Sudharani: ಮಗಳ ವಿಡಿಯೋವನ್ನೇ ಕದ್ದು ರೆಕಾರ್ಡ್​ ಮಾಡಿದ ನಟಿ ಸುಧಾರಾಣಿ..!

ಮಗಳೊಂದಿಗೆ ತಾನೂ ನೃತ್ಯಾಭ್ಯಾಸ ಮಾಡುವ ವಿಡಿಯೋ ಸೇರಿದಂತೆ ಸಾಕಷ್ಟು ಫನ್ನಿ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ ಸುಧಾರಾಣಿ. ಆದರೆ ಈ ಸಲ ಅವರು ಮಗಳ ವಿಡಿಯೋವನ್ನು, ಅವಳಿಗೆ ತಿಳಿಯದಂತೆ ತೆಗೆದಿದ್ದಾರೆ.

Anitha E | news18-kannada
Updated:July 24, 2020, 5:07 PM IST
Sudharani: ಮಗಳ ವಿಡಿಯೋವನ್ನೇ ಕದ್ದು ರೆಕಾರ್ಡ್​ ಮಾಡಿದ ನಟಿ ಸುಧಾರಾಣಿ..!
ಸುಧಾರಾಣಿ ಹಾಗೂ ಅವರ ಮಗಳು
  • Share this:
ನಟಿ ಸುಧಾರಾಣಿ ಸಿನಿಮಾಗಳ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಖತ್​ ಸಕ್ರಿಯವಾಗಿರುತ್ತಾರೆ. ಹೆಚ್ಚಾಗಿ ತಮ್ಮ ಸಿನಿಮಾಗಳ ಹಳೇ ಫೋಟೋಗಳನ್ನು ಹಂಚಿಕೊಳ್ಳುವ ನಟಿ, ಆಗಾಗ ಮಗಳ ವಿಡಿಯೋಗಳನ್ನೂ ಹಂಚಿಕೊಳ್ಳುತ್ತಿರುತ್ತಾರೆ. 

ಮಗಳೊಂದಿಗೆ ತಾನೂ ನೃತ್ಯಾಭ್ಯಾಸ ಮಾಡುವ ವಿಡಿಯೋ ಸೇರಿದಂತೆ ಸಾಕಷ್ಟು ಫನ್ನಿ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ ಸುಧಾರಾಣಿ. ಆದರೆ ಈ ಸಲ ಅವರು ಮಗಳ ವಿಡಿಯೋವನ್ನು, ಅವಳಿಗೆ ತಿಳಿಯದಂತೆ ತೆಗೆದಿದ್ದಾರೆ.

ಹೌದು, ಮಗಳು ಸಂಗೀತಾಭ್ಯಾಸ ಮಾಡುವಾಗ ಸುಧಾರಾಣಿ ವಿಡಿಯೋ ಮಾಡಿದ್ದಾರೆ. ಅದೂ ಸಹ ಸೆಲ್ಫಿ ವಿಡಿಯೋ. ಅದಕ್ಕೂ ಕಾರಣ ಇದೆ. ಸಂಗೀತಾಭ್ಯಾಸ ಮಾಡುವಾಗ ವಿಡಿಯೋ ಮಾಡುವುದು ಮಗಳಿಗೆ ಸುತಾರಾಮ್​ ಇಷ್ಟವಿಲ್ಲವಂತೆ. ಅದಕ್ಕೆ ಸುಧಾರಾಣಿ, ಮಗಳಿಗೆ ತಿಳಿಯದಂತೆ ಈ ವಿಡಿಯೋ ಮಾಡಿದ್ದಾರೆ. ಈ ವಿಷಯ ತಿಳಿದರೆ ಅಷ್ಟೇ ಎಂದೂ ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಸುಧಾರಾಣಿ, ಮಗಳು ಕೀಬೋರ್ಡ್​ ಅಭ್ಯಾಸ ಮಾಡುವ ವಿಡಿಯೋ  ಹಂಚಿಕೊಂಡಿದ್ದರು.ಸುಧಾರಾಣಿ ಪ್ರಾಣಿ ಪ್ರೇಮಿ. ಅವರ ಬಳಿ ಎರಡು ಮುದ್ದಾದ ನಾಯಿಗಳಿವೆ. ಲಾಕ್​ಡೌನ್​ನಲ್ಲಿ ಅವುಗಳೊಂದಿಗೆ ಮನೆಯಲ್ಲಿ ಹೇಗೆಲ್ಲ ಕಾಲ ಕಳೆಯುತ್ತಿದ್ದರು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದರು.
ಲಾಕ್​ಡೌನ್​ನಲ್ಲಿ ಸುಧಾರಾಣಿ ಬೀದಿ ನಾಯಿಗಳಿಗಾಗಿ ಆಹಾರ ನೀಡುವಂತೆ ಮನವಿ ಮಾಡಿದ್ದರು. ಆಗ ಹೋಟೆಲ್​ ಹಾಗೂ ಮಾಂಸದ ಅಂಗಡಿಗಳು ಮುಚ್ಚಿದ್ದ ಕಾರಣದಿಂದ ಅವುಗಳಿಗೆ ಊಟ ಇಲ್ಲದಂತಾಗಿತ್ತು. ಈ ಕಾರಣದಿಂದ ಬೀದಿ ನಾಯಿಗಳಿಗೆ ಅನ್ನಾಹಾರ ನೀಡುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ: ಸಂಕಷ್ಟದಲ್ಲಿ ಕನ್ನಡ ಚಿತ್ರರಂಗ : ಶಿವಣ್ಣನ​ ನೇತೃತ್ವದಲ್ಲಿ ನಡೆಯಿತು ಮಹತ್ವದ ಸಭೆ..!
Published by: Anitha E
First published: July 24, 2020, 5:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading