Anitha EAnitha E
|
news18-kannada Updated:March 2, 2021, 3:07 PM IST
ಸ್ಯಾಂಡಲ್ವುಡ್ ಗ್ಲಾಮರ್ ಗೊಂಬೆ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ, ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಸ್ಯಾಂಡಲ್ವುಡ್ ಗ್ಲಾಮರ್ ಗೊಂಬೆ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ, ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಆದರೆ ಅಭಿಮಾನಿಗಳ ನಿರೀಕ್ಷೆ ವಿರುದ್ಧವಾಗಿ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎರಡನೇ ದಿನಕ್ಕೆ ಕಣ್ಣೀರಿಟ್ಟಿದ್ದಾರೆ.

ಅಷ್ಟಕ್ಕೂ ಶುಭಾ ಪೂಂಜಾ ಕಣ್ಣೀರಿಡುವಂತದ್ದು ಏನಾಯಿತು ಅನ್ನೋ ಅನುಮಾನ ನಿಮ್ಮನ್ನು ಕಾಡೋದು ಸಹಜ. ಯಾರಾದರೂ ಅವರ ಮನಸ್ಸಿಗೆ ನೋವು ಮಾಡಿದ್ರಾ ಅಂತ ಅನಿಸಬಹುದು.

ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೂ ಬೆರೆಯುತ್ತಾ ಕಾಲ ಕಳೆಯುತ್ತಿರುವ ಶುಭಾ ಹಾಗೂ ಇತರೆ ಸ್ಪರ್ಧಿಗಳಿಗೆ ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು.

ಈ ಟಾಸ್ಕ್ನಲ್ಲಿ ನಿಧಿ ಸುಬ್ಬಯ್ಯ, ಬ್ರೋ ಗೌಡ, ಧನುಶ್ರೀ, ಶುಭಾ ಪೂಂಜಾ ಹಾಗೂ ನಿರ್ಮಲಾ ಭಾಗವಹಿಸಿದ್ದರು.

ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ನ ಮೊದಲ ಕ್ಯಾಪ್ಟನ್ಸಿಗಾಗಿ ನಡೆದ ಟಾಸ್ಕ್ನಲ್ಲಿ ಬ್ರೋ ಗೌಡ ವಿಜೇತರಾದರೆ, ಉಳಿದವರು ಸೋಲನ್ನು ಅನುಭವಿಸುತ್ತಾರೆ.

ಇದರಿಂದಾಗಿ ನಂತರ ಬಿಗ್ ಬಾಸ್ ಸೋತರ ಧನುಶ್ರೀ, ನಿಧಿ ಸುಬ್ಬಯ್ಯ, ಶುಭಾ ಪುಂಜಾ ಹಾಗೂ ನಿರ್ಮಲಾ ಅವರಲ್ಲಿ ಯಾರಾದರೂ ಒಬ್ಬರನ್ನು ತೀರಾ ಕಳಪೆ ಪ್ರದರ್ಶನ ನೀಡಿದವರು ಎಂದು ಆಯ್ಕೆ ಮಾಡುವಂತೆ ಅವರಿಗೆ ಹೇಳುತ್ತಾರೆ.

ಒಲ್ಲದ ಮನಸ್ಸಿನಿಂದ ಕಡೆಗೆ ಈ ನಾಲ್ವರು ನಿರ್ಮಲಾ ಅವರನ್ನು ಕಳಪೆ ಪ್ರದರ್ಶನ ನೀಡಿದವರು ಎಂದು ಆಯ್ಕೆ ಮಾಡುತ್ತಾರೆ. ಆದರೆ ಈ ನಿರ್ಧಾರದಿಂದ ನಿಧಿ ಸುಬ್ಬಯ್ಯ ಹಾಗೂ ಶುಭಾ ಪೂಂಜಾ ಖುಷಿಯಾಗಿರುವುದಿಲ್ಲ.

ನಿರ್ಮಲಾ ಅವರ ಹೆಸರನ್ನು ಹೇಳುತ್ತಿದ್ದಂತೆಯೇ ಬಿಗ್ ಬಾಸ್ ಅವರನ್ನು ಈ ವಾರ ಮನೆಯಿಂದ ಹೊರ ಹೋಗುವ ಸ್ಪರ್ಧಿಯಾಗಿ ನೇರವಾಗಿ ನಾಮಿನೇಟ್ ಮಾಡುತ್ತಾರೆ.

ಬಿಗ್ ಬಾಸ್ ತೆಗೆದುಕೊಂಡ ನಿರ್ಧಾರದಿಂದ ಶುಭ ಪೂಂಜಾ ಕಣ್ಣೀರಿಡುತ್ತಾರೆ. ಬಿಗ್ ಬಾಸ್ ಬಳಿ ನಿರ್ಧಾರ ಬದಲಿಸುವಂತೆ ಮನವಿ ಸಹ ಮಾಡುತ್ತಾರೆ. ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ.

ಇನ್ನು ಪೂಂಜಾ ನಾಮಿನೇಷನ್ ಮಾಡುವ ಸಮಯ ಬಂದಾಗ ಮಾಡುವ ಒಂದು ಪುಟ್ಟ ಎಡವಟ್ಟಿನಿಂದ ತಮ್ಮನ್ನ ತಾವು ಜೋಕರ್ ಎಂದು ಕರೆದುಕೊಳ್ಳುತ್ತಾರೆ.

ನಾಮಿನೇಟ್ ಮಾಡಲು ಬರುವ ಶುಭಾ ಪೂಂಜಾ ಮೈಕ್ ಅನ್ನು ಸರಿಯಾಗಿ ಹಾಕಿಕೊಂಡಿರುವುದಿಲ್ಲ.

ಆಗ ಬಿಗ್ ಬಾಸ್ ಶುಭ ಅವರಿಗೆ ಮೈಕ್ ವಿಷಯ ಹೇಳಲು ಹೋಗುತ್ತಾರೆ.

ಬಿಗ್ ಬಾಸ್ ಮಾತು ಆರಂಭಿಸುವ ಮೊದಲೇ ಗಾಬರಿಗೊಂಡ ಶುಭ ತಡವಡಿಸುತ್ತಾರೆ. ಶುಭ ಆಡುವುದನ್ನು ಕಂಡ ಇತೆರೆ ಸ್ಪರ್ಧಿಗಳು ನಗಲಾರಂಭಿಸುತ್ತಾರೆ. ಅದಕ್ಕೆ ತನ್ನನ್ನ ತಾನು ಜೋಕರ್ಗೆ ಹೋಲಿಸಿಕೊಳ್ಳುತ್ತಾರೆ ಶೂಭ ಪೂಂಜಾ.
Published by:
Anitha E
First published:
March 2, 2021, 3:07 PM IST