• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಹಿಮಾಲಯದಲ್ಲಿ ಚಾರಣ ಮಾಡುತ್ತಾ ಹೊಸ ವರ್ಷಕ್ಕೆ ಕಿಕ್​ ಸ್ಟಾರ್ಟ್​ ಕೊಟ್ಟ ನಟಿ ಶ್ರುತಿ..!

ಹಿಮಾಲಯದಲ್ಲಿ ಚಾರಣ ಮಾಡುತ್ತಾ ಹೊಸ ವರ್ಷಕ್ಕೆ ಕಿಕ್​ ಸ್ಟಾರ್ಟ್​ ಕೊಟ್ಟ ನಟಿ ಶ್ರುತಿ..!

ಕೇದಾರಕಾಂತ ಚಾರಣದಲ್ಲಿ ನಟಿ ಶ್ರುತಿ

ಕೇದಾರಕಾಂತ ಚಾರಣದಲ್ಲಿ ನಟಿ ಶ್ರುತಿ

12,500 ಅಡಿ ಎತ್ತರದಲ್ಲಿರುವ ಕೇದಾರ​ಕಾಂತ್​ ಸಮಿಟ್​ ಪೂರ್ಣಗೊಳಿಸಿದ್ದಾರೆ ಶ್ರುತಿ. ಹೌದು, ಹೊಸ ವರ್ಷಕ್ಕೆಂದು ಪ್ಲಾನ್​ ಮಾಡಿಕೊಂಡು ಶ್ರುತಿ ಈ ಕೇದಾರ್​ಕಾಂತ್​ ಚಾರಣಕ್ಕೆ ಹೋಗಿದ್ದಾರೆ. ತಮ್ಮ ಚಾರಣದ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

  • Share this:

ಒಂದು ಕಡೆ ಸಿನಿಮಾಗಳು ಹಾಗೂ ಮತ್ತೊಂದು ಕಡೆ ಪ್ರವಾಸೋದ್ಯಮ ನಿಗಮದ ಜವಾಬ್ದಾರಿ. ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ನಟಿ ಶ್ರುತಿ. ಪ್ರವಾಸೋದ್ಯಮ ನಿಗಮದ ಓಡಾಟದ ನಡುವೆಯೇ ಶ್ರುತಿ ತಮ್ಮ ಸಿನಿಮಾಗಳ ಚಿತ್ರೀಕರಣವನ್ನೂ ಪೂರ್ಣಗೊಳಿಸುತ್ತಿದ್ದಾರೆ. ಇನ್ನು, ಈ ಸಲದ ಹೊಸ ವರ್ಷಕ್ಕೆ ಶ್ರುತಿ ಮಗಳೊಂದಿಗೆ ಸೇರಿ ಒಂದು ಪ್ಲಾನ್​ ಮಾಡಿದ್ದರು. ಅದರಲ್ಲೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯಾಗಿರುವ ಶ್ರುತಿ ಹೊಸ ವರ್ಷವನ್ನು ತುಂಬಾ ವಿಭಿನ್ನವಾಗಿ ಆಚರಿಸುವ ಪ್ಲಾನ್​ ಮಾಡಿದ್ದರಂತೆ. ಶ್ರುತಿ ಅವರಿಗೆ ಈ ವರ್ಷ ಹೊಸ ವರ್ಷವನ್ನು ಹೊಸ ಜಾಗ ಅಥವಾ ಹೊಸ ಅನುಭವದ ಜೊತೆ ಆರಂಭಿಸುವ ಆಸೆ ಇತ್ತಂತೆ. ಅದರಂತೆ ಅವರು ನ್ಯೂ ಇಯರ್​ ಅನ್ನು ಹೊಸ ಜಾಗ ಹಾಗೂ ಹೊಸ ಅನುಭವದ ಜೊತೆ ಆರಂಭಿಸಿದ್ದಾರೆ. ಹೌದು, ಅವರ ಹೊಸ ಅನುಭವ ಎಷ್ಟು ಸಾಹಸಮಯವಾಗಿತ್ತು ಎಂದು ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 


ಹೌದು, ನಟಿ ಶ್ರುತಿ ತಮ್ಮ ಮಗಳು ಗೌರಿ ಜೊತೆ  ಉತ್ತರಾಖಂಡಕ್ಕೆ ಹೋಗಿದ್ದಾರೆ. ಹೊಸ ವರ್ಷವನ್ನು ಅಲ್ಲಿ ಕಳೆಯುವ ಪ್ಲಾನ್ ಮಾಡಿದ್ದರು. ಉತ್ತರಾಖಂಡ್​ನಲ್ಲಿ ಚಾರಣ ಮಾಡಲು ಸಾಕಷ್ಟು ಸ್ಥಳಗಳಿವೆ. ಅವುಗಳಲ್ಲಿ ಕೇದಾರಕಾಂತ್​ ಸಹ ಇಂದು. ಇದು ಪ್ರಸಿದ್ಧ ಚಳಿಗಾಲದ ಚಾರಣ.

View this post on Instagram


A post shared by Shruthi (@shruthi__krishnaa)

12,500 ಅಡಿ ಎತ್ತರದಲ್ಲಿರುವ ಕೇದಾರ​ಕಾಂತ್​ ಸಮಿಟ್​ ಪೂರ್ಣಗೊಳಿಸಿದ್ದಾರೆ ಶ್ರುತಿ. ಹೌದು, ಹೊಸ ವರ್ಷಕ್ಕೆಂದು ಪ್ಲಾನ್​ ಮಾಡಿಕೊಂಡು ಶ್ರುತಿ ಈ ಕೇದಾರ್​ಕಾಂತ್​ ಚಾರಣಕ್ಕೆ ಹೋಗಿದ್ದಾರೆ. ತಮ್ಮ ಚಾರಣದ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

View this post on Instagram


A post shared by Shruthi (@shruthi__krishnaa)

'ಪ್ರತಿ ವರ್ಷದ ಆರಂಭವನ್ನು ಒಂದು ಹೊಸಾ ಜಾಗ ಅಥವಾ ಹೊಸಾ ಅನುಭವದೊಂದಿಗೆ ಶುರುಮಾಡೋದು ನನ್ನ ಹೆಬ್ಬಯಕೆ ಅದರಂತೆ ಈ ವರ್ಷ ಕೇದಾರಕಾಂತ್ ಹಿಮಾಲಯ ಪರ್ವತದಲ್ಲಿ ಚಾರಣ ಮಾಡುವ ಮೂಲಕ ವರ್ಷವನ್ನು ಆರಂಭಿಸಿದೆ. ಅದ್ಭುದ್ಭುತವಾದ ಅನುಭವ ಆದರೆ ಅತ್ಯಂತ ಕಷ್ಟಕರವಾದ ಸಾಹಸ ಇದು. ಅಡ್ವೆಂಚರಸ್ ಟೂರಿಸಂನ ಇಷ್ಟಪಡುವ ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ಕೊಡಲೇಬೇಕು. ನಾನು ಒಂದು ದಿನದಲ್ಲಿ 20 ಗಂಟೆಗಳ ಕಾಲ ಸತತವಾಗಿ ಹಿಮಪರ್ವತದಲ್ಲಿ ಚಾರಣ ಮಾಡಿದ್ದೇನೆ. ಆವತ್ತಿನ ತಾಪಮಾನ -26° ಇತ್ತು. ಡಿಸೆಂಬರ್ 31ನೇ ತಾರೀಕು ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಆರಂಭವಾದ ಟ್ರಕಿಂಗ್, ಹೊಸ ವರ್ಷದ ಮೊದಲನೇ ಸೂರ್ಯೋದಯವನ್ನು ನೋಡಲು ಸುಮಾರು 6.15 ಕ್ಕೆ ಪರ್ವತದ ಮೇಲೆ ತಲುಪಿದೆ. 12,500 ಅಡಿ ಎತ್ತರದಲ್ಲಿ ನನಗೆ ಆದ ಅನುಭವ ನಿಜಕ್ಕೂ ಜೀವನದಲ್ಲಿ ಒಮ್ಮೆ ಅನುಭವಿಸಲೇಬೇಕು' ಎಂದಿದ್ದಾರೆ.

Published by:Anitha E
First published: