ಬಿಗ್​ ಬಾಸ್​ ಮನೆಯಿಂದ ಮೂರನೇ ವಾರ ಹೊರಬಂದ ಸ್ನೇಹಾ

sushma chakre | news18
Updated:November 11, 2018, 4:45 PM IST
ಬಿಗ್​ ಬಾಸ್​ ಮನೆಯಿಂದ ಮೂರನೇ ವಾರ ಹೊರಬಂದ ಸ್ನೇಹಾ
  • Advertorial
  • Last Updated: November 11, 2018, 4:45 PM IST
  • Share this:
ನ್ಯೂಸ್​18 ಕನ್ನಡ

ಬಿಗ್​ ಬಾಸ್​ ಕನ್ನಡ ಸೀಸನ್​ 6ರ ಮೂರನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಿನ್ನೆ ಮುಗಿದಿದೆ. ನೃತ್ಯಗಾರ್ತಿ ಮತ್ತು ನಟಿಯೂ ಆಗಿರುವ ಸ್ನೇಹಾ ಆಚಾರ್ಯ ಈ ವಾರ ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದಾರೆ.

ಮೊದಲ ವಾರ ಮಹಿಳಾ ಕ್ರಿಕೆಟ್​ಪಟು ರಕ್ಷಿತಾ ರೈ ಎಲಿಮಿನೇಟ್​ ಆಗಿದ್ದರು. ಕಳೆದ ವಾರ ಮಂಗಳೂರಿನ ರೀಮಾ ಎಲಿಮಿನೇಟ್​ ಆಗಿದ್ದರು. ಮೂರನೇ ವಾರ ಸ್ನೇಹಾ ಆಚಾರ್ಯ ಎಲಿಮಿನೇಟ್ ಆಗುವ ಮೂಲಕ ಮೊದಲ ಮೂರೂ ದಿನವೂ ಮಹಿಳಾ ಸ್ಪರ್ಧಿಗಳೇ ಹೊರಹೋದಂತಾಗಿದೆ. ಮೂರು ವಾರಗಳಲ್ಲಿ ಎರಡು ವಾರವೂ ಕಾಮನ್​ ಮ್ಯಾನ್​ ವಿಭಾಗದಲ್ಲಿ ಬಿಗ್​ ಬಾಸ್​ ಮನೆಯೊಳಗೆ ಹೋಗಿದ್ದ ಸ್ಪರ್ಧಿಗಳು ಹೊರಬಂದಿದ್ದರು. ಸ್ನೇಹಾ ಆಚಾರ್ಯ ಬಿಗ್​ಬಾಸ್​ ಮನೆಯಿಂದ ಹೊರಬಂದ ಮೊದಲ ಸೆಲೆಬ್ರಿಟಿ ಸ್ಪರ್ಧಿಯಾಗಿದ್ದಾರೆ.

ಇದನ್ನೂ ಓದಿ: ‘ಬಿಗ್​ಬಾಸ್’ ಅಂಗಳದಲ್ಲಿ ಆರಂಭವಾಯ್ತು ಕಿತ್ತಾಟ

ಜಯಶ್ರೀ, ರಾಕೇಶ್, ಅಕ್ಷತಾ, ರಶ್ಮಿ, ಆಡಮ್ ಪಾಶಾ, ಸೋನು ಪಾಟೀಲ್, ಮುರಳಿ, ರವಿ, ಕವಿತಾ ಗೌಡ, ಸ್ನೇಹಾ ಮತ್ತು ಆನಂದ ಈ 11  ಸ್ಪರ್ಧಿಗಳು ಈ ವಾರ  ನಾವಿನೇಟ್ ಆಗಿದ್ದರು. ಕೊನೆಗೆ ನಾಮಿನೇಟ್ ಆದವರ ಪೈಕಿ ಸ್ನೇಹಾ ಆಚಾರ್ಯ ಅವರಿಗೆ ಗೇಟ್​ಪಾಸ್​ ಸಿಕ್ಕಿದೆ. ಕನ್ನಡದ 'ಜೋಶ್'ಸಿನಿಮಾ ಮೂಲಕ ಗುರುತಿಸಿಕೊಂಡ ಸ್ನೇಹಾ ನಂತರವೂ 'ಕೃಷ್ಣ ಲೀಲಾ', 'ಆಕೆ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನೃತ್ಯ ಸಂಯೋಜಕಿಯಾಗಿರುವ ಸ್ನೇಹಾ ನಂತರ ನೃತ್ಯದಲ್ಲೇ ಹೆಚ್ಚು ತೊಡಗಿಸಿಕೊಂಡು ಮುಂಬೈನಲ್ಲಿ ನೆಲೆಸಿದ್ದರು.

ಇದನ್ನೂ ಓದಿ: ‘ಬಿಗ್​​ಬಾಸ್​’ ಮನೆಯಿಂದ ಹೊರ ನಡೆದ ಎರಡನೇ ಸ್ಪರ್ಧಿ ಇವರೇ!

 
First published:November 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ