ಕನ್ನಡ ಸೇರಿ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಸ್ನೇಹಾ (Actress Sneha) , ಖಾಸಗಿ ಸಂಸ್ಥೆಯೊಂದು ತನಗೆ ₹25 ಲಕ್ಷ ವಂಚಿಸಿದೆ (25 lakh Cheating) ಎಂದು ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ನೇಹಿತರೊಬ್ಬರ ಸಲಹೆ ಮೇರೆಗೆ ಸಿಮೆಂಟ್ ತಯಾರಿಕಾ ಕಂಪನಿಯಲ್ಲಿ ₹25 ಲಕ್ಷ ಹೂಡಿಕೆ ಮಾಡಿದ್ದಾಗಿ ದೂರುದಾರರು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಅಲ್ಲದೆ, ಸಂಸ್ಥೆಯ ಪ್ರತಿನಿಧಿಯು ಪ್ರತಿ ತಿಂಗಳು ಆಕೆಗೆ ಹೆಚ್ಚಿನ ಆದಾಯ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಂಪನಿಯು ತನ್ನ ಭರವಸೆ ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ನಟಿ ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ನಟಿ ತಮಿಳುನಾಡು ರಾಜಧಾನಿ ಚೆನ್ನೈನ ನೀಲಂಕರೈ ಪೊಲೀಸರಿಗೆ ದೂರು ನೀಡಲಾಗಿದ್ದು, ನಂತರ ಚೆನ್ನೈನ ಕಾನತ್ತೂರು ಪೊಲೀಸರಿಗೆ ಈ ದೂರನ್ನು ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ತನಿಕೆಯನ್ನು ಕಾನತ್ತೂರು ಅಪರಾಧ ನಿರೀಕ್ಷಕ ಬಾಲಕುಮಾರ್ ವಹಿಸಿಕೊಂಡಿದ್ದಾರೆ. ಅಲ್ಲದೆ, ಹದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
![]()
ಪತಿಯ ಜೊತೆ ನಟಿ ಸ್ನೇಹಾ
ರವಿಚಂದ್ರನ್, ಕಮಲ್ ಹಾಸನ್, ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಸಿಂಬು ಮತ್ತು ಧನುಷ್ ಅವರಂತಹ ಟಾಪ್ ಸ್ಟಾರ್ಗಳ ಎದುರು ನಾಯಕಿಯಾಗಿ ಜನಪ್ರಿಯ ನಟಿ ಸ್ನೇಹಾ ನಟಿಸಿದ್ದಾರೆ. ಅವರು ನಟ ಪ್ರಸನ್ನರೊಂದಿಗೆ ಮದುವೆಯಾಗಿದ್ದಾರೆ ಮತ್ತು ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ದೂರಿನ ವಿವರ...
ಇಬ್ಬರು ಉದ್ಯಮಿಗಳ ವಿರುದ್ಧ ಸ್ನೇಹಾ ದೂರು ದಾಖಲಿಸಿದ್ದಾರೆ. ಈ ಇಬ್ಬರೂ ರಫ್ತು ಕಂಪನಿ ನಡೆಸುತ್ತಿದ್ದಾರೆ ಮತ್ತು ಸೂಕ್ತ ಆದಾಯದ ಭರವಸೆ ನೀಡಿ ಹಣವನ್ನು ಹೂಡಿಕೆ ಮಾಡಲು ಕೇಳಿದ್ದರು. ಆದರೆ ನಂತರ, ತನಗೆ ಯಾವುದೇ ಹಣವನ್ನು ಪಾವತಿಸಿಲ್ಲ ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: Sneha - Prasanna: ಜಾಹೀರಾತುಗಳಿಂದಲೇ ಕೋಟಿ ಕೋಟಿ ಗಳಿಸುತ್ತಿದ್ದಾರೆ ಈ ಸ್ಟಾರ್ ದಂಪತಿ..!
ತಿರುಪತಿ ಮೂಲದ ಸಿಮೆಂಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದೇನೆ. ಇಂಜಮ್ಬಕ್ಕಂನಲ್ಲಿರುವ ತನ್ನ ಮನೆಯಲ್ಲಿ ಅವರು ಹಣವನ್ನು ಪಡೆದುಕೊಂಡಿದ್ದರು. 25 ಲಕ್ಷ ರೂ. ಅನ್ನು ಆನ್ಲೈನ್ ಮೂಲಕ ಪಾವತಿಸಿದ್ದು, ಇನ್ನುಳಿದ 1 ಲಕ್ಷ ರೂ. ಹಣವನ್ನು ನಗದು ರೂಪದಲ್ಲಿ ನೀಡಿರುವುದಾಗಿಯೂ ನಟಿ ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ, ತಾನು ಹೂಡಿಕೆ ಮಾಡಿದ 26 ಲಕ್ಷ ರೂಪಾಯಿಗಳಲ್ಲಿ ಯಾವುದೇ ಆದಾಯ ಪಡೆಯದ ಕಾರಣ ಹಣವನ್ನು ಹಿಂತಿರುಗಿಸಲು ಅಥವಾ ಬಡ್ಡಿ ನೀಡಲು ಕೇಳಿರುವುದಾಗಿಯೂ ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Sneha Ullal: ಬ್ರೈಡಲ್ ಲುಕ್ನಲ್ಲಿ ಸ್ನೇಹಾ ಉಲ್ಲಾಳ್: ಮತ್ತೆ ಐಶ್ವರ್ಯಾ ರೈ ಜತೆ ಹೋಲಿಕೆ ಮಾಡುತ್ತಿರುವ ನೆಟ್ಟಿಗರು..!
ಆದರೆ, ಹಣ ಅಥವಾ ಬಡ್ಡಿ ನೀಡಲು ಉದ್ಯಮಿಗಳು ನಿರಾಕರಿಸಿದ್ದಲ್ಲದೆ ತನ್ನ ವಿರುದ್ಧ ಬೆದರಿಕೆ ಹಾಕಿದ್ದಾರೆಂದೂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಸ್ನೇಹಾ ಆರೋಪಿಸಿದ್ದಾರೆ.
ಇನ್ನು, ಚಲನಚಿತ್ರದ ವಿಚಾರಕ್ಕೆ ಬಂದರೆ, ನಟಿ ಸ್ನೇಹಾ ಕೊನೆಯದಾಗಿ ಧನುಷ್ ಅವರ 'ಪಟ್ಟಾಸ್'ನಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಸ್ತುತ ವೆಂಕಟ್ ಪ್ರಭುವಿಗೆ ಜೋಡಿಯಾಗಿ 'ಶಾಟ್ ಭೂತ್ 3' ಎಂಬ ಮಕ್ಕಳ ಆಧಾರಿತ ಮನರಂಜನೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ