ಭಾವಿ ಪತಿಯೊಂದಿಗೆ ತೆರೆ ಹಂಚಿಕೊಂಡ ಕನ್ನಡದ ಆ ನಟಿ ಯಾರು?

news18
Updated:August 13, 2018, 12:59 PM IST
ಭಾವಿ ಪತಿಯೊಂದಿಗೆ ತೆರೆ ಹಂಚಿಕೊಂಡ ಕನ್ನಡದ ಆ ನಟಿ ಯಾರು?
news18
Updated: August 13, 2018, 12:59 PM IST
ನ್ಯೂಸ್​ 18 ಕನ್ನಡ 

ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಸಿನಿಮಾದ ಜತೆಗೆ ಅವರ ವೈಯಕ್ತಿಕ ಜೀವನದ ಬಗ್ಗೆಯೂ ತುಂಬಾ ಕುತೂಹಲ ಇಟ್ಟುಕೊಂಡಿರುತ್ತಾರೆ. ಅಂತೇಯೇ ಇದೀಗ ಸ್ಯಾಂಡಲ್‍ವುಡ್‍ನ ನಟಿಯೊಬ್ಬರು ವಿವಾಹಕ್ಕೆ ವರನನ್ನು ಹುಡುಕಿಕೊಂಡುದ್ದಾರೆ. ಅಲ್ಲದೆ ಶ್ರುತಿ ತನ್ನ ಭಾವಿ ಪತಿಯೊಂದಿಗೆ ತೆರೆ ಕೂಡ ಹಂಚಿಕೊಂಡಿದ್ದಾರೆ.

ತನ್ನ ಸಹಜ ನಟನೆ, ಸೌಂದರ್ಯದಿಂದಲೇ ಸಾಕಷ್ಟು ಅಭಿಮಾನಿಗಳನ್ನ ಹೊಂದಿರೊ ನಟಿ ಶ್ರುತಿ ಹರಿಹರನ್​. ಇತ್ತೀಚೆಗೆ ಮದುವೆ ಆಗುವುದರ ಬಗ್ಗೆ ತಿಳಿಸಿದ್ದ ಇವರು,ತನ್ನ ಭಾವಿ ಪತಿಯೊಂದಿಗೆ ವೀಡಿಯೋ ಹಾಡೊಂದರಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ವಾ.ಓ: ಎಸ್.. ಶೃತಿ ರಾಮ್ ಕುಮಾರ್ ಎಂಬುವವರನ್ನ ಮದುವೆ ಯಾಗಲಿದ್ದು, ಇತ್ತೀಚೆಗೆ ಪ್ರೇಮ ಎಂಬ ವೀಡಿಯೋ ಸಾಂಗ್‍ನಲ್ಲಿ ಅಭಿನಯಿಸಿದ್ದಾರೆ.. ಇದರ ಶೂಟಿಂಗ್ ಕೂಡ ಮುಗಿದಿದ್ದು, ಚೆನೈ ಬೀಚ್‍ಗಳ ಸುತ್ತ ಶೂಟಿಂಗ್ ಮಾಡಲಾಗಿದೆ..

ತೆಲುಗು ಮತ್ತು ಕನ್ನಡದಲ್ಲಿ ಈ ವಿಡಿಯೋ ಹಾಡು ಮೂಡಿಬರಲಿದ್ದು, ಸೆಪ್ಟೆಂಬರ್​ನಲ್ಲಿ ಹಾಡು 'ಪ್ರೇಮ' ಎಂಬ ಹೆಸರಿನಲ್ಲಿ ರಿಲೀಸ್ ಆಗಲಿದೆ. ಹಾಗೆ ಗೊಮ್ಮಟೇಶ್ ಎಂಬುವರು ಈ ಹಾಡಿನ ನಿರ್ದೇಶನ ಮಾಡಿದ್ದಾರೆ.  ಆದರೆ ಮದುವೆಯಾಗುವ ಹುಡುಗನೊಂದಿಗೆ ತೆರೆ ಹಂಚಿಕೊಂಡ ಮೇಲೂ ಶ್ರುತಿ ಇನ್ನೂ ಮದುವೆ ಬಗ್ಗೆ ಯಾವುದೇ ಮಾಹಿತಿ ಹೊರ ಹಾಕಿಲ್ಲ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ