Shilpa Shetty: 1.6 ಕೋಟಿ ರೂಪಾಯಿ ವಂಚನೆ ದೂರು ದಾಖಲಿಸಿದ ಶಿಲ್ಪಾ ಶೆಟ್ಟಿ ತಾಯಿ

ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಮೊದಲು ಸುನಂದಾ ಶೆಟ್ಟಿ ತನ್ನ ಹಣ ವಾಪಸ್‌ ಮಾಡುವಂತೆ ಘಾರೆಯನ್ನು ಕೇಳಿಕೊಂಡಿದ್ದರು. ಆದರೆ, ಆರೋಪಿ ಹಣ ವಾಪಸ್‌ ಮಾಡಲು ವಿಫಲನಾಗಿದ್ದು, ಈ ಹಿನ್ನೆಲೆ ದೂರು ದಾಖಲಿಸಲಾಗಿದೆ ಎಂದೂ ಅಧಿಕಾರಿ ಹೇಳಿದ್ದಾರೆ.

ತಾಯಿಯೊಂದಿಗೆ ನಟಿ ಶಿಲ್ಪಾ ಶೆಟ್ಟಿ

ತಾಯಿಯೊಂದಿಗೆ ನಟಿ ಶಿಲ್ಪಾ ಶೆಟ್ಟಿ

  • Share this:

Shilpa Shetty: ಇತ್ತೀಚೆಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಚಿತ್ರಗಳಿಗಿಂತ ಬೇರೆ ಕಾರಣಗಳಿಗೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ನಟಿಯ ತಾಯಿ ವಂಚನೆ ದೂರು ದಾಖಲಿಸುವ ಮೂಲಕ ಶಿಲ್ಪಾ ಶೆಟ್ಟಿ ಹೆಸರು ಇನ್ನೊಂದು ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದೆ. ಈ ವಂಚನೆ ಕೇಸ್‌ಗೂ ಶಿಲ್ಪಾ ಶೆಟ್ಟಿಗೂ ಏನು ಸಂಬಂಧ ಅಂದ್ಕೊಂಡ್ರಾ.. ವಿವರಕ್ಕಾಗಿ ಮುಂದೆ ಓದಿ.. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯಲ್ಲಿ 1.6 ಕೋಟಿ ರೂ. ಭೂ ವ್ಯವಹಾರದಲ್ಲಿ ಆಸ್ತಿ ಏಜೆಂಟ್ ವಿರುದ್ಧ ವಂಚನೆ ಮತ್ತು ನಕಲಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮುಂಬೈ ನಗರದ ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಂಬೈನ ಉಪನಗರ ಜುಹೂ ಪೊಲೀಸ್ ಠಾಣೆಯಲ್ಲಿ ಆರೋಪಿ ಸುಧಾಕರ್ ಘರೆ ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಯು ತನ್ನ ಹೆಸರಿನಲ್ಲಿರುವ ಜಮೀನು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿಯೊಂದಿಗೆ 1.6 ಕೋಟಿ ರೂ. ಡೀಲ್‌ ಅನ್ನು ಕಾರ್ಯಗತಗೊಳಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಇನ್ನು, ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಮೊದಲು ಸುನಂದಾ ಶೆಟ್ಟಿ ತನ್ನ ಹಣ ವಾಪಸ್‌ ಮಾಡುವಂತೆ ಘಾರೆಯನ್ನು ಕೇಳಿಕೊಂಡಿದ್ದರು. ಆದರೆ, ಆರೋಪಿ ಹಣ ವಾಪಸ್‌ ಮಾಡಲು ವಿಫಲನಾಗಿದ್ದು, ಈ ಹಿನ್ನೆಲೆ ದೂರು ದಾಖಲಿಸಲಾಗಿದೆ ಎಂದೂ ಅಧಿಕಾರಿ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆತನ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜುಹೂ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಈ ಪ್ರಕರಣ ದಾಖಲಾಗಿರುವುದನ್ನು ದೃಢಪಡಿಸಿದ್ದು, ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.


ಪ್ರಾಥಮಿಕ ತನಿಖೆಯ ಪ್ರಕಾರ, ಮುಂಬೈಯಿಂದ 100 ಕಿ.ಮೀ ದೂರದಲ್ಲಿರುವ ಕರ್ಜತ್ ತಾಲೂಕಿನಲ್ಲಿ ಆರೋಪಿ ಘರೇನಿಂದ ಸುನಂದಾ ಶೆಟ್ಟಿ ಸಂಬಂಧಿತ ಭೂಮಿಯನ್ನು ಖರೀದಿಸಿದಿರುವುದು ಎರಡು ವರ್ಷದ ಹಿಂದೆ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆರೋಪಿ ಈ ಜಾಗ ತನ್ನದೆಂದು, ವಂಚನೆಯಿಂದ ದುರುದಾರರಿಗೆ ಭೂಮಿ ಮಾರಾಟ ಮಾಡಿದ್ದಾನೆ ಎಂದೂ ಪೊಲೀಸರು ಹೇಳಿದ್ದಾನೆ.


ಇದನ್ನೂ ಓದಿ: Raj Kundra ನನಗೆ ಬಲವಂತವಾಗಿ ಕಿಸ್ ಮಾಡೋಕೆ ಬಂದಿದ್ದ, ಹೆದರಿ ಬಾತ್​​ರೂಂನಲ್ಲಿ ಅಡಗಿಕೊಂಡಿದ್ದೆ; ಶಾಕಿಂಗ್ ಹೇಳಿಕೆ ನೀಡಿದ Sherlyn Chopra!

ನಂತರ ದೂರುದಾರರು ವಂಚನೆಯ ಬಗ್ಗೆ ತಿಳಿದಾಗ, ತಕ್ಷಣವೇ ನಟಿ ಶಿಲ್ಪಾ ಶೆಟ್ಟಿ ತಾಯಿ ಹಣವನ್ನು ಹಿಂದಿರುಗಿಸಲು ಘಾರೆಗೆ ಕೇಳಿಕೊಂಡಿದ್ದಾರೆ. ಆದರೆ, ಆರೋಪಿ ಹಣ ವಾಪಸ್‌ ನೀಡಲು ವಿಫಲರಾದಾಗ, ಸುನಂದಾ ಶೆಟ್ಟಿ ಪ್ರಕರಣ ದಾಖಲಿಸಲು ಮಧ್ಯಸ್ಥಿಕೆ ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಶ್ಲೀಲ ಚಿತ್ರಗಳ ನಿರ್ಮಾಣದೊಂದಿಗೆ ಸಂಪರ್ಕ ಹೊಂದಿರುವ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್‌ ಕುಂದ್ರಾ ಬಂಧನವಾಗಿರುವ ಹಿನ್ನೆಲೆ ಶಿಲ್ಪಾ ಶೆಟ್ಟಿ ಹೆಸರು ಹಲವು ದಿನಗಳಿಂದ ಹೆಚ್ಚು ಪ್ರಚಲಿತದಲ್ಲಿದೆ. ಈಗ ನಟಿಯ ತಾಯಿ ಮತ್ತೊಂದು ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದು, ದೂರು ದಾಖಲಾಗಿರುವುದರಿಂದ ಈ ಪ್ರಕರಣವೂ ಹಲವರ ಗಮನ ಸೆಳೆದಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: