ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಿದ ನಟಿ!

news18
Updated:July 10, 2018, 1:19 PM IST
ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನ ನೀಡಿದ ನಟಿ!
news18
Updated: July 10, 2018, 1:19 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ನಟಿ ಶ್ವೇತಾ ಶ್ರೀವಾಸ್ತವ್‍ಗೆ, ಅಶ್ಮಿತಾ ಶ್ರೀವಾಸ್ತವ್ ಎಂಬ ಪುಟಾಣಿ ಮಗಳಿದ್ದಾಳೆ. ಈ ಪುಟಾಣಿಗೆ ವರ್ಷ ಕೂಡ ತುಂಬಿಲ್ಲ ಆಗಲೇ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಂದಹಾಗೆ ಇದೇ ತಿಂಗಳು 21ಕ್ಕೆ ಅಶ್ಮಿತಾ ಮೊದಲನೇ ವರ್ಷಕ್ಕೆ ಕಾಲಿಡಲಿದ್ದು, ಅಮ್ಮ ಶ್ವೇತಾ ಶ್ರೀವಾಸ್ತವ್ ಅಭಿಮಾನಿಗಳಿಗೆ ಭರ್ಜರಿ ಆಹ್ವಾನ ಕೊಟ್ಟಿದ್ದಾರೆ.

'ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ' ಖ್ಯಾತಿ ನಟಿ ಶ್ವೇತಾ ಶ್ರೀವಾಸ್ತವ್‍ ಅವರ ವರ್ಷ ಕೂಡ ತುಂಬದ ಈ ಪುಟಾಣಿ ಕಂದಮ್ಮ ಇನ್‍ಸ್ಟಾಗ್ರಾಂನಲ್ಲಿ ಅಕೌಂಟ್ ಕೂಡ ಹೊಂದಿದ್ದು, ಈಗಲೇ ಸಾವಿರಾರು ಹಿಂಬಾಲಕರನ್ನು ಹೊಂದಿದ್ದಾಳೆ.

ಇದೇ 21ಕ್ಕೆ ಅಶ್ಮಿತಾ ಮೊದಲನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾಳೆ. ಹೀಗಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಮಗಳ ಹುಟ್ಟುಹಬ್ಬವನ್ನ ಆಚರಿಸೋ ಪ್ಲಾನ್‍ನಲ್ಲಿರೋ ಶ್ವೇತಾ, ಅಶ್ಮಿತಾ ಹುಟ್ಟುಹಬ್ಬಕ್ಕೆ ಆಹ್ವಾನಕೊಟ್ಟಿದ್ದಾರೆ.
ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ವಿಡಿಯೋ ಮಾಡಿ ಹಾಕಿದ್ದು, ಭಾಗವಹಿಸೋ ಇಚ್ಛೆ ಇರುವವರು ಕಮೆಂಟ್ ಮಾಡಿ, ನೀವು ಎಷ್ಟು ಜನ ಬರುತ್ತೀರಿ ಅನ್ನೋದನ್ನ ನೋಡಿಕೊಂಡು, ಮಗಳ ಹುಟ್ಟುಹಬ್ಬವನ್ನು ಎಲ್ಲಿ ಆಚರಿಸಬೇಕೆಂದು ನಿರ್ಧರಿಸುವುದಾಗಿ ಹೇಳಿದ್ದಾರೆ.

 

 

 

 

 

 
First published:July 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ