HOME » NEWS » Entertainment » ACTRESS SHRADDHA SRINATH FELL DOWN WHILE RIDING BULLET HERE IS THE VIDEO AE

Shraddha Srinath: ನಂದಿಬೆಟ್ಟದಲ್ಲಿ ಬುಲೆಟ್​ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್​: ವಿಡಿಯೋ ಇಲ್ಲಿದೆ..!

Shraddha Srinaths Bullet Riding Video: ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ಅಭಿನಯಿಸಿರುವ ಶ್ರದ್ಧಾ ಶ್ರೀನಾಥ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಿರುವಾಗಲೇ ಅವರು ಬುಲೆಟ್​ ಓಡಿಸಲು ಹೋಗಿ ಕೆಳಗೆ ಬಿದಿದ್ದಾರೆ.

Anitha E | news18-kannada
Updated:June 24, 2020, 4:14 PM IST
Shraddha Srinath: ನಂದಿಬೆಟ್ಟದಲ್ಲಿ ಬುಲೆಟ್​ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್​: ವಿಡಿಯೋ ಇಲ್ಲಿದೆ..!
ಶ್ರದ್ಧಾ ಶ್ರೀನಾಥ್​
  • Share this:
ಶ್ರದ್ದಾ ಶ್ರೀನಾಥ್​ ಸ್ಯಾಂಡಲ್​ವುಡ್ ಸಿನಿಮಾಗಳ ಜೊತೆಗೆ ಬಾಲಿವುಡ್​, ಕಾಲಿವುಡ್ ಹಾಗೂ ಟಾಲಿವುಡ್​ನಲ್ಲೂ ಅಭಿನಯದ ಮೂಲಕ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಇನ್ನೇನು ಶ್ರದ್ಧಾ ಅಭಿನಯದ 'ಕೃಷ್ಣ ಆ್ಯಂಡ್ ಹಿಸ್ ಲೀಲ' ಸಿನಿಮಾ ಒಟಿಟಿ ಮೂಲಕ ತೆರೆ ಕಾಣಲು ಸಿದ್ಧವಾಗಿದೆ.

ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಬೋಲ್ಡ್​ ದೃಶ್ಯಗಳಲ್ಲಿ ಅಭಿನಯಿಸಿರುವ ಶ್ರದ್ಧಾ ಶ್ರೀನಾಥ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಹೀಗಿರುವಾಗಲೇ ಅವರು ಬುಲೆಟ್​ ಓಡಿಸಲು ಹೋಗಿ ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.








View this post on Instagram





Are you even a bold female character in an Indian film if you don’t have at least one bike riding shot? 😂 It was June 2017 and we were shooting at Nandi Hills. It was an overcast day and the roads were wet. @raviperepu casually comes up to me and asks me if I know how to ride a bike and my answer was straight. “No”, I said to him “but I’ll figure it out”. And then I took out the bike for a spin, armed with the knowledge of how gear shift works and the act of balancing a two wheeler that I learnt when I was 8 years old. It was the first time I ever rode a bike and I didn’t think it was very difficult. I was relieved because I didn’t want the shots to be compromised. And then during the course of the day, this happened. Prashanth my assistant then was candidly recording. Please mind the expletives lol. Everyone rushed to help me when I fell, but deep down everyone was concerned about the bike getting scratched. Lol. Why are royal Enfields so heavy dude. #KrishnaAndHisLeela #StuffTheyDontShowYou #SatyaSatOnABikeSatyaHadAGreatFall #SabChangaHai


A post shared by Shraddha Srinath (@shraddhasrinath) on






ಹೌದು, ಶ್ರದ್ಧಾ ಬುಲೆಟ್​ ಓಡಿಸುವ ಪ್ರಯತ್ನದಲ್ಲಿ ವಿಫಲರಾಗಿದ್ದು, ಗಾಡಿ ಟರ್ನ್​ ಮಾಡುವಾಗ ಬಿದ್ದಿದ್ದಾರೆ. ಆದರೆ ಇದು ಲೆಟೆಸ್ಟ್​ ವಿಡಿಯೋ ಅಲ್ಲ. 2017ರಲ್ಲಿ ನಂದಿಬೆಟ್ಟದಲ್ಲಿ 'ಕೃಷ್ಣ ಆ್ಯಂಡ್​ ಹಿಸ್​ ಲೀಲ' ಸಿನಿಮಾದ ಚಿತ್ರೀಕರಣ ನಡೆಯುವಾಗ ತೆಗೆದ ವಿಡಿಯೋ ಎಂದು ಶ್ರದ್ಧಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.






'ಚಿತ್ರೀಕರಣ ನಡೆಯುವಾಗ ನಿರ್ದೇಶಕ ರವಿ ಪೆರ್ಪು, ನನ್ನ ಬಳಿ ಬಂದು ಬೈಕ್ ರೈಡ್​ ಬರುತ್ತಾ ಎಂದರು. ಇಲ್ಲ ಎಂದ ನಾನು, ಒಮ್ಮೆ  ಓಡಿಸಿ ನೋಡುತ್ತೇನೆ ಎಂದು ಬುಲೆಟ್​ ಸ್ಟಾರ್ಟ್​ ಮಾಡಿ ಟರ್ನ್​ ಮಾಡಲು ಹೋದೆ. ತೇವವಾಗಿದ್ದ ರಸ್ತೆ ಜೊತೆಗೆ ಬುಲೆಟ್​ ಸಖತ್ ಭಾರ ಬೇರೆ. ಬೈಕ್​ ಓಡಿಲು ಬಾರದ ನಾನು ಟರ್ನ್​ ಮಾಡಲು ಹೋದಾಗ ಬಿದ್ದೆ. ಬೈಕ್ ರೈಡ್​ ಮಾಡುವಾಗ ನನ್ನ ಸಹಾಯಕ ಪ್ರಶಾಂತ್​ ವಿಡಿಯೋ ಮಾಡಿದ್ದರು. ನಾನು 8 ವರ್ಷದವರಾಗಿದ್ದಾಗ ಬೈಕ್​ ಓಡಿಸುವುದನ್ನು ಕಲಿತ್ತಿದ್ದೆ. ಹಾಗಾಗಿ ನನಗೆ ಗೇರ್​ ಬದಲಾಯಿಸುವ ಬಗ್ಗೆ ಸ್ವಲ್ಪ ತಿಳಿದಿತ್ತು. ಆದರೆ ಬಿದ್ದಾಗ ನನಗೆ, ನನಗಿಂತ ಬೈಕ್​ ಮೇಲೆ ಎಲ್ಲಿ ಸ್ಕ್ರ್ಯಾಚ್​ ಆಗುತ್ತೋ ಅಂತ ಕೊಂಚ ಆತಂಕವಾಗಿತ್ತು. ಆದರೂ ಬುಲೆಟ್​ ಓಡಿಸುವುದು ಕಷ್ಟ ಹಾಗೂ ಅವು ತುಂಬಾ ಭಾರ' ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಶ್ರದ್ಧಾ.

ಇದನ್ನೂ ಓದಿ: Rishab Shetty: ತಮ್ಮ ಸಿನಿಮಾಗಾಗಿ ಹೊಸ ಹೀರೋಯಿನ್​ ಹುಡುಕಾಟದಲ್ಲಿ ರಿಷಭ್​ ಶೆಟ್ಟಿ..!

ಸುರೇಶ್ ಪ್ರೊಡಕ್ಷನ್ಸ್​ ನಿರ್ಮಾಣದ 'ಕೃಷ್ಣ ಆ್ಯಂಡ್ ಹಿಸ್​ ಲೀಲ' ಸಿನಿಮಾ ಒಟಿಟಿ ಮೂಲಕ ಸದ್ಯದಲ್ಲೇ ರಿಲೀಸ್ ಆಗಲಿದೆ. ಇದೇ ಕಾರಣಕ್ಕೆ ಈ ಸಿನಿಮಾದ ಪ್ರಚಾರಕ್ಕಾಗಿ ಶ್ರದ್ಧಾ ತಮ್ಮ ಇನ್​ಸ್ಟಾಗ್ರಾಂ ಮೂಲಕ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾಗೆ ಸಿದ್ದು ಜೊತೆಯಾಗಿದ್ದಾರೆ.

Kajol: ಅಪ್ಪನನ್ನು ನೆನೆದು ಭಾವುಕರಾದ ಕಾಜೋಲ್​: ಇಲ್ಲಿವೆ ಅಪರೂಪದ ಫೋಟೋಗಳು..!



ಇದನ್ನೂ ಓದಿ: ಪುಸ್ತಕಗಳೇ ಕೆಜಿಎಫ್​ ನಟಿಯ ಸ್ನೇಹಿತರಂತೆ: ವೈರಲ್​ ಆಗುತ್ತಿವೆ ಮೌನಿ ರಾಯ್​ ಫೋಟೋಗಳು..!
Published by: Anitha E
First published: June 24, 2020, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories