Srinidhi Shetty: ಶ್ರೀನಿಧಿ ಶೆಟ್ಟಿ ಎಸ್​ಎಸ್​ಎಲ್​ಸಿ ಮಾರ್ಕ್ಸ್​ ಕಾರ್ಡ್​ ವೈರಲ್, ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಕೆಜಿಎಫ್ ಬೆಡಗಿ

Sandalwood: ಇನ್ನು ಶ್ರೀನಿಧಿ ಶೆಟ್ಟಿ, ಸದ್ಯ ನಟ ವಿಕ್ರಂ ಜೊತೆಗೆ 'ಕೋಬ್ರಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಅವರ ಲುಕ್ ಕೂಡ ರಿವೀಲ್ ಆಗಿತ್ತು. ಕೆಜಿಎಫ್ ಸಕ್ಸಸ್ ನಂತರ ನಟಿಗೆ ಸಾಲು ಸಾಲು ಅವಕಾಶಗಳು ಬಂದಿವೆ.

ನಟಿ ಶ್ರೀನಿಧಿ ಶೆಟ್ಟಿ

ನಟಿ ಶ್ರೀನಿಧಿ ಶೆಟ್ಟಿ

  • Share this:
ಕೆಜಿಎಫ್​​  (KGF) ಈ ಹೆಸರು ಕೇಳಿದರೆ ಏನೋ ಒಂಥರಾ ರೋಮಾಂಚನವಾಗೋದು ಸತ್ಯ. ಕೆಜಿಎಫ್ ಕನ್ನಡಿಗರ ಹೆಮ್ಮೆ. ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ (New Record) ಬರೆದ ಸಿನಿಮಾ ಅನ್ನುವುದು ಎಲ್ಲರಿಗೂ ಗೊತ್ತಿದೆ. ಈ ಸಿನಿಮಾ ಸ್ಯಾಂಡಲ್​ವುಡ್​ನ (Sandalwood) ದಿಕ್ಕು ಬದಲಿಸಿದ್ದು ಮಾತ್ರವಲ್ಲದೇ, ಇದರಲ್ಲಿ ಅಭಿನಯಿಸಿರುವ ನಟ, ನಟಿಯರ ಬದುಕನ್ನು ಕೂಡ ಬದಲಾಯಿಸಿದೆ. ಹಾಗೆಯೇ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಕೂಡ ಫುಲ್ ಫೇಮಸ್​. ಇದು ಅವರ ಮೊದಲ ಸಿನಿಮಾವಾಗಿತ್ತು. ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಈ ಎರಡು ಸಿನಿಮಾಗಳಿಗಾಗಿ ಅವರು ಅವರು ಬಹಳಷ್ಟು ವರ್ಷಗಳನ್ನು ಮೀಸಲಿಟ್ಟಿದ್ದರು. ಸದ್ಯ ಅವರು ಸುದ್ದಿಯಲ್ಲಿದ್ದಾರೆ, ಅದು ಸಿನಿಮಾ ವಿಚಾರಕ್ಕೆ ಅಲ್ಲ, ಎಸ್​ಎಸ್​ಎಲ್​ಸಿ ಮಾರ್ಕ್ಸ್ ಕಾರ್ಡ್ ವಿಚಾರಕ್ಕೆ.  

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ನಟಿ

ಹೌದು, ನಟಿ ಶ್ರೀನಿಧಿ ಶೆಟ್ಟಿ ಅವರ ಎಸ್​ಎಸ್​ಎಲ್​ಸಿ ಮಾರ್ಕ್ಸ್​ ಕಾರ್ಡ್​ ಲೀಕ್​ ಆಗಿದೆ. ಈಗ ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‌‌ ಇದರಲ್ಲಿನ ವಿಶೇಷತೆ ಏನು ಎಂದರೆ ಅವರಿಗೆ ಕನ್ನಡ ವಿಷಯದಲ್ಲಿ ಹೆಚ್ಚು ಮಾರ್ಕ್ಸ್ ಬಂದಿದೆ. ಇದು ನೆಟ್ಟಿಗರ ಗಮನ ಸೆಳೆದಿದ್ದು, ನಟಿಯನ್ನು ಹಾಡಿ ಹೊಗಳಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಶ್ರೀನಿಧಿ ಶೆಟ್ಟಿ ಕನ್ನಡದವರೇ. ಎಸ್​ಎಸ್​ಎಲ್​ಸಿಯಲ್ಲಿ 125 ಕ್ಕೆ 121 ಅಂಕಗಳನ್ನು ಪಡೆದಿದ್ದರು. ಇದನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪ-ಮಗ ಅಂದ್ರೆ ಹೀಗಿರಬೇಕು, ಕೊನೆ ಸಿನಿಮಾದಲ್ಲೂ ಒಂದೇ ಸಂದೇಶ ಕೊಟ್ಟ ಪುನೀತ್-ರಾಜ್​ಕುಮಾರ್!

ಇನ್ನು ಶ್ರೀನಿಧಿ ಶೆಟ್ಟಿ, ಸದ್ಯ ನಟ ವಿಕ್ರಂ ಜೊತೆಗೆ 'ಕೋಬ್ರಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅದರಲ್ಲಿ ಅವರ ಲುಕ್ ಕೂಡ ರಿವೀಲ್ ಆಗಿತ್ತು. ಕೆಜಿಎಫ್ ಸಕ್ಸಸ್ ನಂತರ ನಟಿಗೆ ಸಾಲು ಸಾಲು ಅವಕಾಶಗಳು ಬಂದಿವೆ. ಸಿನಿಮಾ ವಿಚಾರದಲ್ಲಿ ಚ್ಯೂಸಿಯಾಗಿರುವ ಅವರು, ಬಹಳ ಯೋಚಿಸಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

actress srinidhi shetty SSLC marks card goes viral

ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ ನಟಿ

ಇನ್ನೂ ಇತ್ತೀಚೆಗಷ್ಟೇ ಸಂಭಾವನೆ ವಿಚಾರವಾಗಿ ಸಹ ನಟಿ ಸದ್ದು ಮಾಡಿದ್ದರು. ಶ್ರೀನಿಧಿ ತೆಲುಗು ಸಿನಿಮಾಗೆ 2 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ತೆಲುಗು ನಿರ್ಮಾಪಕರೊಬ್ಬರು ಶ್ರೀನಿಧಿ ಶೆಟ್ಟಿಗೆ ಸಿನಿಮಾ ಆಫರ್‌ಗಾಗಿ ಸಂಪರ್ಕ ಮಾಡಿದ್ದು ಶ್ರೀನಿಧಿ ದೊಡ್ಡ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ.

ಜೂ.ಎನ್ ಟಿ ಆರ್ ಸಿನಿಮಾದ ನಾಯಕಿ ಪಾತ್ರಕ್ಕೆ ಶ್ರೀನಿಧಿಗೆ ಆಫರ್ ಮಾಡಲಾಗಿದಂತೆ. ಆದರೆ ತೆಲುಗಿನ ಮೊದಲ ಸಿನಿಮಾಗೆ ಈ ಪರಿ ಸಂಭಾವನೆ ಕೇಳಿದ್ದು ನೋಡಿ ತೆಲುಗು ನಿರ್ಮಾಪಕರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗುತ್ತಿದೆ.  ಆದರೆ ಇದಕ್ಕೂ ಮುನ್ನ ಅವರಿಗೆ ಆಫರ್​ಗಳು ಹೆಚ್ಚಾಗಿ ಬರುತ್ತಿಲ್ಲ ಎಂಬ ಸುದ್ದಿ ಸಹ ಹರಿದಾಡಿತ್ತು.

ಇದನ್ನೂ ಓದಿ: 8ನೇ ದಿನವೂ ಮುಂದುವರೆದ ಚಾರ್ಲಿ ಅಬ್ಬರ, ಇದುವರೆಗೂ ಮಾಡಿದ ಕಲೆಕ್ಷನ್ ಎಷ್ಟು?

ಇನ್ನು ಸುಮಾರು 8 ವರ್ಷಗಳು 'ಕೆಜಿಎಫ್' ಎರಡೂ ಚಿತ್ರಗಳನ್ನು ಮುಗಿಸಲು ತಗುಲಿದೆ. ಹಾಗಾಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಯಶ್ ಮಿಂಚುತ್ತಿದ್ದಾರೆ. ಆದರೆ ಈ ಒಂದು ಚಿತ್ರಕ್ಕಾಗಿ ಕಾಯುತ್ತಿದ್ದ ಶ್ರೀನಿಧಿ ಶೆಟ್ಟಿ ತಮ್ಮ ಮುಂದಿನ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾಗುತ್ತದೆ. 'ಕೆಜಿಎಫ್' ಚಿತ್ರದ ಕ್ರೇಜ್ ನೋಡಿದರೆ, ಶ್ರೀನಿಧಿ ಶೆಟ್ಟಿ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರಬೇಕಿತ್ತು. ಆದರೆ ಅಂದಾಜಿಸಿದಷ್ಟು ಅವಕಾಶ ಬಂದಿಲ್ಲ ಎಂದೆಲ್ಲಾ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಶ್ರೀನಿಧಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ನೋಡಿದರೆ ಸಾಲು ಸಾಲು ಆಫರ್​ಗಳು ಬರುತ್ತಿದೆ ಎಂದು ಹೇಳಲಾಗುತ್ತಿದೆ.
Published by:Sandhya M
First published: