ್ ಶೆಟ್ಟಿ ಹೆಸರು ಕೇಳಿ ಬಂದಿದ್ದರೂ ಈಗ ಮದುವೆ ವಿಚಾರದಲ್ಲಿ ಸುಕೃತ ಹೆಸರು ಕೇಳಿ ಬರುತ್ತಿದೆ.

  • News18 Kannada
  • Last Updated :
  • Bangalore, India
  • Share this:

ಕಿರುತೆರೆ ಹಾಗೂ ಬೆಳ್ಳಿ ತೆರೆಯ ಬಹಳಷ್ಟು ಸೆಲೆಬ್ರಿಟಿಗಳು (Celebrity) ಮದುವೆ  (Marriage) ಯೋಚನೆ ಮಾಡುತ್ತಿದ್ದಾರೆ. ಬಾಲಿವುಡ್​ನಿಂದ (Bollywood) ಸೌತ್ ಇಂಡಸ್ಟ್ರಿ (South Industry) ತನಕ ಸಿನಿಮಾ ಹಾಗೂ ಕಿರುತೆರೆಯ ಬಹಜಳಷ್ಟು ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವಾಗ ಕನ್ನಡ ಕಿರುತೆರೆ ಜೋಡಿಯೊಂದು ಸಪ್ತಪದಿ ತುಳಿಯಲು ಸಿದ್ಧವಾಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಕನ್ನಡ ಬಿಗ್ ಬಾಸ್ ಮೂಲಕ ಖ್ಯಾತಿ ಗಳಿಸಿದ ಶೈನ್ ಶೆಟ್ಟಿ (Shine Shetty) ಯುವತಿಯರ ಹಾಟ್ ಫೇವರೇಟ್ ಎಂದು ಬೇರೆ ಹೇಳುವ ಅಗತ್ಯವಿಲ್ಲ. ಎಲ್ಲಾ ಕಡೆ ಫೇಮಸ್ ಆಗಿರೋ ಅವರ ಹೆಸರು ಕಿರುತೆರೆಯಲ್ಲೀಗ ಫೇಮಸ್. ಶೈನ್ ಶೆಟ್ಟಿ ಬಿಗ್ ಬಾಸ್ ನಲ್ಲೂ ಕೂಡ ಭಾಗವಹಿಸಿ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್​​ನ ಶೈನ್ ಶೆಟ್ಟಿ ಅವರು ರಿಯಾಲಿಟಿ ಶೋನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಟ ಮಾತ್ರವಲ್ಲದೆ ಮಾಡೆಲ್ ಹಾಗೂ ಸ್ಟೈಲ್ ಐಕಾನ್ ಆಗಿ ಶೈನ್ ಶೆಟ್ಟಿ ಸಖತ್ ಹೆಸರು ಗಳಿಸಿಕೊಂಡಿದ್ದಾರೆ. ಇವರ ನಿರೂಪಣೆಯಂತೂ ಕಿರುತೆರೆ ರಿಯಾಲಿಟಿ ಶೋ ಪ್ರೇಕ್ಷಕರಿಗೆ ಅಚ್ಚುಮೆಚ್ಚು.


ನಟ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ನಟಿ ದೀಪಿಕಾ ದಾಸ್ ಅವರ ಜೊತೆ  ಆತ್ಮೀಯವಾಗಿದ್ದರು. ಅವರು ಜೋಡಿಯಾಗಿಯೇ ಹೈಲೈಟ್ ಆಗಿದ್ದರು. ನಂತರ ಇಬ್ಬರೂ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಲೂ ಕೂಡ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.


ಆದರೆ ಈಗ ಶೈನ್ ಶೆಟ್ಟಿ ಮದುವೆ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ಬಂದಿದೆ. ಇಷ್ಟೊಂದು ದಿನ ದೀಪಿಕಾ ದಾಸ್ ಜೊತೆ ಕೇಳಿ ಬರುತ್ತಿದ್ದ ಇವರ ಹೆಸರಿನ ಜೊತೆ ಈಗ ಲಕ್ಷಣ ಧಾರವಾಹಿಯ ಸುಕೃತಾ ನಾಗ್ ಹೆರಸು ಕೇಳಿ ಬರುತ್ತಿದೆ. ಇದೀಗ ಶೈನ್ ಶೆಟ್ಟಿ ರವರು ಕಿರುತೆರೆಯ ನಟಿ ಸುಕೃತ ನಾಗ್ ರವರನ್ನು ವಿವಾಹವಾಗುತ್ತಿದ್ದೇನೆ ಎಂದು ಹೇಳಿದ್ದಾರೆ. ಇದು ಕನ್ನಡ ಕಿರುತೆರೆ ಪ್ರೇಕ್ಷಕರ ಮಧ್ಯೆ ಚರ್ಚೆಯಾಗುತ್ತಿದೆ.


ಇದನ್ನೂ ಓದಿ: Ramachaari: ಅತ್ತಿಗೆ ಸಾವಿಗೆ ಕಾರಣವಾದ ಚಾರು, ಸಿಡಿದೆದ್ದ ರಾಮಾಚಾರಿ ಏನ್ ಮಾಡ್ತಾನೆ?


ಲಕ್ಷಣದಲ್ಲಿ ವಿಲನ್ ಆಗಿ ಸುಕೃತ


ಸುಕೃತ ಅವರು ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಶ್ವೇತಾ ಆಗಿ ಮಿಂಚುತ್ತಿದ್ದಾರೆ. ಅಗ್ನಿಸಾಕ್ಷಿಯಲ್ಲಿ ಹೀರೋ ತಂಗಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು. ಅಲ್ಲಿ ತುಂಬಾ ಸಾಫ್ಟ್ ಪಾತ್ರವನ್ನು ಮಾಡಿದ ನಟಿ ನಂತರದಲ್ಲಿ ಲಕ್ಷಣ ಸೀರಿಯಲ್​ನಲ್ಲಿ ಭರ್ಜರಿಯಾಗಿ ವಿಲನ್ ಪಾತ್ರದಲ್ಲಿ ಹೈಲೈಟ್ ಆಗಿದ್ದಾರೆ.


ವಿಲನ್ ಆಗಿ ನಟಿಸುತ್ತಿರುವ ಸುಕೃತ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಅವರ ಫ್ಯಾನ್ಸ್​​ ಫಾಲೋವರ್ಸ್​ಗಳಲ್ಲಿ ಒಂದಷ್ಟು ಜನರು ಮಾತ್ರ ಅಗ್ನಿ ಸಾಕ್ಷಿಯಲ್ಲಿ ನಿಮ್ಮ ಅಭಿನಯ ಮರೆಯಲಾಗದು ಎಂದು ಹೇಳುತ್ತಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು ನಟಿ ಸುಕೃತ.


ದೀಪಿಕಾ ದಾಸ್ ಕಥೆ ಏನು?


ನಟಿ ದೀಪಿಕಾ ದಾಸ್ ಸದ್ಯ ಬಿಗ್​ಬಾಸ್ ಸೀಸನ್ 9ರಲ್ಲಿ ಮಿಂಚುತ್ತಿದ್ದಾರೆ. ಕನ್ನಡ ಪ್ರೇಕ್ಷಕರ ನೆಚ್ಚಿನ ತಾರೆ ಈ ಹಿಂದೆ ಬಿಗ್​ಬಾಸ್​ನಲ್ಲಿ ಭಾಗವಹಿಸಿದ್ದಾಗ ಶೈನ್ ಶೆಟ್ಟಿ ಜೊತೆ ಉತ್ತಮ ಬಾಂಡಿಂಗ್ ಹೊಂದಿದ್ದರು. ಅವರ ಈ ಬಾಂಡಿಂಗ್ ಮುಂದೆ ಮದುವೆ ತನಕ ತಲುಪಲಿದೆ ಎಂದು ಹೇಳಲಾಗಿತ್ತು.


ಅವರ ಸಂಬಂಧ ವಿವಾಹದಲ್ಲಿ ಕೊನೆಗೊಳ್ಳುತ್ತದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಇದೆಲ್ಲವೂ ಈಗ ತಲೆ ಕೆಳಗಾಗಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ.

Published by:Divya D
First published: