ಸಾಮಾನ್ಯವಾಗಿ ಸಿನಿ ತಾರೆಯರು ತಮ್ಮ ಮಕ್ಕಳಿಗೆ ಏನು ಊಟ ಮಾಡಿಸ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತದೆ. ಸೆಲೆಬ್ರಿಟಿಗಳು ಮಕ್ಕಳಿಗೆಬೆಳಗಿನ ತಿಂಡಿ, ಉಪಹಾರ ಹಾಗೂ ರಾತ್ರಿ ಊಟಕ್ಕೆ ಯಾವ ರೀತಿಯ ಆಹಾರ ಕೊಡುತ್ತಾರೆ. ಅವರು ಮಕ್ಕಳ ಆರೋಗ್ಯಕ್ಕಾಗಿ ಏನಾದರೂ ಡಯಟ್ ಪ್ಲಾನ್ ಮಾಡಿರ್ತಾರ ಅನ್ನೋದನ್ನಿ ತಿಳಿಯೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಜೊತೆಗೆ ಸೆಲೆಬ್ರಿಟಿಗಳ ಮಕ್ಕಳು ಹೆಚ್ಚಾಗಿ ಪಿಜ್ಜಾ, ಬರ್ಗರ್ ಅಂತ ಫೋಟೋ ಹಾಕುವುದನ್ನೂ ನೋಡಿರುತ್ತೇವೆ. ಆದರೆ ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮಗಳಿಗೆ ಮನೆಯಲ್ಲಿ ನಮ್ಮ ಸ್ಥಳೀಯ ಖಾದ್ಯಗಳ ರುಚಿ ತೋರಿಸುತ್ತಿದ್ದಾರೆ. ಹೌದು, ಲಾಕ್ಡೌನ್ನಲ್ಲಿ ಮಗಳನ್ನು ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮಗಳಿಗೆ ಮಣ್ಣಿನ ಜೊತೆ ಸ್ನೇಹ ಮಾಡಿಸಿದ್ದರು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಮಗಳಿಗೆ ಬಿಸಿ ಬಿಸಿ ರಾಗಿ ಮುದ್ದೆಯ ರುಚಿ ತೋರಿಸಿದ್ದಾರೆ.
ಶ್ವೇತಾ ಶ್ರೀವಾತ್ಸವ್ ತಮ್ಮ ಮಗಳಿಗಾಗಿಯೇ ಪ್ರತ್ಯೇಕ ಇನ್ಸ್ಟಾಗ್ರಾಂ ಖಾತೆ ತೆರೆದಿದ್ದು, ಅಲ್ಲಿ ಅವಳ ಕುರಿತಾದ ಅಪ್ಡೇಟ್ ನೀಡುತ್ತಿರುತ್ತಾರೆ. ಇನ್ನು ಈ ಸ್ಟಾರ್ ಕಿಡ್ನ ಸಾಕಷ್ಟು ವಿಡಿಯೋ ಹಾಗೂ ಫೋಟೋಶೂಟ್ಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಈಗ ಶ್ವೇತಾ ಶ್ರೀವಾತ್ಸವ್ ಮಗಳೊಂದಿಗೆ ಸೇರಿ ಮುದ್ದೆ ಮಾಡಿರುವ ವಿಡಿಯೋ ಸಹ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ