Actress Shruthi: ನೇಗಿಲು ಹಿಡಿದು ಹೊರಟ ನಟಿ ಶ್ರುತಿ - ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್​

Sandalwood: ಇತ್ತೀಚೆಗೆ ಶ್ರುತಿ ಕಲರ್ಸ್​ ವಾಹಿನಿಯ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ಕಿರುತೆರೆಗೂ ಬಂದಿದ್ದು, ಸಿನೆಮಾ ,ಕಿರುತೆರೆ, ರಾಜಕೀಯ , ಕುಟುಂಬ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ನಟಿ ಶ್ರುತಿ

ನಟಿ ಶ್ರುತಿ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಹಲವಾರು ವರ್ಷಗಳ ಕಾಲ ಜನರನ್ನು ರಂಜಿಸಿ, ಅಳುಮುಂಜಿ ಅನಿಸಿಕೊಂಡು ಮಹಿಳೆಯರ ಮನಸ್ಸನ್ನು ಕರಗಿಸುತ್ತಿದ್ದ ನಟಿ ಎಂದರೆ ಶ್ರುತಿ (Shruthi) . ಅಳು ಎಂದರೆ ಶ್ರುತಿ ಎಂದರೆ ಅಳು ಎನ್ನುವ ರೀತಿ ಆಗಿತ್ತು.  ಏನು ಅರಿಯದ ಮುಗ್ಧ ಹೆಂಡತಿಯಾಗಿ, ತುಂಟ ಹುಡುಗಿಯಾಗಿ ಜನರನ್ನು ಸುಮಾರು 2 ದಶಕಗಳಿಂದ ರಂಜಿಸುತ್ತಿರುವ ನಟಿ ಈಗ ಕೃಷಿಯತ್ತ ಮುಖ ಮಾಡಿದ್ದಾರೆ.  ಹೌದು, ಚಿತ್ರರಂಗದಿಂದ ಸ್ವಲ್ಪ ದೂರವಿದ್ದು, ತಮ್ಮ ಜಮೀನಿನ ಕೆಲಸದಲ್ಲಿ ನಟಿ ಬ್ಯುಸಿಯಾಗಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಶ್ರುತಿ ಕೃಷಿ ಮಾಡುತ್ತಿರುವ ವಿಡಿಯೋ ಫುಲ್ ವೈರಲ್​ ಆಗಿದ್ದು, ಜನರು ಸಹ ಮೆಚ್ಚುಗೆ ಸೂಚಿಸಿದ್ದಾರೆ.  ನಾಯಕಿಯಾಗಿ ಜನರನ್ನು ಸೆಳೆದಿದ್ದ ಶ್ರುತಿ ಈಗಲು ಚಿತ್ರದಲ್ಲಿ ಸಕ್ರಿಯವಾಗಿರುವ ನಟಿ. ಪೋಷಕ ಪಾತ್ರಗಳಲ್ಲಿ ಮಾತ್ರವಲ್ಲದೇ ರಿಯಾಲಿಟಿ ಶೋ ಹಾಗೂ ರಾಜಕೀಯದಲ್ಲಿ ಸಹ ಅವರು ಬ್ಯುಸಿ ಇದ್ದಾರೆ. ಇನ್ನು ನೇಗಿಲು ಹಿಡಿದು ಉಳಿಮೆ ಮಾಡಲು ಹೊರಟಿರುವ ಶ್ರುತಿಗೆ ಮಗಳು ಗೌರಿ, ಹಾಗೂ ತಾಯಂದಿರು ಸಹ ಕೈ ಜೋಡಿಸಿದ್ದಾರೆ.


ರಾಜಕೀಯದಲ್ಲೂ ಬ್ಯುಸಿ ಈ ನಟಿ

ಇನ್ನು ಈ ವಿಡಿಯೋ ಜೊತೆ ನಾನೇ ಉತ್ತಿ ಬಿತ್ತಿ ಬೆಳೆಯಬೇಕೆಂಬುದು ನನ್ನ ಬಹುವರ್ಷದ ಆಸೆಯಾಗಿದೆ. ಇದೀಗ ಅದನ್ನು ಆರಂಭಿಸುತ್ತಿದ್ದೇನೆ ಭಗವಂತನಿಗೆ ಕೋಟಿ ಕೋಟಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಶ್ರುತಿ ಕಲರ್ಸ್​ ವಾಹಿನಿಯ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ಕಿರುತೆರೆಗೂ ಬಂದಿದ್ದು, ಸಿನೆಮಾ ,ಕಿರುತೆರೆ, ರಾಜಕೀಯ , ಕುಟುಂಬ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಕ ನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಹೆಸರುವಾಸಿಯಾಗಿರುವವರು ಶ್ರುತಿ.

ಇದನ್ನೂ ಓದಿ: ಬಾಲಿವುಡ್‌ ಶೋ ಮ್ಯಾನ್‌ಗೆ 50 ವರುಷ! ಸದಾ ಇರಲಿ 'ಖುಷಿ with Karan' ಎಂದ ಫ್ಯಾನ್ಸ್

ಅಳುಮುಂಜಿ ಪಾತ್ರದ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ಮೇರು ನಟರ ಜೊತೆ ನಟನೆ ಮಾಡಿರುವ ಇವರು ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕೆಲವೊಂದು ಚಿತ್ರಗಳಲ್ಲಿ ಪುಟ್ಟ ಪುಟ್ಟ ಒಂದೆರಡು ಚಿತ್ರಗಳಲ್ಲಿ ಪಾತ್ರವಹಿಸಿದ ನಂತರ 1990ರಲ್ಲಿ ತೆರೆಕಂಡ ದ್ವಾರಕೀಶರು ನಿರ್ಮಿಸಿದ ‘ಶ್ರುತಿ’ ಚಿತ್ರ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರುತಿ ಇದೀಗ ಸ್ಯಾಂಡಲ್​ವುಡ್​ನ ಹಿರಿಯ ನಟಿಯರಲ್ಲಿ ಒಬ್ಬರು.

ನಾಯಕಿಯಾಗಿದ್ದಾಗ ಕೇವಲ 14 ವರ್ಷ

ನಾಯಕಿಯಾಗಿ ಜರ್ನಿ ಆರಂಭಿಸಿದಾಗ ಅವರಿಗೆ ಕೇವಲ 14 ರಿಂದ 15 ವರ್ಷ. ಮೊದಲ ಚಿತ್ರ ಅವರ ಅಭಿನಯ ನೋಡಿ ಒಂದರ ಮೇಲೊಂದರಂತೆ ಚಿತ್ರಗಳ ಆಪರ್ ಬಂದು, ಸಾಲು ಸಾಲು ಚಿತ್ರದಲ್ಲಿ ನಟಿಸಿದ್ದಾರೆ. ಅವ್ವ, ರಾಷ್ಟ್ರ ಪ್ರಶಸ್ತಿ ವಿಜೇತ ಪುಟ್ಟಕ್ಕನ ಹೈವೇ ಸೇರಿದಂತೆ ಹಲವಾರು ಅದ್ಭುತ ಚಿತ್ರಗಳಲ್ಲಿ ನಟಿಸಿ, ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ ವೇಳೆಗೆ ‘ವೀರ ಕಂಬಳ‘ ಬಿಡುಗಡೆ, ಚಿತ್ರದ ಕುರಿತು ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಇನ್ನು ಬಿಗ್​ ಬಾಸ್ ಕನ್ನಡ ರಿಯಾಲಿಟಿ ಶೋ ದಲ್ಲಿ ಕೂಡ ಗೆದ್ದು ಬೀಗಿರುವ ಶ್ರುತಿ ಈಗಾಲೂ ಹಲವಾರು ಜನರ ಫೇವರೇಟ್ ಹಿರೋಯಿನ್. ಅಲ್ಲದೇ ಶ್ರುತಿ ತಮ್ಮ ಗೆಳತಿಯರಾದ ಮಾಳವಿಕ ಅವಿನಾಶ್ ಹಾಗೂ ಸುಧಾರಾಣಿ ಜೊತೆ ಸೇರಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುತ್ತಾರೆ.
Published by:Sandhya M
First published: