Sonam Kapoor: ಊದಿಕೊಂಡ ಪಾದಗಳ ಫೋಟೋ ಪೋಸ್ಟ್ ಮಾಡಿದ ಸೋನಮ್ ಕಪೂರ್! ಗರ್ಭಧಾರಣೆ ಬಗ್ಗೆ ನಟಿ ಹೇಳಿದ್ದಿಷ್ಟು

ಬಾಲಿವುಡ್ ನಟಿಯೊಬ್ಬರು ಗರ್ಭಧಾರಣೆಯ ಹಂತದಲ್ಲಿದ್ದು, ತಮ್ಮ ಮೊದಲನೆಯ ಮಗುವನ್ನು ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ, ನಟ ಅನಿಲ್ ಕಪೂರ್ ಅವರ ಮಗಳು ಮತ್ತು ನಟಿ ಸೋನಮ್ ಕಪೂರ್. ಹೌದು.. ಪತಿ ಆನಂದ್ ಅಹುಜಾ ಅವರೊಂದಿಗೆ ಶೀಘ್ರದಲ್ಲಿಯೇ ಪ್ರಥಮ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸೋನಮ್ ಕಪೂರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಗರ್ಭಧಾರಣೆಯ ಅನುಭವಗಳ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ನಟಿ ಸೋನಮ್ ಕಪೂರ್

ನಟಿ ಸೋನಮ್ ಕಪೂರ್

  • Share this:
ಸಾಮಾನ್ಯವಾಗಿ ಮಹಿಳೆಯರಿಗೆ (Women) ಈ ಗರ್ಭಧಾರಣೆಯ ಸಮಯದಲ್ಲಿ ಪಾದಗಳು ಊದಿಕೊಳ್ಳುವುದು, ಪದೇ ಪದೇ ವಾಂತಿ ಆಗುವುದು, ದೇಹದ ತೂಕ ಜಾಸ್ತಿಯಾಗುವುದು, ಮುಖ ಸಹ ದಪ್ಪವಾಗುವುದು ಆಗುತ್ತಿರುತ್ತವೆ. ಮೊದಲ ಬಾರಿಗೆ ತಾಯಿ (Mother) ಆಗುವವರಿಗೆ ಈ ಅನುಭವ ಹೊಸತು ಮತ್ತು ಕೆಲವು ಸಂದರ್ಭದಲ್ಲಿ ಈ ಸಹಜ ಪ್ರಕ್ರಿಯೆಗಳು ದೊಡ್ಡದಾಗಿ ಮತ್ತು ತ್ರಾಸದಾಯಕವಾಗಿ ಅನ್ನಿಸುವುದು ಸಹ ಸಹಜ. ಅದೇ ಮೊದಲನೇ ಮಗುವಿಗೆ ಜನ್ಮ (Birth) ನೀಡಿದ ನಂತರ ಸ್ವಲ್ಪ ವರ್ಷಗಳ ನಂತರದಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡುತ್ತಿರುವಾಗ ಗರ್ಭಧಾರಣೆಯ (Pregnancy) ಬಗ್ಗೆ ಸ್ಪಷ್ಟವಾದ ಅರಿವು ಪ್ರತಿಯೊಬ್ಬ ಮಹಿಳೆಗೂ (Women) ಇರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಪ್ರಥಮ ಮಗುವಿನ ನಿರೀಕ್ಷೆಯಲ್ಲಿರುವ ಸೋನಮ್ ಕಪೂರ್
ಈಗ ಬಾಲಿವುಡ್ ನಟಿಯೊಬ್ಬರು ಗರ್ಭಧಾರಣೆಯ ಹಂತದಲ್ಲಿದ್ದು, ತಮ್ಮ ಮೊದಲನೆಯ ಮಗುವನ್ನು ಸ್ವಾಗತಿಸಲು ಕಾತುರತೆಯಿಂದ ಕಾಯುತ್ತಿದ್ದಾರೆ. ಆ ನಟಿ ಬೇರೆ ಯಾರೂ ಅಲ್ಲ, ನಟ ಅನಿಲ್ ಕಪೂರ್ ಅವರ ಮಗಳು ಮತ್ತು ನಟಿ ಸೋನಮ್ ಕಪೂರ್. ಹೌದು.. ಪತಿ ಆನಂದ್ ಅಹುಜಾ ಅವರೊಂದಿಗೆ ಶೀಘ್ರದಲ್ಲಿಯೇ ಪ್ರಥಮ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಸೋನಮ್ ಕಪೂರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಗರ್ಭಧಾರಣೆಯ ಅನುಭವಗಳ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಪಾದಗಳ ಊದಿಕೊಂಡಿರುವ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿ ಏನಂದ್ರು
ಗುರುವಾರ ಸಹ ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ತನ್ನ ಪಾದಗಳ ಊದಿಕೊಂಡಿರುವ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಅವುಗಳನ್ನು ದಿಂಬಿನ ಮೇಲೆ ಇರಿಸಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಒಂದೆರಡು ವಾರಗಳಲ್ಲಿ, ನಟಿ ತನ್ನ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Alia Bhatt: ತಾಯಿಯಾಗುತ್ತಿರುವ ಆಲಿಯಾಳದ್ದು ಧೈರ್ಯಶಾಲಿ ನಿರ್ಧಾರ! ಕರೀನಾ ಕಪೂರ್ ಮೆಚ್ಚುಗೆ ಮಾತು

ಸೋನಮ್ ತನ್ನ ಊದಿಕೊಂಡ ಪಾದಗಳ ಫೋಟೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ. ಗರ್ಭಧಾರಣೆಯು ನಿಜವಾಗಿಯೂ ಸುಲಭವಲ್ಲ ಮತ್ತು ಯಾವಾಗಲೂ ಆರಾಮದಾಯಕವಾಗಿರುವುದಿಲ್ಲ ಎಂದು ಅವರು ತಮ್ಮ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು. ನಟಿ ತನ್ನ ಎರಡು ಕಾಲುಗಳನ್ನು ದಿಂಬಿನ ಮೇಲೆ ಇರಿಸಿರುವುದನ್ನು ನಾವು ನೋಡಬಹುದು.



ನಟಿ ಸೋನಮ್ ಅವರು ಮೇ 8, 2018 ರಂದು ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾದರು. ಈ ವರ್ಷದ ಮಾರ್ಚ್ ನಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್ ನ ಅಧಿಕೃತ ಹ್ಯಾಂಡಲ್ ಗಳಲ್ಲಿ ಹೆರಿಗೆ ಫೋಟೋ ಶೂಟ್ ಅನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳುವ ಮೂಲಕ ತಾವು ಗರ್ಭ ಧರಿಸಿದ್ದಾರೆ ಎಂದು ಅಧಿಕೃತವಾಗಿ ದೃಢಪಡಿಸಿದ್ದರು. ಈ ಫೋಟೋಗೆ ಸುಂದರವಾಗಿ ಶೀರ್ಷಿಕೆ ಸಹ ನೀಡಲಾಗಿತ್ತು. ನಾಲ್ಕು ಕೈಗಳು ಮಗುವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಎತ್ತಿಕೊಳ್ಳುತ್ತವೆ ಮತ್ತು ಪ್ರತಿ ಹೆಜ್ಜೆಯಲ್ಲೂ ಮಗುವಿನೊಂದಿಗೆ ಎರಡು ಹೃದಯಗಳು ಮಿಡಿಯುತ್ತವೆ ಎಂದು ಮುದ್ದಾಗಿ ಸೋನಮ್ ಬರೆದಿದ್ದರು.

ಇಟಲಿಯಲ್ಲಿ 'ಬೇಬಿಮೂನ್' ಅನ್ನು ಆನಂದಿಸಿದ ದಂಪತಿಗಳು 
ಸೋನಮ್ ಮತ್ತು ಪತಿ ಆನಂದ್ ಇತ್ತೀಚೆಗೆ ಇಟಲಿಯಲ್ಲಿ ಜೂನ್ ತಿಂಗಳಿನಲ್ಲಿ ತಮ್ಮ 'ಬೇಬಿಮೂನ್' ಅನ್ನು ಆನಂದಿಸಿದರು. ನಟಿ ಸೋನಮ್, ಜೂನ್ ತಿಂಗಳಲ್ಲಿ ತನ್ನ ಮೂರನೇ ತ್ರೈಮಾಸಿಕವನ್ನು ಪ್ರವೇಶಿಸಿದರು. ಅವರು ಮುಂಬೈಗೆ ಮರಳುವ ಮೊದಲು, ಅವರು ತಮ್ಮ ‘ಬೇಬಿ ಶವರ್’ ಅನ್ನು ತಮ್ಮ ಲಂಡನ್ ಮನೆಯಲ್ಲಿ ಆಯೋಜಿಸಿದ್ದರು.

ಇದನ್ನೂ ಓದಿ: Alia Bhatt: ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​ಗೆ ಆಲಿಯಾ ಪಡೆಯೋ ಸಂಭಾವನೆ ಎಷ್ಟು ಗೊತ್ತೇ?

ವರದಿಗಳ ಪ್ರಕಾರ, ಈ ದಂಪತಿಗಳು ಈ ತಿಂಗಳಲ್ಲಿ (ಆಗಸ್ಟ್) ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಆನಂದ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ಸೋನಮ್ ಅವರು "ಅತ್ಯುತ್ತಮ ತಂದೆ" ಆಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಆನಂದ್, ಸೋನಮ್ ನನಗೆ ಎಲ್ಲದಕ್ಕೂ ಸ್ಫೂರ್ತಿ ಎಂದು ಹೇಳಿದರು. ಆನಂದ್ ಅವರ ಮಾವ ಎಂದರೆ ಸೋನಮ್ ತಂದೆ ಅನಿಲ್ ಕಪೂರ್ ಸಹ ಆನಂದ್ 'ಒಳ್ಳೆಯ ತಂದೆ' ಆಗುತ್ತಾರೆ ಎಂದು ಹೇಳಿದರು.
Published by:Ashwini Prabhu
First published: