ನಟ, (Actor) ನಟಿಯರು (Actress) ಅಂದ್ಮೇಲೆ ಹೊಸ ಹೊಸ ಅವಕಾಶಗಳು (New Chance) ಸಿಗುತ್ತಲೇ ಇರುತ್ತವೆ. ಆದರೆ ಹೊಸ ಅವಕಾಶ ಸಿಕ್ಕ ತಕ್ಷಣ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದವರನ್ನು ಹಾಗೂ ತಾಯ್ನಾಡು, ನುಡಿಯನ್ನೇ ಮರೆತು ಸಾಗುತ್ತಾರೆ. ಮುಂದೊಂದು ದಿನ ತಾವು ಇಂತಹ ಸ್ಥಳದಿಂದ ಬಂದಿದ್ದು, ಮೂಲ ಇದು ಎಂದು ಹೇಳಿಕೊಳ್ಳಲು ಸಾಧ್ಯವಾಗದೇ ಒದ್ದಾಡುತ್ತಾರೆ. ಇಂತಹ ಪ್ರಕರಣ ಇತ್ತೀಚಿಗೆ ನಡೆದು, ಸಾಕಷ್ಟು ಟ್ರೋಲ್ (Troll) ಕೂಡ ಆಗಿದೆ. ಈ ಮಧ್ಯೆ ಕನ್ನಡ ಚಿತ್ರರಂಗದ ಬಗ್ಗೆ ಈಗ ನಟಿಯೊಬ್ಬರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರೇ ತೆಲುಗು ಇಂಡಸ್ಟ್ರೀಯಲ್ಲಿ ಸಖತ್ ಬ್ಯುಸಿ ನಟಿ ಆಗಿರುವ ಕನ್ನಡದ ನಟಿ ಶ್ರೀಲೀಲಾ (Shreeleela).
ಕನ್ನಡದ ನಟಿ ಶ್ರೀಲೀಲಾ ಕನ್ನಡ ಚಿತ್ರಗಳ ಬಗ್ಗೆ ಹೆಮ್ಮೆಯ ಮಾತು
ನಟಿ ಶ್ರೀಲೀಲಾ, ಕನ್ನಡದಲ್ಲಿ ಭರಾಟೆ ಮತ್ತು ಕಿಸ್ ಸಿನಿಮಾ ಮಾಡಿದ್ದಾರೆ. ಈಗ ಟಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡು, ಟಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಬ್ಯುಸಿ ಆಗಿರುವ ನಟಿ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ಶ್ರೀಲೀಲಾ.
ಕನ್ನಡದ ಚಿತ್ರಗಳಲ್ಲಿ ನಟಿಸಿದ ನಂತರ ನಟಿ ಶ್ರೀಲೀಲಾ ಅವರಿಗೆ ಟಾಲಿವುಡ್ ನಲ್ಲಿ ಅವಕಾಶಗಳು ಬಂದವು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಅವರು ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನಟಿ ಶ್ರೀಲೀಲಾ, ಟಾಲಿವುಡ್ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಪೆಳ್ಳಿ ಸಂದಡಿ ಸಿನಿಮಾದದಲ್ಲಿ ನಟ ಶ್ರೀಕಾಂತ್ ಪುತ್ರ ರೋಷನ್ ಜೊತೆ ನಟಿಸುವ ಮೂಲಕ ನಟಿ ಶ್ರೀಲೀಲಾ, ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದಿರುವ ನಟಿ ಶ್ರೀಲೀಲಾ, ಟಾಲಿವುಡ್ ಅಂಗಳಕ್ಕೆ ಪರಿಚಿತಳು. ಈಗ ನಟಿ ಶ್ರೀಲೀಲಾ ನಾಯಕಿಯಾಗಿ ನಟ ರವಿ ತೇಜ ನಟನೆಯ ಧಮಾಕಾ ಸಿನಿಮಾದಲ್ಲಿ ನಟಿಸಿದ್ದು, ಚಿತ್ರ ತೆರೆ ಕಾಣಲಿದೆ.
ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಶ್ರೀಲೀಲಾಗೆ ಪ್ರಶ್ನೆ ಕೇಳಲಾಗಿತ್ತು
ಧಮಾಕಾ ಸಿನಿಮಾ ಪ್ರಚಾರದಲ್ಲಿ ತೊಡಗಿರುವ ನಟಿ ಶ್ರೀಲೀಲಾಗೆ ಕಾಂತಾರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಶ್ರೀಲೀಲಾ, ಕನ್ನಡ ಸಿನಿಮಾಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಾನು ಕಾಂತಾರ ಸಿನಿಮಾ ನೋಡಿದ್ದೇನೆ. ಚಿತ್ರ ಚೆನ್ನಾಗಿದೆ. ನಾನೂ ಸಹ ಕರ್ನಾಟಕದವಳೇ.
ಕನ್ನಡ ಸಿನಿಮಾಗಳು ದೇಶದಾದ್ಯಂತ ಸದ್ದು ಮಾಡುತ್ತಿವೆ
ದೇಶಾದ್ಯಂತ ನಮ್ಮ ಕನ್ನಡ ಸಿನಿಮಾಗಳು ಕಾಣಿಸಿಕೊಳ್ಳುತ್ತಿರುವುದು ಹಾಗೂ ಭರ್ಜರಿ ಸದ್ದು ಮಾಡುತ್ತಿರುವುದು ತುಂಬ ಖುಷಿ ತಂದು ಕೊಡುವ ವಿಚಾರವಾಗಿದೆ. ಇದು ನನಗೆ ಖುಷಿ ಕೊಟ್ಟಿದೆ. ಜೊತೆಗೆ ನಮ್ಮ ಕನ್ನಡ ಸಿನಿಮಾಗಳು ದೇಶದಾದ್ಯಂತ ಪ್ರದರ್ಶನವಾಗುತ್ತಿರುವುದು ತುಂಬಾ ಹೆಮ್ಮೆಯ ಕ್ಷಣ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ನಟಿ ಶ್ರೀಲೀಲ, ಕನ್ನಡ ಚಿತ್ರರಂಗಕ್ಕೆ ತುಂಬ ದೊಡ್ಡ ಹೃದಯವಿದೆ ಎಂದು ಹೇಳಿದ್ದಾರೆ. ನಟಿ ಶ್ರೀಲೀಲಾ ಅವರ ಕನ್ನಡಪರ ಹೆಮ್ಮೆಯ ಮಾತಗಳು ಕನ್ನಡಿಗರಿಗೆ ಸಂತಸ ತಂದು ಕೊಟ್ಟಿದೆ. ಪರಭಾಷಾ ಚಿತ್ರಗಳಲ್ಲಿ ನಟಿಸಿದ್ರೂ ಸಹ ಕನ್ನಡದ ಬಗೆಗಿನ ಅಭಿಮಾನ ಮತ್ತು ಪ್ರೀತಿಯನ್ನು ನಟಿ ಶ್ರೀಲೀಲಾ ಹೊಂದಿರುವುದು ಕನ್ನಡಿಗರಿಗೆ ಖುಷಿ ನೀಡಿದೆ. ನಟಿಯ ಅಭಿಮಾನಿಗಳು ಅವರ ಮಾತುಗಳನ್ನು ಮೆಚ್ಚಿದ್ದಾರೆ.
ಇನ್ನು ನಟಿ ಶ್ರೀಲೀಲಾ, ಬಾಬು ಮತ್ತು ಪ್ರಭಾಸ್ ಅವರ ಮುಂದಿನ ಸಿನಿಮಾಗಳಲ್ಲೂ ನಟಿಸಲು ಅವಕಾಶ ಬಂದಿದೆ ಎಂದು ಹೇಳಲಾಗಿದೆ. ಇನ್ನು ನಟಿ ಶ್ರೀಲೀಲಾ ವೈದ್ಯಕೀಯ ವಿದ್ಯಾರ್ಥಿನಿ. ಇಪ್ಪತ್ತೊಂದು ವರ್ಷದ ನಟಿ ಶ್ರೀಲೀಲಾ ತಮ್ಮ ನಟನೆ ಹಾಗೂ ಚಿತ್ರಗಳಿಂದ ಸಾಕಷ್ಟು ಹೆಸರು ಮಾಡಿದ್ದಾರೆ.
ಇದನ್ನೂ ಓದಿ: ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಬಗ್ಗೆ ಹೇಳೋಕೆ ರಶ್ಮಿಕಾಗೆ ಹಿಂಜರಿಕೆ! ಕೃತಜ್ಞತೆ ಇಲ್ಲದ ಜನರೇಷನ್ ಎಂದು ಟ್ರೋಲ್
ನಟಿ ಶ್ರೀಲೀಲಾ ಅವರಿಗೆ ಇನ್ನೂ ಒಂದು ಚಿತ್ರದ ಆಫರ್ ಬಂದು ಸೆಲೆಕ್ಟ್ ಆಗಿದ್ದಾರೆ. ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟಿಸುತ್ತಿರುವ ಜ್ಯೂನಿಯರ್ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ರಾಮ್ ಪೋತಿನೇನಿ ಅವರ ಹೊಸ ಸಿನಿಮಾದಲ್ಲೂ ನಟಿ ಶ್ರೀಲೀಲಾ ನಾಯಕಿಯಾಗಿದ್ದಾರೆ. ಅನಗನಗ ಓಕ ರಾಜು ಚಿತ್ರದಲ್ಲಿಯೂ ನಟಿ ಶ್ರೀಲೀಲಾ ನಟಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ