ಶಿಲ್ಪಾ ಶೆಟ್ಟಿ (Shilpa Shetty) ತನ್ನ ತಂಗಿ ಶಮಿತಾ (Shamita) ಬಗ್ಗೆ ಕೆಲವು ಸ್ಫೂರ್ತಿದಾಯಕ ಮಾತುಗಳನ್ನು ಹಂಚಿಕೊಂಡಿದ್ದಾರೆ. ಏಕೆಂದರೆ ಶಮಿತಾ ಅವರು ಬಿಗ್ ಬಾಸ್ ಒಟಿಟಿಯ (Bigg Boss OTT) ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಶಮಿತಾ ಶನಿವಾರ ರಿಯಾಲಿಟಿ ಶೋನಲ್ಲಿ (ಡಿಜಿಟಲ್ ಆವೃತ್ತಿ ಮಾತ್ರ) ರಾಕೇಶ್ ಬಾಪಟ್, ಪ್ರತೀಕ್ ಸೆಹಜ್ಪಾಲ್, ದಿವ್ಯಾ ಅಗರ್ವಾಲ್ ಮತ್ತು ನಿಶಾಂತ್ ಭಟ್ ವಿರುದ್ಧ ಸ್ಪರ್ಧಿಸಲಿದ್ದಾರೆ.
ಶಿಲ್ಪಾ ಶೆಟ್ಟಿ ಅವರು, ತನ್ನ ಅಭಿಮಾನಿಗಳಿಗೆ ಶಮಿತಾಗೆ ಮತ ನೀಡಿ ವಿಜೇತರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ. ಶಮಿತಾಗೆ ಮತ ಹಾಕಲು ಜನರಿಗೆ ಸುಲಭವಾಗುವಂತೆ ಲಿಂಕ್ ಅನ್ನು ಸಹ ಶಿಲ್ಪಾ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗಿನ ಶಮಿತಾ ಪ್ರಯತ್ನಗಳನ್ನು ಶಿಲ್ಪಾ ಶ್ಲಾಘಿಸಿದರು. ಅವರು ತನ್ನ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ, "ನನ್ನ ತಂಗಿ ಅಗ್ರ 5 ರಲ್ಲಿ ಇದ್ದಾಳೆ ಮತ್ತು ನನ್ನ ತುಂಬಾ ಹೆಮ್ಮೆಯ ಸಹೋದರಿ. #BiggBoss ಮನೆಯೊಳಗಿನ ಈ ಪ್ರಯಾಣದ ಮೂಲಕ ಆಕೆಯ ಪ್ರಾಮಾಣಿಕತೆ ಮತ್ತು ಘನತೆಯು ಅವಳು ತನ್ನೊಳಗೆ ಬಂದಿರುವುದನ್ನು ನೋಡಿ ನನಗೆ ಸಂತೋಷವಾಗುತ್ತದೆ. ನೀವೆಲ್ಲರೂ ಅವಳನ್ನು ಬಿಗ್ ಬಾಸ್ ವಿಜೇತರಳನ್ನಾಗಿ ಮಾಡುತ್ತೀರಿ ಎಂದು ಭಾವಿಸುತ್ತೇವೆ, #InstaFam (sic) ಎಂದು ಶಿಲ್ಪಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/CT67QkhDQ0k/?utm_source=ig_embed&ig_rid=057be960-7539-4343-bca4-9025163636e0
ಶಮಿತಾ ಅವರ ತಾಯಿ ತನ್ನ ಕಿರಿಯ ಮಗಳನ್ನು ಹುರಿದುಂಬಿಸಲು ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದರು. ಶಮಿತಾ ಕಾರ್ಯಕ್ರಮದಲ್ಲಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದ್ದಾರೆ. ಶಮಿತಾ, ರಾಜ್ ಕುಂದ್ರಾ ವಿರುದ್ಧದ ಕಾನೂನು ಪ್ರಕರಣದ ನಂತರ ಶಿಲ್ಪಾ ಶೆಟ್ಟಿ ಯೋಗಕ್ಷೇಮದ ಬಗ್ಗೆ ಕೇಳಿದರು. ಬಳಿಕ ಮಾತನಾಡಿದ ಆಕೆಯ ತಾಯಿ, ನನ್ನ ಮಗಳು ರಾಣಿ ಇದ್ದಂತೆ. ಅವಳು ಘನತೆಯಿಂದ ಆಟ ಆಡಿದ್ದಾಳೆ ಎಂದು ಹೇಳಿದರು. ಅದರ ಜೊತೆಗೆ, ಇತರ ಸ್ಪರ್ಧಿಗಳಿಗೂ ಶುಭ ಹಾರೈಸಿದರು.
ಈ ಹಿಂದೆ, ರಕ್ಷಾ ಬಂಧನ ವಿಶೇಷ ಸಂಚಿಕೆಯಲ್ಲಿ, ಸಹೋದರಿ ಶಿಲ್ಪಾ ಶೆಟ್ಟಿ ಅವರು ಶಮಿತಾಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದರು, ಅವರು ತಮ್ಮ ಒಡಹುಟ್ಟಿದ ಬಾಂಧವ್ಯವನ್ನು ನೆನಪಿಸಿದರು. ಶಮಿತಾ ಬಿಗ್ ಬಾಸ್ ಒಟಿಟಿಗೆ ಅಚ್ಚರಿಯ ಸ್ಪರ್ಧಿಯಾಗಿ ಪ್ರವೇಶಿಸಿದರು.
ಇದನ್ನು ಓದಿ: ನಾನು ಕೆಲಸದಲ್ಲಿ ಬ್ಯುಸಿಯಾಗಿದ್ದೆ, ರಾಜ್ ಏನ್ ಮಾಡುತ್ತಿದ್ರು ಅಂತ ತಿಳಿಯಲಿಲ್ಲ ಎಂದ Shilpa Shetty
ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಪ್ರಸಾರ ಮಾಡಿದ ಆರೋಪದ ಮೇಲೆ ಬಂಧಿಸಿ ಜೈಲಿನಲ್ಲಿ ಇರಿಸಲಾಗಿದೆ. ಮುಂಬೈ ಅಪರಾಧ ವಿಭಾಗದ ಪೊಲೀಸರು ಪ್ರಕರಣ ಸಂಬಂಧ ರಾಜ್ಕುಂದ್ರಾ ವಿರುದ್ಧ ನ್ಯಾಯಾಲಯಕ್ಕೆ 1,500 ಪುಟಗಳ ಪೂರಕ ಚಾರ್ಜ್ಶೀಟ್ (Charge Sheet) ಸಲ್ಲಿಸಿದ್ದಾರೆ. ಈ ಚಾರ್ಜ್ಶೀಟ್ ನಲ್ಲಿ ನಟಿಯರಾದ ಶಿಲ್ಪಾ ಶೆಟ್ಟಿ, ಶೆರ್ಲಿನ್ ಚೋಪ್ರಾ (Sharlin Chopra) ಸೇರಿದಂತೆ 43 ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆಯನ್ನೂ ಉಲ್ಲೇಖಿಸಲಾಗಿದೆ.
ಪತಿ ರಾಜ್ ಕುಂದ್ರಾ ಅವರ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿಲ್ಪಾ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರವಣೆ ವೇಳೆ ಅವರು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ನಾನು ನನ್ನ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿರುತ್ತಿದೆ. ಪತಿ ರಾಜ್ ಕುಂದ್ರಾ ಏನು ಮಾಡುತ್ತಿದ್ದರು ಎಂದು ನನಗೆ ತಿಳಿಯಲಿಲ್ಲ ಎಂದು ಹೇಳಿದ್ದರು.
ಅಶ್ಲೀಲ ಚಿತ್ರ ನಿರ್ಮಾಣ ಸಂಬಂಧ ಜುಲೈ 19 ರಂದು
ರಾಜ್ ಕುಂದ್ರಾ ಸೇರಿ 11 ಜನರ ಬಂಧನವಾಗಿತ್ತು. ಆಗಸ್ಟ್ 2ರಂದು ಯಾವುದೇ ನೋಟಿಸ್ ನೀಡದ ಕಾರಣ ತಮ್ಮ ಬಂಧನ ಕಾನೂನುಬಾಹಿರ ಎಂದು ರಾಜ್ ಕುಂದ್ರಾ ಮತ್ತು ಆತನ ಸಹಚರ ರಯಾನ್ ಥಾರ್ಪೆ ಸಲ್ಲಿಸಿದ ಮನವಿಯ ಮೇಲೆ ಬಾಂಬೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತು. ಆಗಸ್ಟ್ 5ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜ್ ಕುಂದ್ರಾ ಮತ್ತು ಅವರ ಸಹವರ್ತಿ ಥೋರ್ಪೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ